ಶಹಾಪುರ ಬಸ್ ಪಲ್ಟಿ: ಬಸ್ ಡ್ರೈವರ್ ಸೇರಿ ಮೂರು ಸಾವು

0
289

ಶಹಾಪುರ: ಶಹಾಪುರದಿಂದ ಕೆಂಭಾವಿಗೆ ಹೊರಟ್ಟದ್ದ ಕೆ,ಎಸ್,ಆರ್,ಟಿ,ಸಿ,ಬಸ್ ಸುರುಪುರ ತಾಲ್ಲೂಕಿನ ಏವೂರ ಸಮೀಪದಲ್ಲಿ ಪಲ್ಟಿಯಾಗಿ ಬಸ್ ಡ್ರೈವರ ಸಮೇತ ಮತ್ತೋರ್ವ ಮಹಿಳೆ ಮೃತಪಟ್ಟ ಘಟನೆ ಇಂದು ಅಮಾವಸೆಯ ಸಂಜೆ ಸಮಯದಲ್ಲಿ ನೆಡದಿದೆ.

Contact Your\'s Advertisement; 9902492681

ಶಹಾಪುರ ಡಿಪೋ ಬಸ್ ಕಲಬುರ್ಗಿಯಿಂದ ಶಹಾಪುರಕ್ಕೆ ಬಂದು ಮರಳಿ ಕೆಂಭಾವಿಗೆ ಹೊಗುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸ್ಥಳದಲ್ಲೆ ಬಸ್ ಡ್ರೈವರ್ ದವಲಸಾಬ್ ಬಸ್ ಡಿಪೋ ಶಹಾಪುರ ಘಟಕ ಚಾಲಕ ಸಾವನ್ನಪಿದ್ದಾನೆ, ಆಸ್ಪತ್ರೆಗೆ ಕರೆದೊಯುವಾಗ ಪದ್ದಮ್ಮ ಶಿವಮಾನ್ಯಪ್ಪ ಸಾ,ಪರಸನಳಿ [30] ಎನ್ನವ ಪ್ರಯಾಣಿಕ ಮಹಿಳೆ ಮತ್ತು ಓರ್ವ ವೃದ್ದ ಮೃತಪಟ್ಟಿದ್ದಾರೆ.

ಗ್ರಾಮಸ್ಥರ ಹರಸಾಹಸದಿಂದ ಒಳಗಡೆ ಸಿಕ್ಕಿಬಿದ್ದ ಪ್ರಯಾಣಿಕರನ್ನು ಹೊರತೆಗೆಯಲಾಯಿತು, ತೀವ್ರ ಗಾಯಗೊಂಡ ಸುಮಾರು 10ಕ್ಕೂ ಹೆಚ್ಚು ಜನ ಪ್ರಯಾಣಿಕರು ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರಲ್ಲಿ ತೀವ್ರ ಗಾಯಗೊಂಡ ಬಸ್ ಕಂಡಕ್ಟರ್ ಶುಭಾಶ ಸೇರಿದಂತೆ 7 ಜನರನ್ನು ಕಲಬುರ್ಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಕಳಿಸಲಾಗಿದ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದು, ಕೆಂಭಾವಿ ಪೊಲೀಸರು ತನಿಖೆ ನಡೆಸುತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here