ಕರವೇ ರಾಜ್ಯೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0
21

ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಇದೇ ನವಂಬರ್ 30 ರಂದು ಸಂಜೆ ನಗರದ ರಂಗಂಪೇಟೆಯ ದೊಡ್ಡ ಬಜಾರದಲ್ಲಿ ಕರವೇ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ತಿಳಿಸಿದರು.

ನಗರದ ಕೆಂಭಾವಿ ರಸ್ತೆಯ ಅಪ್ಪಾಜಿ ಕಾಂಪ್ಲೆಕ್ಸ್‍ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ,ಪ್ರತಿ ವರ್ಷ ಅದ್ಧೂರಿ ಕಾರ್ಯಕ್ರಮ ಆಚರಿಸಲಾಗುತ್ತಿತ್ತು,ಈಬಾರಿ ರಾಜ್ಯದಲ್ಲಿ ಬರಗಾಲ ಇರುವ ಕಾರಣ ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ನವಂಬರ್ 30ರ ಸಂಜೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ:ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಹಲ್ ರೋಜಾದ ಯಮನೂರಪ್ಪ ಮಠದ ಮಲ್ಲಿಕಾರ್ಜುನ ಮುತ್ಯ ವಹಿಸಿಕೊಳ್ಳಲಿದ್ದು,ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ರಾಜಾ ಹನುಮಪ್ಪ ನಾಯಕ (ತಾತಾ) ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದು,ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸುವರು,ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಜ್ಯೋತಿ ಬೆಳಗಿಸುತ್ತಾರೆ,ಸಾಂಸ್ಕøತಿಕ ಕಾರ್ಯಕ್ರಮಕ್ಕೆ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ,ರಾಜಾ ಹರ್ಷವರ್ಧನ ನಾಯಕ ಚಾಲನೆ ನೀಡಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಸಂಘಟನೆ ಜಿಲ್ಲಾಧ್ಯಕ್ಷ ಟಿ.ಎನ್ ಭೀಮುನಾಯಕ ವಹಿಸಲಿದ್ದಾರೆ.

ಅಲ್ಲದೆ ಡಾ:ಸುರೇಶ ಸಜ್ಜನ್,ವಿಠ್ಠಲ್ ಯಾದವ್,ತಹಸೀಲ್ದಾರ್ ಕೆ.ವಿಜಯಕುಮಾರ,ಕಿಶೋರ ಚಂದ್ ಜೈನ್,ವೇಣುಮಾಧವ ನಾಯಕ,ವೆಂಕೋಬ ಯಾದವ್,ಡಿವೈಎಸ್ಪಿ ಜಾವಿದ್ ಇನಾಂದಾರ್,ಟಿಹೆಚ್‍ಓ ಡಾ:ಆರ್.ವಿ ನಾಯಕ,ಬಲಭೀಮ ನಾಯಕ ಬೈರಿಮಡ್ಡಿ,ಸೋಮನಾಥ ನಾಯಕ ಡೊಣ್ಣಿಗೇರ,ಮಹೇಶ ಪಾಟೀಲ್ ಸೇರಿದಂತೆ ನಗರಸಭೆ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಶರಣಯ್ಯ ಸ್ವಾಮಿ ಬಳ್ಳೂಂಡಗಿಮಠ,ದೇವಾಪುರ ಬಿಲ್ವಿದ್ದೆ ಪರಿಣಿತ ತಂಡದ ಪದಕ ವಿಜೇತರು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಸವರಾಜ ದೇವಾಪುರ,ಅಕ್ಟೋಬರ್ ತಿಂಗಳ ಉತ್ತಮ ಕರ್ತವ್ಯ ನಿರ್ವಹಿಸಿದ ಪ್ರಶಸ್ತಿ ಪುರಸ್ಕøತ ಪೊಲೀಸ್ ಪೇದೆ ಗುರುಸ್ವಾಮಿ ನಾಯಕ ಇವರಿಗೆ ವಿಶೇಷ ಸನ್ಮಾನ ಹಾಗೂ ಈ ಬಾರಿ 19ನೇ ವರ್ಷದ ಕರವೇ ರಾಜ್ಯೋತ್ಸವ ಆಗಿರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 19 ಜನರಿಗೆ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯ ನಮ್ಮ ಕಾರ್ಯಕರ್ತರು ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಭಿತ್ತಿ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ಭೀಮು ನಾಯಕ ಮಲ್ಲಿಭಾವಿ,ಶ್ರೀಶೈಲ ಕಾಚಾಪುರ,ಮಲ್ಲು ವಿಷ್ಣು ಸೇನಾ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here