ಶಿವಶರಣ ಶ್ರೀ ಮಾದರ ಚನ್ನಯ್ಯ ಜಯಂತಿ ಸರಕಾರದಿಂದ ಆಚರಣೆಗೆ ಮನವಿ

0
25

ಕಲಬುರಗಿ: ಪ್ರತಿ ವರ್ಷವು ದಿನಾಂಕ:12 ನೇ ತಾರೀಖು ಡಿಸೆಂಬರ ತಿಂಗಳಿನಲ್ಲಿ ಶಿವಶರಣ ಶ್ರೀ ಮಾದರ ಚನ್ನಯ್ಯ ರವರ ಜಯಂತಿಯನ್ನು ನಡೆಸಲಾಗುತ್ತಿದ್ದು ಸದರಿ ಜಯಂತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಾಜ್ಯ ಸರಕಾರದ ವತಿಯಿಂದ ಪ್ರತಿ ವರ್ಷವು ಆಚರಿಸಲು ನಮ್ಮ ಸಮೂದಾಯದ ಬೇಡಿಕೆ ಇರುತ್ತದೆ. ಕಳೆದ ಅನೇಕ ಸರಕಾರಗಳಿಗೆ ಮನವಿ ಕೊಟ್ಟರು ಸ್ಪಂದಿಸದೇ ನಿರ್ಲಕ್ಷ ಮಾಡಿರುತ್ತಾರೆ. ಎಂದು ಶಿವಶರಣ ಶ್ರೀ ಮಾದರ ಚೆನ್ನಯ್ಯ ಜನ ಜಾಗೃತಿ ವೇದಿಕೆ ರಾಜ್ಯ ಸಮಿತಿ ವತಿಯಿಂದ ಸಚಿವ ಡಾ: ಶರಣಪ್ರಕಾಶ ಪಾಟೀಲ ಅವರಿಗೆ ಕಲಬುರಗಿಯಲ್ಲಿ ಮನವಿ ಸಲ್ಲಿಸಿದರು.

ಈ ನಮ್ಮ ಮನವಿಯನ್ನು ಪರಿಗಣಿಸಿ ನಮ್ಮ ಸಮೂದಾಯದ ಅಭಿವೃದ್ಧಿಯ ಹಿತದೃಷ್ಟಿಯಿಂದಾಗಿ ಹಾಗೂ ಶಿವಶರಣ ಶ್ರೀ ಮಾದರ ಚನ್ನಯ್ಯ ರವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಹಾಗೂ ನಾಡಿನ ಕಲೆ ಸಂಸ್ಕøತಿ ಉಳಿಸಿ ಬೆಳೆಸಲು ಅನುಕೂಲವಾಗುವಂತೆ ಶಿವಶರಣ ಶ್ರೀ ಮಾದರ ಚನ್ನಯ್ಯ ರವರ ಜಯಂತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ಆಚರಿಸಲು ಆದೇಶ ಹೊರಡಿಸಿ ಜಯಂತಿಯನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಯಶಸ್ವಿಯಾಗಿ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಸಂಸ್ಥಾಪಕ ರಾಜ್ಯಾಧ್ಯಕ್ಷ ಬಸವರಾಜ ಎ ಕಾಳಗಿಕರ್, ಮಾಜದ ಹಿರಿಯ ಮುಖಂಡರಾದ ಶಂಭುಲಿಂಗ ನಾಟಿಕರ್, ಈರಪ್ಪ ಗುಂಡಗುರ್ತಿ, ಈಶ್ವರ ಹಳ್ಳಿ, ಕಾಶಿನಾಥ್ ನಾಟಿಕರ್, ಅರ್ಜುನ್ ಮೇತ್ರಿ, ಜಗನ್ನಾಥ್ ಬಿಜನಹಳ್ಳಿ, ಸಾಬು ರಾಜೋಳಿ, ದೊಡ್ಡಪ್ಪ ಮುಗಟಿ, ಮರಿಯಪ್ಪ ದೊಣಗಾವ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here