ಕೊಳಗೇರಿ ಅಭಿವೃದ್ದಿ ನಿಗಮದ ಕನೆಗಳ ಕಾಮಗಾರಿ ಕಳಪೆ ಕರವೇ ಆರೋಪ; ಮನೆಗಳ ನಿರ್ಮಾಣದಲ್ಲಿ ಯಾವುದೇ ಕಳಪೆಯಾಗಿಲ್ಲ-ಗುತ್ತೇದಾರ ಪ್ರಕಾಶ

0
12

ಸುರಪುರ: ನಗರದ ಬೀದರ-ಬೆಂಗಳೂರು ರಾಜ್ಯ ಹೆದ್ದಾರಿ ಬಳಿಯ ಸತ್ಯಂಪೇಟೆ ಕ್ರಾಸ್ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ಕೊಳಗೇರಿ ಅಭಿವೃದ್ಧಿ ನಿಗಮದ ಅಡಿಯಲ್ಲಿನ ಮನೆಗಳ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆಯಿಂದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ದೂರು ಸಲ್ಲಿಸಲಾಗಿದೆ.

ಒಂದು ಮನೆ ನಿರ್ಮಾಣಕ್ಕೆ ಸರಕಾರ 6 ಲಕ್ಷ 50 ಸಾವಿರ ರೂಪಾಯಿಗಳ ಅನುದಾನ ನೀಡುತ್ತಿದೆ,ಆದರೆ ಈಗ ನಡೆದ ಕಾಮಗಾರಿ ಸುಮಾರು 2 ಲಕ್ಷ 50 ಸಾವಿರ ರೂಪಾಯಿಗಳಲ್ಲಿ ಮುಗಿಸಲಾಗುತ್ತಿದೆ, ಮನೆಗಳ ನಿರ್ಮಾಣಕ್ಕೆ ಬಳಕೆ ಮಾಡಲಾದ ಕಚ್ಚಾ ವಸ್ತುಗಳು ಕಳಪೆ ಗುಣಮಟ್ಟ ದಿಂದ ಕೂಡಿವೆ,ಮರಳು,ಕಬ್ಬಿಣ ಮತ್ತು ಸಿಮೆಂಟ್ ಇಟ್ಟಿಗೆಗಳು ಇಲ್ಲಿಯೇ ತಯಾರಿಸಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು,ಇದರ ಕುರಿತು ಸಂಬಂಧಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕ್ರಮ ಕೈಗೊಳ್ಳುತ್ತಿಲ್ಲ,ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಕುಮಾರಗೌಡ,ದುರ್ಗಪ್ಪ ಡೊಣ್ಣಿಗೇರ,ಕಾಸಿಂ ದೊಡ್ಮನಿ,ಹಣಮಂತ ಕುಂಬಾರಪೇಟ,ಕಾಸಿಂ ಅಮ್ಮಾಪುರ ಇತರರಿದ್ದರು.

Contact Your\'s Advertisement; 9902492681

ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರ ಪ್ರಕಾಶ ಸಜ್ಜನ್ ಅವರು ಈ ಕುರಿತು ವಿವಿರಣೆಯನ್ನು ನೀಡಿ,ಮನೆಗಳ ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಕಳಪೆಯಾಗಿಲ್ಲ,ಅಂದಾಜು ಪತ್ರಿಕೆ(ಎಸ್ಟಿಮೆಟ್)ಯಲ್ಲಿ ತಿಳಿಸಿದಂತೆ ಮನೆಗಳನ್ನು ನಿರ್ಮಿಸಲಾಗುತ್ತಿದೆ,ಈಗಾಗಲೇ ಥರ್ಡ್ ಪಾರ್ಟಿ ಬಂದು ಪರಿಶೀಲನೆ ಮಾಡಿ ಹೋಗಿ ವರದಿ ಕೊಟ್ಟಿದ್ದಾರೆ.ಸಂಘಟನೆಯವರು ಹೇಳಿದಂತೆ ಮನೆ ನಿರ್ಮಾಣಕ್ಕೆ ಆರುವರೆ ಲಕ್ಷ ಇಲ್ಲಾ,5ಲಕ್ಷ 95 ಸಾವಿರ ರೂಪಾಯಿಗಳಲ್ಲಿ ಒಂದು ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮನೆಗಳ ನಿರ್ಮಾಣದಲ್ಲಿ ಯಾವುದೇ ಕಳಪೆಯಾಗಿಲ್ಲ,ಗುಣಮಟ್ಟದ ವಸ್ತುಗಳನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ,ಸಂಘಟನೆಯವರು ಮಾಡುವ ಆರೋಪ ಸುಳ್ಳು,ಅಧಿಕಾರಿಗಳು ಮನೆಗಳ ನಿರ್ಮಾಣದ ನಂತರ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡುತ್ತಾರೆ. -ಪ್ರಕಾಶ್ ಸಜ್ಜನ್ ಕಾಮಗಾರಿ ಗುತ್ತಿಗೆದಾರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here