ಮಂಡ್ಯ,ನಾಗಮಂಗಲ: ತಾಲೂಕಿನ ಎಸ್ ಎಸ್ ಕೆ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ನೂತನ ವರ್ಷದ 2020ರ ಕ್ಯಾಲೆಂಡರನ್ನು ನಾಗಮಂಗಲ ಪೊಲೀಸ್ ವಿಭಾಗದ ಡಿವೈಎಸ್ಪಿ ವಿಶ್ವನಾಥ್ ಬಿಡುಗಡೆಗೊಳ್ಳಿಸಿದರು.
ನಂತರ ಮಾತನಾಡಿದ ರವರು ಇಂದಿನ ದಿನದಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಮಕ್ಕಳಿಗೆ ಶಿಕ್ಷಣ ಒದಗಿಬೇಕಾದ್ದು ನಮ್ಮ ಕರ್ತವ್ಯವಾಗಿದೆ ಹಲವಾರು ವಿದ್ಯಾಸಂಸ್ಥೆಗಳು ಹಾಗೂ ಸರ್ಕಾರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದೆ ನಿಮ್ಮ ಸಮಾಜ ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ವೃತ್ತಿಯ ಜೊತೆಗೆ ಸಮಾಜದ ಪ್ರಮುಖ ಹುದ್ದೆಗಳನ್ನು ಏರಲು ಶಿಕ್ಷಣ ಅತ್ಯಗತ್ಯ ಸಂಘ ಸಂಸ್ಥೆಯಲ್ಲಿ ಸಂಘಟನೆಯಿಂದ ಮಾತ್ರ ನಿಮ್ಮ ಸಮಾಜದ ಏಳಿಗೆ ಸಾಧ್ಯ ಒಬ್ಬ ವ್ಯಕ್ತಿಗೆ ತೊಂದರೆಯಾದಾಗ ನ್ಯಾಯಯುತವಾಗಿ ಎಲ್ಲರೂ ಕೂಡ ಆತನ ಬೆಂಬಲಕ್ಕೆ ನಿಲ್ಲಬೇಕು ನಾವು ಕೂಡ ಕಾನೂನುಬದ್ಧವಾಗಿ ನಿಮ್ಮ ನೆರವಿಗೆ ನಿಲ್ಲುತ್ತೇವೆ ಎಂದರು.
ವಕೀಲರಾದ ಕಂಚಿನಹಳ್ಳಿ ಲಕ್ಷ್ಮೀ ಸಾಗರ್ ಮಾತನಾಡುತ್ತಾ ಕಡಿಮೆ ಸಂಖ್ಯೆಯಲ್ಲಿರುವ ನಮ್ಮ ಸಮಾಜ ವಿಸ್ತಾರವಾಗಿ ಬೆಳೆಯಬೇಕಾದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ನಮ್ಮ ಸಮಾಜದ ಬಡವರು ಏಳಿಗೆಗಾಗಿ ದುಡಿಯಬೇಕು ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಿ ಗಣ್ಯ ವ್ಯಕ್ತಿಯಾಗಿ ರೂಪಿಸಬೇಕಾದ ನಮ್ಮ ಕರ್ತವ್ಯ ಸಂಘದ ಏಳಿಗೆಗಾಗಿ ಪ್ರತಿಯೊಬ್ಬರು ಕೈಜೋಡಿಸಿ ದುಡಿಯಬೇಕೆಂದು ತಿಳಿಸಿದರು.
ಗಣ್ಯರಿಂದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಹಾಗೂ ಡಿವೈಎಸ್ಪಿ ವಿಶ್ವನಾಥ್ ರವರಿಗೆ ಎಸ್ ಎಸ್ ಕೆ ವಿಶ್ವಕರ್ಮ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗಮಂಗಲ ಎಸ್ ಎಸ್ ಕೆ ವಿಶ್ವಕರ್ಮದ ಅಧ್ಯಕ್ಷರಾದ ಕೃಷ್ಣಚಾರಿ ದಿವಾಕರ್ ವಿಶ್ವಮೂರ್ತಿ ಜ್ಞಾನಮೂರ್ತಿ ಡಿವಿ ರಾಮಾಚಾರಿ ಸಂಘದ ಸದಸ್ಯರು ನಿರ್ದೇಶಕರು ಹಾಜರಿದ್ದರು.