ಪ್ರತಿಶತ ಮತದಾನ ಮಾಡಲು ಸಿಇಓ ಮೀನಾ ಕರೆ; ಕಸಾಪ ಕಾವ್ಯ ಕುಂಚದಲ್ಲಿ ಅರಳಿದ ಮತದಾನ ಜಾಗೃತಿ

0
15

ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕನ್ನಡ ಭವನದ ಆವರಣದಲ್ಲಿ ಸಾಹಿತ್ಯ ಮಂಟಪದಲ್ಲಿ ಬುಧವಾರ ನಡೆದ ಮನ ಸಾಕ್ಷಿಯ ಮತ ದೇಶಕ್ಕೆ ಹಿತ ಎನ್ನುವ ಮತ ಕಾವ್ಯ ಎಂಬ ಜನಜಾಗೃತಿಯ ಕವಿಗೋಷ್ಠಿ ನೆರೆದಿದ್ದ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.

ಯಾವುದೇ ಆಸೆ, ಆಮೀಷೆಗಳಿಗೆ ಒಳಗಾಗದೇ, ಜಾತಿ, ಮತ, ಧರ್ಮಗಳ ಜಾಡಿಗೆ ಒಳಗಾಗದೇ ಉತ್ತಮ ವ್ಯಕ್ತಿತ್ವದ ಅಭ್ಯರ್ಥಿಗೆ ಗುಪ್ತ ಮತದಾನದ ಮೂಲಕ ಚುನಾಯಿಸಬೇಕೆಂಬ ಸಂದೇಶ ಸಾರುವ ಭಾಗವಹಿಸಿದ್ದ ಕವಿಗಳಾದ ನರಸಿಂಗರಾವ ಹೇಮನೂರ, ಶಾಂತಾ ಪಸ್ತಾಪೂರ, ಕಲ್ಲಯ್ಯಾ ಸ್ಥಾವರಮಠ, ಶಕುಂತಲಾ ಪಾಟೀಲ, ಪ್ರಭು ನಿಷ್ಠಿ ನಿಡಗುಂದಾ, ಡಾ. ಪರ್ವಿನ್ ಸುಲ್ತಾನಾ, ರೇಣುಕಾ ಡಾಂಗೆ, ರಾಜೇಂದ್ರ ಝಳಕಿ, ಗಂಗಮ್ಮಾ ನಾಲವಾರ, ಸಂತೋಷ ಕರಹರಿ, ಸಿದ್ಧರಾಮ ರಾಜಮಾನೆ, ರವೀಂದ್ರ ಬಿ.ಕೆ., ಸುರೇಖಾ ಜೇವರ್ಗಿ, ಪ್ರಭುಲಿಂಗ ಮೂಲಗೆ, ದತ್ತರಾಜ ಕುಲಕರ್ಣಿ, ರಮೇಶ ಬಡಿಗೇರ, ಸೋಮಶೇಖರ ಹಂಚನಾಳ ಅವರು ವಾಚಿಸಿದ ಕವಿತೆಗಳು ಮತದಾನ ಜಾಗೃತಿಗೆ ಕನ್ನಡಿಯಂತಿದ್ದವು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ನ ಸಿಇಓ ಆದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಮಾತನಾಡಿ, ಮತದಾನ ನಮ್ಮ ಸಂವಿಧಾನಿಕ ಹಕ್ಕು. ಅದನ್ನು ಯಾವುದೇ ಆಸೆ-ಆಮಿಷೆಗಳಿಗೆ ಬಲಿಯಾಗದೇ ಪವಿತ್ರವಾದ ಹಕ್ಕನ್ನು ಚಲಾಯಿಸಬೇಕು ಮತ್ತು ದೇಶದ ಅಬಿವೃದ್ಧಿಗೆ ಒಂದೊಂದು ಮತವು ಅವಶ್ಯವಾಗಿದೆ. ಹಾಗಾಗಿ, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರತಿಶತ ಮತದಾನದ ಗುರಿ ಮುಟ್ಟಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಂವಿಧಾನ ನಿರ್ಮಾತೃಗಳಾದ ಡಾ. ಅಂಬೇಡ್ಕರ್ ಅವರು ಭಾರತೀಯ ಪ್ರಜೆಗೆ ನೀಡಿದ ಏಕಮತಾಧಿಕಾರ ಅತ್ಯಂತ ಅಮೂಲ್ಯವಾದುದು. ಅದರ ಮಹತ್ವ ಅರಿತು ಪ್ರಜೆಗಳು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂಬುದನ್ನು ಮನಗಂಡು ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಯೋಗ ಮಾಡಿದೆ ಎಂದ ಅವರು, ಮತದಾನದ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕವನಗಳ ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಹೊರ ತರಲು ಇದೇ ಸಂದರ್ಭದಲ್ಲಿ ಘೋಷಿಸಲಾಯಿತು.

