ನಗರ ವಂಚಿತ ಸಮುದಾಯಗಳಿಗೆ ಸಂವಿಧಾನಬದ್ಧ ಮೂಲಭೂತ ಸೌಕರ್ಯ ನೀಡುವುದು ಸರಕಾರದ ಆದ್ಯ ಕರ್ತವ್ಯ; ನ್ಯಾಯಧೀಶ ಶ್ರೀನಿವಾಸ ನವಲೆ

0
35

ಕಲಬುರಗಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯಾಂಗ ಕಲಬುರಗಿ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಕೋಳಗೇರಿ ನಿವಾಸಿಗಳ ಒಕ್ಕೂಟ, ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಅಂಗವಾಗಿ ರಾಜಾಪೂರ ಹತ್ತಿರದ ಅಲೆಮಾರಿ ಕಾಲೋನಿಯಲ್ಲಿ ನಗರ ವಂಚೀತ ಸಮುದಾಯಗಳು ಮತ್ತು ಮಾನವ ಘನತೆ ಕುರಿತು. ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯರ ಕಾರ್ಯದರ್ಶಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾದೀಶರಾದ ಶ್ರೀನಿವಾಸ ನವಲೆ ಅವರು ಉದ್ಘಾಟಿಸಿದ ಮಾತನಾಡುತ್ತಾ ಇಂದು ವಿಶ್ವಮಾನವ ಹಕ್ಕುಗಳ ದಿನವಾಗಿದ್ದು, ನಮಗೆ ಸಂವಿಧಾನವು ನೀಡಿರುವ ಮೂಲಭೂತಹಕ್ಕುಗಳನ್ನು ಹಾಗೂ ಮೂಲಭೂತ್ಯ ಕರ್ತವ್ಯಗಳನ್ನು ದೇಶದ ನಾಗರಿಕರಾದ ನಾವು ಪಾಲಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ.

Contact Your\'s Advertisement; 9902492681

ದೇಶದ ಪ್ರತಿಯೊಬ್ಬರ ನಾಗರಿಕನಿಗೆ ಘನತೆಯಿಂದ ಬದುಕಲು ಬೇಕಾದ ಸೌಲತ್ತುಗಳನ್ನು ದೊರಕಿಸಿಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ದೇಶದಲ್ಲಿ ಇಂದು ಸಂವಿಧಾನ ವಿರೋದಿ ಚಟುವಟಕೆಗಳು ನಡೆಯುತ್ತಿದ್ದು ಹಾಗೂ ಮಾನವನ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಇದನ್ನು ಕಾಪಾಡುವುದು ನ್ಯಾಯಾಂಗ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ಪ್ರಜೆಯು ಕಾನೂನನ್ನು ಗೌರವಿಸುವುದು ಹಾಗೂ ಕಾನೂ£ನಿನ ಅಡಿಯಲ್ಲಿ ಕೆಲಸ ಮಾಡಬೇಕಾಗಿದ್ದು, ನಮ್ಮೆಲ್ಲರ ಕರ್ತವ್ಯಾಗಿದೆ.

ದೇಶದ ಏಕತೆ ಮತ್ತು ಸಮಗ್ರತೆಗಾಗಿ ಮತ್ತು ರಾಷ್ಟ್ರ ಗೌರವವನ್ನು ಕಾಪಾಡುವುದಾಗಿದೆ. ದೇಶದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸಹ ಅವನ ವ್ಯಕ್ತಿ ಗೌರವ ಮತ್ತು ಘನತೆಯಿಂದ ಅವನ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನ್ಯಾಯಾಂಗದ ಜವಾಬ್ದಾರಿಯಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ನಾಗರಿಕನ ಗೌರವಯುತ ಜೀವನವನ್ನು ನಡೆಸಬೇಕಾದರೆ ಕಟ್ಟುನಿಟ್ಟಿನ ಕಾನೂನು ಜಾರಿ ಆಗಬೇಕು. ದೇಶದ ಸಂವಿಧಾನಕ್ಕೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಆಭಿಯೋಜನಕರು ಜಿಲ್ಲಾ ಮತ್ತು ಸತ್ರ ನ್ಯಾಯ್ಯಾಲಯದ ಎನ್.ಆರ್. ನರಸಿಂಹಲು, ಮುಖ್ಯ ಅತಿಥಿಗಳಾಗಿ ನ್ಯಾಯಾವಾದಿಗಳಾದ ರೇವಣಸಿದ್ದ ಹತ್ತರಗಿ, ಜಿಲ್ಲಾ ಕೋಳಗೇರಿ ನಿವಾಸಿಗಳ ಒಕ್ಕೂಟದ ಗೌರವ ಅಧ್ಯಕ್ಷರಾದ ಬಾಬುರಾವ ದಂಡಿನಕರ್, ಅಧ್ಯಕ್ಷರಾದ ಅಲ್ಲಮಪ್ರಭು ನಿಂಬರ್ಗಾ, ಅಲೆಮಾರಿ ಸಮುದಾಯದ ಮುಖಂಡರುಗಳಾದ ಹುಸನಪ್ಪಾ ಮೋತೆ ಯಲ್ಲಪ್ಪ ಸನ್ಮಂಡು. ಸಾಯಬಪ್ಪ ಸನ್ಮಂಡು, ಮಹಾಂತೇಶ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟದ ಪದಾಧಿಕಾರಿಗಳಾದ ಬ್ರಹ್ಮಾಂದ ಮಿಂಚಾ, ವಿಕಾಸ ಸಾವರೇಕರ್, ಯಮನಪ್ಪ ಪ್ರಸಾದ, ಸಿದ್ರಾಮ ತಿರ್ಮಾನ, ಮಲ್ಲಿಕಾರ್ಜುನ ಅವರಾದ ಬಸಪ್ಪ, ಗೋಪಾಲ, ಘೂಳಪ್ಪ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here