ಕಲಬುರಗಿಯಲ್ಲಿ ವಿದೇಶಿಯ ಪ್ರವಾಸಿಗರೊಂದಿಗೆ ವಿಶ್ವಪರಂಪರೆ ಸಪ್ತಾಹ ಆಚರಣೆ

0
125

ಕಲಬುರಗಿ: ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸರಕಾರಿ (ಸ್ವಾಯತ್ತ) ಕಾಲೇಜು ಹಾಗೂ ಇನ್‍ಟ್ಯಾಕ್ ಅಧ್ಯಾಯದ ಸಹಯೋಗದಲ್ಲಿ ಆಯೋಜಿಸಿರುವ ವಿಶ್ವಪರಂಪರೆ ಸಪ್ತಾಹ-2023 ರ ಕಾರ್ಯಕ್ರಮವನ್ನು ವಿದೇಶಿಯ ಪ್ರವಾಶಿಗರೊಂದಿಗೆ ಆಚರಿಸಲಾಯಿತು.

ಲಂಡನ್ ದೇಶದ ವಿ. ಭ್ರೂಸ್ ಅಂಟೋನಿಯಾ ಹಾಗೂ ಮಿ. ಹಯ್ಯಾಲಾರ್ ದಂಪತಿಗಳು ಕಲ್ಯಾಣ ಕರ್ನಾಟಕದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುರುವುದರೊಂದಿಗೆ ಕೆಲವು ಶೈಕ್ಷಣಿಕ ಕೇಂದ್ರಗಳಿಗೂ ಭೇಟಿ ನೀಡಿದರು. ಹೈದ್ರಾಬಾದ ಉಸ್ಮಾನಿಯಾ ವಿಶ್ವವಿದ್ಯಾಲಯ ಹಾಗೂ ಕಲಬುರಗಿಯ ಸರಕಾರಿ (ಸ್ವಾಯತ್ತ) ಕಾಲೇಜು ಪ್ರಮುಖವಾಗಿದೆ ಎಂದು ಹೇಳಿದರು. ಮಾರ್ಗದರ್ಶಕರಾದ ಡಾ. ಶಂಭುಲಿಂಗ ಎಸ್. ವಾಣಿಯವರೊಂದಿಗೆ  ಸರಕಾರಿ (ಸ್ವಾಯತ್ತ) ಕಾಲೇಜಿಗೆ ಭೇಟಿ ಕೊಟ್ಟು, ಅದೇ ಸಂದರ್ಭದಲ್ಲಿ ಆಚರಿಸುತ್ತಿರುವ ವಿಶ್ವಪರಂಪರೆ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದ ಪರಂಪರೆ ಮತ್ತು ವಿಶೇಷತೆಯನ್ನು ಕುರಿತು ಮಾತನಾಡಿದರು.

Contact Your\'s Advertisement; 9902492681

ಅಂಟೋನಿಯಾ ಮತ್ತು ಹಯ್ಯಾಲಾರ ಇಬ್ಬರು ತಮ್ಮ ಶಿಕ್ಷಣ ಭಾರತದ ಮಿಜೋರಾಂ ಮಿಷಿನರಿ ಶಾಲೆಯಲ್ಲಿ ಮುಗಿಸಿದವರು. ಈ ಇಬ್ಬರ ತಂದೆಯರು ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ತಮ್ಮ ಬಾಲ್ಯದ ಬಹುಭಾಗ ಭಾರತದಲ್ಲಿ ಕಳೆದಿದ್ದು, ತಮಗೆ ಹಿಂದಿ ಭಾಷೆ ಮಾತನಾಡಲು ಸ್ವಲ್ಪ ಸ್ವಲ್ಪ  ಬರುತ್ತದೆ ಹಾಗೂ ತಿಳಿಯುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಭ್ರೂಸ್ ಇಂಗ್ಲೆಂಡನ ಸೇನಾ ವಿಭಾಗದಲ್ಲಿ 16 ವರ್ಷ ಸೇವೆ ಸಲ್ಲಿಸ್ಸಿದ್ದು, ತಾನು ಹಲವು ಹೋರಾಟಗಳಲ್ಲಿ ಭಾಗವಹಿಸಿದ ಅನುಭವಗಳನ್ನು  ವಿದ್ಯಾರ್ಥಿಗಳಿಗೆ ವಿವರಿಸಿದರು.

ಮಿ. ಹಯ್ಯಾತ್ ಲಂಡನ್‍ನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರನ್ನಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಲಂಡನ್ನಿನಿಂದ 40 ಕಿ.ಮಿ. ದೂರದಲ್ಲಿರುವ ತನ್ನ ಹಳ್ಳಿಯಲ್ಲಿ ನೆಲೆಸಿದ್ದು, ಅಲ್ಲಿಯ ಸಾಮಾಜಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು. ಈ ಇಬ್ಬರ ಪತ್ನಿಯರು ಸಹ ತಾವು ಕಂಡ ಭಾರತದ ಕುರಿತು ಅನುಭವಗಳನ್ನು ಹಂಚಿಕೊಂಡರು.

ಡಾ. ಶಂಭುಲಿಂಗ ಎಸ್. ವಾಣಿ ವಿಶ್ವಪರಂಪರೆ ಸಪ್ತಾಹ-2023 ರ ಆಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಾವು ಸ್ಥಳಿಯರೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದೇವೆ. ಆದರೆ, ವಿದೇಶಿಯ ಪ್ರವಾಸಿಗರೊಂದಿಗೆ ಇಂತಹ ಕಾರ್ಯಕ್ರಮ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳುತ್ತಾ ನಾಲ್ಕು ಜನ ವಿದೇಶಿಯ ಪ್ರವಾಸಿಗರನ್ನು ಪರಿಚಯ ಮಾಡಿಸಿದರು. ಡಾ. ಸವಿತಾ ತಿವಾರಿ ಪ್ರಾಂಶುಪಾಲರು, ಅಧ್ಯಕ್ಷೀಯ ನುಡಿಗಳಲ್ಲಿ ಕಾಲೇಜಿನ ವಿಶೇಷತೆ ಹಾಗೂ ಇಲ್ಲಿಯ ಶಿಕ್ಷಣ ಪದ್ಧತಿಯನ್ನು ಕುರಿತು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ವಿಜಯಕುಮಾರ ಸಾಲಿಮನಿ, ಡಾ. ಡಾ. ರಾಜಕುಮಾರ ಸಲಗರ, ಡಾ.ಮಡಿವಾಳ, ಡಾ. ಸುರೇಶಕುಮಾರ ಮೂಳೆಗಾಂವ, ಇನ್‍ಟ್ಯಾಕ್ ಪದಾಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಭಾಗವಹಿಸಿದರು. ಡಾ. ಬಲಭೀಮ ಸಾಂಗ್ಲಿ ನಿರೂಪಣೆ ಹಾಗೂ ಡಾ. ಟಿ.ವಿ. ಅಡಿವೇಶ ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here