ಹಿರಿಯ ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ನ ಅಬ್ದುಲ್ ಅಜೀಮ್, ಅಮೀತ್ ಪಾಟೀಲ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ ವೇದಿಕೆ ಮೇಲಿದ್ದರು.

ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಸಂತೋಷ ಕುಡಳ್ಳಿ, ಸಿದ್ಧಲಿಂಗ ಜಿ ಬಾಳಿ, ಶರಣಬಸಪ್ಪ ಕೋಬಾಳ, ಎಂ ಎನ್ ಸುಗಂಧಿ, ಚಂದ್ರಕಾಂತ ಸೂರನ್, ಡಾ. ಬಸವರಾಜ ಕುಮ್ನೂರ್, ಹಣಮಂತಪ್ರಭು, ಡಾ. ನಾಗವೇಣಿ ಪಾಟೀಲ, ಗಂಗಮ್ಮಾ ಹಿರೇಮಠ, ಗಣೇಶ ಚಿನ್ನಾಕಾರ, ಪ್ರಿಯಾಂಕಾ ಪಾಟೀಲ, ಪದ್ಮಾವತಿ ಮಾಲಿಪಾಟೀಲ, ಶಿವಾನಂದ ಮಠಪತಿ, ಸೋಮಶೇಖರ ನಂದಿಧ್ವಜ, ಜ್ಯೋತಿ ಕೋಟನೂರ, ಬಸವರಾಜ ಉಪ್ಪಿನ್, ಸೈಯದ್ ನಜಿರುದ್ದೀನ್, ನವಾಬ್ ಖಾನ್, ಕಲ್ಯಾಣಕುಮಾರ ಶೀಲವಂತ, ಮಲ್ಲಿಕಾರ್ಜುನ ಕುಮಸಿ, ಡಾ. ರೆಹಮಾನ್ ಪಟೇಲ್, ವಿನೋದಕುಮಾರ ಜೇನವೇರಿ, ಎಚ್ ಎಸ್ ಬರಗಾಲಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಪದ್ಮಾವತಿ ನಾಯಕ ಸೇರಿದಂತೆ ಅನೆಕ ಗಣ್ಯರು ಭಾಗವಹಿಸಿದ್ದರು.

ಜನರಲ್ಲಿ ಅರಿವು ಮೂಡಿಸುವ ಶಕ್ತಿ ಕಾವ್ಯದಲ್ಲಿದ್ದು, ಸಾಮಾಜಿಕ ಬದಲಾವಣೆ ಮಾಡಲು ಸಾಹಿತ್ಯದ ಪ್ರಭಾವ ಹೆಚ್ಚಿದೆ. ಅಂಥ ಹರಿತ ಬರಹಗಳಿಂದ ಮತದಾನ ಜಾಗೃತಿ ಮೂಡಿಸುವ ಜವಬ್ದಾರಿ ಕಾವ್ಯಕ್ಕಿದೆ. ಈ ದಿಸೆಯಲ್ಲಿ ಮತ ಕಾವ್ಯದೊಂದಿಗೆ ಜನರಲ್ಲಿ ಮತದಾನದ ಅರಿವಿಗಾಗಿ ಪರಿಷತ್ತು ಶ್ರಮಿಸುತ್ತಿದೆ. – ವಿಜಯಕುಮಾರ ತೇಗಲತಿಪ್ಪಿ, ಕಸಾಪ ಜಿಲ್ಲಾಧ್ಯಕ್ಷ ಕಲಬುರಗಿ. 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here