ಅಲ್ಟ್ರಾಟೆಕ್ ಐಟಿಎಫ್ ಕಲಬುರಗಿ ಓಪನ್-2023: ಅರ್ಹತಾ ಸುತ್ತಿನ‌ ಅಂತಿಮ ಹಣಾಹಣಿಗೆ ಸುಲಭ ಪ್ರವೇಶ ಪಡೆದ ಅಗ್ರ ಆಟಗಾರರು

0
18

ಕಲಬುರಗಿ,ನ.26: ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಅಲ್ಟ್ರಾಟೆಕ್ ಐ.ಟಿ.ಎಫ್ ಕಲಬುರಗಿ ಓಪನ್‌-2023ರ ಟೂರ್ನಿಯ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಎಲ್ಲ ಆಟಗಾರರು ಸುಲಭ ಜಯದೊಂದಿಗೆ ಎರಡನೇ ಸುತ್ತಿಗೆ ಪ್ರವೇಶ ಪಡೆದರು.

ಅರ್ಹತಾ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಭರತ್ ನಿಶೋಕ್ ಕುಮಾರನ್, ಎರಡನೇ ಶ್ರೇಯಾಂಕದ ರಿಷಿ ರೆಡ್ಡಿ ಮತ್ತು 3ನೇ ಶ್ರೇಯಾಂಕದ ಶಿವಾಂಕ್ ಭಟ್ನಾಗರ್ ಅವರು ತಮ್ಮ ಮೊದಲ ಸುತ್ತಿನಲ್ಲಿ ಬೈ ಪಡೆದರು. ಅಂತರಾಷ್ಟ್ರೀಯ ಆಟಗಾರರ ಪೈಕಿ ನೇಪಾಳದ ಅಭಿಷೇಕ್ ಬಸ್ತೋಲಾ ಮತ್ತು ವಿಯೆಟ್ನಾಂನ ಹಾ ಮಿನ್ಹ್ ಡಕ್ ವು ಸೋಮವಾರ ನಡೆಯಲಿರುವ ಅರ್ಹತಾ ಸುತ್ತಿನ ಎರಡನೇ ಸುತ್ತಿಗೆ ಮುನ್ನಡೆ ಸಾಧಿಸಿದರು.

ಅರ್ಹತಾ ಪಂದ್ಯಗಳ ಮೊದಲನೇ ಸುತ್ತಿನ‌ ಪಂದ್ಯಗಳ ಫಲಿತಾಂಶಗಳು:

Contact Your\'s Advertisement; 9902492681

1-ಭಾರತ್ ನಿಶೋಕ್ ಕುಮಾರನ್ (ಬೈ); 2-ರಿಷಿ ರೆಡ್ಡಿ (ಬೈ). 3-ಶಿವಾಂಕ್ ಭಟ್ನಾಗರ್ (ಬೈ); ನೇಪಾಳದ ಅಭಿಷೇಕ್ ಬಸ್ತೋಲಾ ಅವರು ಭಾರತದ ರವಿ ಪನ್ಹಾಲ್ಕರ್ ಅವರನ್ನು 6-0, 6-0; 9-ಆರ್ಯನ್ ಶಾ ಅವರು ಸಾರ್ಥಕ್ ಸುಡೆನ್ ವಿರುದ್ಧ 6-2, 4-6, 10-7; ಅರ್ಜುನ್ ಮಹಾದೇವನ್ ಅವರು ಕಲಬುರಗಿಯ ಈಶಾನ್ ಖದೀರ್ ಅವರನ್ನು 6-0, 6-0; ಪಾರ್ಥ್ ಅಗರ್ವಾಲ್ ಅವರು ದೀಪಕ್ ಅನಂತರಾಮು ಅವರನ್ನು 7-6 (3), 6-2; 6-ಅಜಯ್ ಮಲಿಕ್ ಅವತು ತರುಣ್ ಕರ್ರಾ ಅವರನ್ನು 6-3, 7-5; ಓಗೆಸ್ ಥೇಜೊ ಜಯ ಪ್ರಕಾಶ್ ಅವರು ಲೋಹಿತಾಕ್ಷ ಬತ್ರಿನಾಥ್ ವಿರುದ್ಧ 4-6, 6-1, 10-4; ಮುನಿ ಅನಂತ್ ಮಣಿ ಅವರು ರಿಷಿತ್ ದಖಾನೆ ವಿರುದ್ಧ 6-4, 6-3; 8-ಯಶ್ ಚೌರಾಸಿಯಾ ಅವರು ಅನುರಾಗ್ ಅಗರ್ವಾಲ್ ವಿರುದ್ಧ (ವಾಕ್‌ ಓವರ್); 4-ಯಶ್ ಯಾದವ್ ಅವರು ಅನುಜ್ ಮಾನ್ 6-1, 6-2; ವಿಯಟ್ನಾಂನ 7-ಹಾ ಮಿನ್ಹ್ ಡಕ್ ವು ಅವರು ಭಾರತದ ಮೋಹನ್ ಕುಮಾರ್ ಕನಿಕೆ ವಿರುದ್ಧ 6-0, 6-0; 5-ಸಂದೇಶ್ ದತ್ತಾತ್ರೇಯ ಕುರಾಲೆ ಅವರು ಮಾನವ್ ಜೈನ್ 6-4, 6-3; ತುಷಾರ್ ಮದನ್ ಅವರು ಆದಿತ್ಯ ವರ್ಧನ್ ದುದ್ದುಪುಡಿ ವಿರುದ್ಧ 6-4, 6-1; ಭಾರತದ ಧ್ರುವ್ ಹಿರ್ಪಾರಾ ಅವರು ಬಿಕ್ರಮಜೀತ್ ಸಿಂಗ್ ಚಾವ್ಲಾ (ಯುಎಸ್ಎ) ಅವರನ್ನು 6-3, 7-6 (5)‌ ದಿಂದ ಜಯ ಸಾಧಿಸಿ ಅಂತಿಮ ಅರ್ಹತಾ ಸುತ್ತಿನ‌ ಪಂದ್ಯಕ್ಕೆ ಮುನ್ನಡೆ‌ ಸಾಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here