ಕೊಲೆಯಾದ ವಕೀಲ ಮನೆಗೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಭೇಟಿ

0
50

ಕಲಬುರಗಿ: ಸದ್ಯ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಬಿಲ್‌ ವಿಚಾರವಾಗಿ ತಾವು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯುವುದಾಗಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ನಗರದ ಸಾಯಿ ಮಂದಿರ ಸಮೀಪದ ಅಪಾರ್ಟ್‍ಮೆಂಟ್ ಬಳಿ ಗುರುವಾರ ಹಾಡುಹಗಲೇ ನಡೆದ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಕೀಲರ ಸಂಘದ ಸದಸ್ಯರೊಂದಿಗೆ ಜಿಲ್ಲಾ ನ್ಯಾಯಾಲಯ ಆವಣದಲ್ಲಿರುವ ಬಾರ್‌ ಅಸೋಸಿಯೇಷನ್‌ ಸಭಾಂಗಣದಲ್ಲಿ ಸಭೆ ನಡೆಸಿದ ಶಾಸಕರು ವಕೀಲರಿಗೆ ರಕ್ಷಣೆ ನೀಡುವುದು ಅತ್ಯಂತ ಜರೂರಾಗಿದೆ ಎಂಬುದಕ್ಕೆ ಕಲಬುರಗಿಯಲ್ಲಿ ನಡೆದಂತಹ ಕೊಲೆಯೇ ಕನ್ನಡಿ ಹಿಡಿದಿದೆ ಎಂದು ಹೇಳಿದ್ದಾರೆ.

Contact Your\'s Advertisement; 9902492681

ಸದ್ಯ ಕಕ್ಷಿದಾರರ ಪರ ವಾದಿಸುವ ವಕೀಲರಿಗೆ ಹೆದರಿಸುವ ಅವ್ಯವಸ್ಥೆ ನಿರ್ಮಾಣವಾಗಿದೆ. ವಕೀಲರು ತಮ್ಮ ವೃತ್ತಿಗೆ ತಕ್ಕಂತೆ ಕಕ್ಷೀದಾರರ ಪ ವಾದ ಮಂಡಿಸಲೇಬೇಕು. ಅದನ್ನೇ ಸೇಡಿನ ಪ್ರತಿಕಾರದ ಅಂಶವಾಗಿ ಪರಿಗಣಿಸಿ ವಕೀಲರನ್ನೇ ಗುರಿಯಾಗಿಸಲಾಗುತ್ತಿದೆ. ಇದು ಸರಿಯಲ್ಲವೆಂದು ಕಳವಳ, ಆತಂಕ ಹೊರಹಾಕಿರುವ ಶಾಸಕ ಅಲ್ಲಂಪ್ರಭು ಪಾಟೀಲು, ವಕೀಲರಿಗೆ ರಕ್ಷಣೆ ಜರೂರಾಗಿದೆ. ಹೀಗಾಗಿ ಮಸೂದೆ ಮಂಡನೆ ವಿಷಯವಾಗಿ ಬೆಳಗಾವಿ ಸದನ ಕಲಾಪದಲ್ಲಿ ತಾವು ಗಮನ ಸೆಳೆಯೋದಾಗಿ ವಕೀಲರಿಗೆ ಭರವಸೆ ನೀಡಿದ್ದಾರೆ.

ಕೊಲೆಯಾದ ವಕೀಲ ಈರಣ್ಣಗೌಡರ ಕುಟುಂಬಕ್ಕೆ ಶಾಸಕರ ಸಾಂತ್ವನ, ಗುರುವಾರ ಭೀಕರವಾಗಿ ಕೊಲೆಗೀಡಾದ ವಕೀಲ ಈರಣ್ಣಗೌಡರ ಮನೆಗೆ ಭೇಟಿ ನೀಡಿದ ಶಾಸಕ ಅಲ್ಲಂಪ್ರಭು ಪಾಟೀಲರು ಕುಟುಂಬ ಸದಸರಿಗೆ್ಯ ಸಾಂತ್ವನ ಹೇಳಿದ್ದಾರೆ.

ಕೊಲೆಗಡುಕರು ಯಾರೇ ಇರಲಿ, ಅದೆಷ್ಟೇ ಪ್ರಭಾವಿ ಇರಲಿ, ಅವರಿಗೆ ಬಂಧಿಸಲಾಗುತ್ತದೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಕೊಲೆಯ ಹಿಂದೆ ಇನ್ನೂ ಯಾರಾದರೂ ಸಂಚು ಹೂಡಿದ್ದರೆ ಅಂತಹವರನ್ನು ಬಂಧಿಸುವ ಕೆಲಸ ಪೊಲೀಸರು ಮಾಡುತ್ತಾರೆ. ತನಿಖೆ ಪಕ್ಕಾ ಆಗಬೇಕು, ತಪ್ಪಿತಸ್ಥರೆಲ್ಲರಿಗೂ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಪೊಲೀಸರು ಅಗತ್ಯ ಕ್ರಮ ಜರುಗಿಸಬೇಕು ಎಂದು ಶಾಸಕರು ಆಗ್ರಹಿಸಿದರು.

ಅನೇಕ ಮಾಫಿಯಾಗಳಿಂದ ವಕೀಲರು ತಮ್ಮ ವೃತ್ತಿಯನ್ನು ನಿರ್ಭಯವಾಗಿ ಮಾಡಲಾಗದೆ ತೊಂದರೆ ಎದುರಸುವಂತಗಿದೆ. ಇದು ನಿಲ್ಲಲೇಬೇಕು. ಕಾಂಗ್ರೆಸ್‌ ಪಕ್ಷತ್ರದ ಸರಾರ ಸದಾ ವಕೀಲರ ಪರವಾಗಿದೆ. ನ್ಯಾಯಕ್ಕಾಗಿ ಹೋರಾಡುವ ವಕೀಲರನ್ನೇ ಗುರಿಯಾಗಿಸಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಅಭಿಪ್ರಾಯಪಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here