ಕಲಬುರಗಿ: ದೇಶದಲ್ಲಿ ಹಲವಾರು ಭಾಷೆಗಳಿವೆ, ಜನಾಂಗಳಿವೆ, ಧರ್ಮಗಳಿವೆ, ಹಲವಾರು ಬುಡಕಟ್ಟುಗಳವೆ ಆ ಕಡೆ ಮಣಿಪುರ ಈ ಕಡೆ ಕರ್ನಾಟಕ ಮತ್ತು ನಾಗಲ್ಯಾಂಡ ಪಕ್ಕದಲ್ಲಿ ಆಂಧ್ರ ಪ್ರದೇಶವಿದೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನೆಲ. ನಾವೆಲ್ಲರೂ ಈ ದೇಶಕ್ಕೆ ಈ ನೆಲಕ್ಕೆ ಸೇರಿದವರು ಈ ದೇಶ ದುಡಿಯುವಂತಹ ವರ್ಗದಕ್ಕೆ ಸೇರಿದ್ದು. ದೇಶದಲ್ಲಿ ಯಾವುದೇ ಒಂದು ಭಾಷೆ, ಧರ್ಮ, ಸಂಸ್ಕೃತಿ ಒಂದು ಆಡಳಿತಕ್ಕೆ ಸೇರಿದಲ್ಲ ಎಂದು ಎಸ್.ಎಫ್ಐ ಹೆದಲಿಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ನೀತಿಶ್ ನಾರಾಯಣ್ ಹೇಳಿದರು.
ನಗರದ ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ ಶಿಕ್ಷಣದ ಹಕ್ಕಿಗಾಗಿ ಮತ್ತು ಘನತೆಯ ಭವಿಷ್ಯಕ್ಕಾಗಿ ಎಸ್ಎಫ್ಐನಿಂದ ವಿದ್ಯಾರ್ಥಿನಿಯರ 2 ದಿನದ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ನಾವು SFI ಸಂಘಟನೆಯವರು ಈ ನೆಲದ ವೈವಿಧ್ಯತೆಯನ್ನು ಎತ್ತಿ ಹಿಡಿಯುವವರು. ಮಹಿಳೆಯರು ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ಖಂಡಿಸುತ್ತೇವೆ. ಆ ಕಾರಣಕ್ಕಾಗಿ ನಾವುಗಳು ನಮ್ಮ ಜೀವನವನ್ನು ಸಂಘಟನೆಗೆ ಅರ್ಪಿಸಿಕೊಂಡಿದ್ದೇವೆ. SFI ಅಂದ್ರೆ ವಿದ್ಯಾರ್ಥಿಗಳ ಹಿತ್ತಕ್ಕಾಗಿ ಅರ್ಪಿಸಿಕೊಂಡ ಸಂಘಟನೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರಾಗಿ ಆಗಮಿಸಿದ ದಿಪ್ಸೀತಾ ಧರ್ ಹಸಕಾರ್ಯದರ್ಶಿ SFI ರಾಜ್ಯ ಕಾರ್ಯದರ್ಶಿ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಕ್ಕಳು ಮತ್ತೆ ಮಹಿಳೆಯರು ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ, ಮಹಿಳೆಯರು ಯಾವ ಉಡುಪು ಉಡಬೇಕು ಯಾವ ಆಹಾರ ಇತಿನ್ನಬೇಕು ಸಂಗಾತಿಯಾಗಿ ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುವದನ್ನ ಆಳುವ ಸರ್ಕಾರ ನಿರ್ಧರಿಸುತ್ತಿದ್ದೆ. ಅದನೆಲ್ಲ ನಿರ್ಧರಿಸುವುದಕ್ಕೆ ಇವರ ಯಾರು ಎಂಬ ಪ್ರಶ್ನೆಯನ್ನು ಎತ್ತಿದರು.
ಈ ಸಮಾವೇಶಕ್ಕೆ ಉದ್ಘಾಟಕರಾಗಿ ಬಂದ ಶಿವಶರಣಪ್ಪ ಮೂಳೆಗಾಂವ್ ಅವರು SFI ಎಂದರೆ ವಿದ್ಯಾರ್ಥಿಗಳು ಕನಸಿಗೆ ರೆಕ್ಕೆ ಕಟ್ಟುವುದಾಗಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ಒದಗಿಸುವ ಸಂಘಟನೆ, ವಿದ್ಯಾರ್ಥಿಗಳನ್ನ ಗಟ್ಟಿಗೊಳಿಸುವ ಸಂಘಟನೆಯಾಗಿದೆ. ನಾನು ಕೂಡ SFI ಸಂಘಟನೆ ಮೂಲಕನೆ ಹೋರಾಟಕ್ಕೆ ಬಂದವನೆಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಈ ಸಮಾವೇಶದಲ್ಲಿ ಡಾ ಮೀನಾಕ್ಷಿ ಬಾಳಿ, ಭೀಮನಗೌಡ ಸುಂಕೇಶ್ವರಹಾಳ, ಅಮರೇಶ ಕಡಗದ , ಡಾ ಶರಣಪ್ಪ ಸೈದಾಪೂರ, ಡಾ ಸಂತೋಷ ಹುಂಪ್ಳಿ, ಬೃಂದಾ ಧನ್ನಿ, ಮಾಲಾಶ್ರೀ ಮತ್ತಿಮೂಡ ಉಪಸ್ಥಿತರಿದ್ದರು. ಸುಜಾತ ನಿರ್ವಹಿಸಿದರೆ ಮೇಘಾ ಸ್ವಾಗತಿಸಿದರು ಸುಕನ್ಯಾ ವಂದನಾರ್ಪಣೆ ಮಾಡಿದರು.
” ಶಿಕ್ಷಣದ ಹಕ್ಕಿಗಾಗಿ ಮತ್ತು ಘನತೆಯ ಭವಿಷ್ಯಕ್ಕಾಗಿ” ಇಂದು ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶಕ್ಕೆ ಮೆರವಣಿಗೆ ಮೂಲಕ ಚಾಲನೆ ನೀಡಲಾಯಿತು.
ತೀಮ್ಮಾಪುರಿ ಸರ್ಕಲನಿಂದ ಜಗತ್ ಸರ್ಕಲ್ ವರೆಗೂ ಮೆರವಣಿಗೆ ಸಾಗಿ ಬಂತು. ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ದಾರಿಯುದ್ದಕ್ಕೂ ಘೋಷಣೆ ಕೂಗಿವ ಮೂಲಕ ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟಿದ್ದರು.