ಅಂಬೇಡ್ಕರ್ ಅವರ ಕಾರ್ಯಕ್ರಮಗಳು ಚಿಂತನೆಗೆ ವೇದಿಕೆಯಾಗಲಿ

0
19

ಶಹಾಬಾದ: ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಚಂದ್ರಕಾಂತ ಗೊಬ್ಬೂರಕರ ಮಾತನಾಡಿ ಎಲ್ಲ ಧರ್ಮ, ಜಾತಿಗಳಿಗೆ ಸಮಾನತೆ, ಸಮಾನ ಅವಕಾಶ ನೀಡಿದ ಸಂವಿಧಾನ ಕರ್ತೃ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯದೆ ಅವರ ಬದುಕು, ಆದರ್ಶ, ತತ್ವಗಳ ಗಂಭೀರ ಚಿಂತನೆಗಳ ಚರ್ಚೆಗೆ ವೇದಿಕೆಯಾಗಬೇಕು ಎಂದು ಹೇಳಿದರು.

Contact Your\'s Advertisement; 9902492681

ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸವನ್ನು ಪಡೆದ ಅಂಬೇಡ್ಕರ್ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೇರಿಕಾ, ಇಂಗ್ಲೆಂಡ್, ಐರ್ಲೆಂಡ್ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ಸಂವಿಧಾನ ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಇದೆ ಎಂದರು.

ಸಂಜಯ ವಿಟಕರ ಮಾತನಾಡಿ, ವ್ಯವಸ್ಥಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲ ವರ್ಗದ ಜನ, ವಿಶೇಷವಾಗಿ ದಲಿತರು ಸಾಗಬೇಕಿದೆ ಎಂದರು.

ಮಹಾದೇವ ಗೊಬ್ಬೂರಕರ, ಸಿದ್ರಾಮ ಕುಸಾಳೆ, ಕನಕಪ್ಪ ದಂಡಗುಲಕರ, ಬಸವರಾಜ ಬಿರಾದಾರ, ಅಪ್ಪಾರಾವ ನಾಗಶೆಟ್ಟಿ, ತಿಮ್ಮಣ್ಣ ಕುರ್ಡೆಕರ, ರಾಜು ಕುಂಬಾರ, ಭೀಮಯ್ಯ ಗುತ್ತೆದಾರ, ಜಗದೇವ ಸುಬೆದಾರ, ದತ್ತಾತ್ರೇಯ ಘಂಟೆ, ಶ್ರೀನಿವಾಸ ದೇವಕರ, ಅಂಬಾದಾಸ ಗುರೂಜಿ, ಅನೀಲ ದೊಡ್ಡಮನಿ, ದೊಡ್ಡಪ್ಪ ಹೊಸಮನಿ, ಸಿದ್ದು ಮಾಣಿಕ, ನಿಂಗಾರೆಡ್ಡಿ, ಜಾಕೀರ ಹುಸೇನ, ಸಾಬಣ್ಣ ಲಾಡಲಾಪುರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸದಾನಂದ ಕುಂಬಾರ ನಿರೂಪಿಸಿ, ಸ್ವಾಗತಿಸಿದರು, ಮೋಹನ ಹಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here