ಮೂರು ದಿನಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಊಟ ನೀಡಿಲ್ಲವೆಂದು ಸಮಾಜಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ

0
9

ಯಾದಗಿರಿ: ನಗರದ ಸಮಾಜಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಸಲಾಗುತ್ತಿರುವ ಪರಿಶೀಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡದ ಮೆಟ್ರಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾರ್ಡ್‍ನ್‍ಇಲ್ಲದೆ ಮೂರು ದಿನಗಳಿಂದ ಸರಿಯಾಗಿ ಊಟವಿಲ್ಲ,ವಿದ್ಯಾರ್ಥಿಗಳ ಸಮಸ್ಯೆ ಕೇಳುವವರಿಲ್ಲದಂತಾಗಿದೆ ಎಂದುಕರ್ನಾಟಕದಲಿತ ಸಂಘರ್ಷ ಸಮಿತಿಅಂಬೇಡ್ಕರ್ ವಾದ ಸಂಘಟನೆಜಿಲ್ಲಾ ಉಪ ಪ್ರಧಾನ ಸಂಚಾಲಕ ಮಾಳಪ್ಪ ಕಿರದಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಮಾಜಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ವಸತಿ ನಿಲಯದ ವಾರ್ಡನ್‍ಯಾವುದೋಕಾರಣ ದಿಂದಅಮಾನತಾಗಿದ್ದಾನೆಎಂದು ಹೇಳಲಾಗುತ್ತಿದೆ,ಆದರೆ ಬೇರೆ ವಾರ್ಡನ್ ನೇಮಿಸದೆ ನಿರ್ಲಕ್ಷ್ಯತೋರಿದ್ದರಿಂದಇಂದು ವಿದ್ಯಾರ್ಥಿಗಳು ಪರದಾಡುವಂತಾಗಿದೆ,ಕೂಡಲೇತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಪ್ರತಿಭಟನಾ ಸ್ಥಳಕ್ಕೆ ಸಮಾಜಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಆಗಮಿಸಿ ಹೋರಾಟಗಾರರ ಮನವಿ ಆಲಿಸಿ,ನಂತರ ವಸತಿ ನಿಲಯಕ್ಕೆತಾತ್ಕಾಲಿಕ ವಾರ್ಡನ್ ನಿಯೋಜನೆ ಮಾಡುವುದಾಗಿ ಭರವಸೆ ನೀಡಿದರು,ಅಲ್ಲದೆ ವಿದ್ಯಾರ್ಥಿಗಳ ಕುರಿತು ನಿಷ್ಕಾಳಜಿ ತೋರಿದ ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯಜಿಲ್ಲಾ ಪ್ರಧಾನ ಸಂಚಾಲಕ ಮರುಳಸಿದ್ಧಪ್ಪ ನಾಯ್ಕಲ್,ಮುಖಂಡರಾದ ಭೀಮರಾಯ ಬಳಿಚಕ್ರ,ಅಶೋಕ ನಾಯ್ಕಲ್,ಪರಶುರಾಮ ಮಹಲ್‍ರೋಜಾ,ರಾಜುದೊಡ್ಮನಿ,ಬಸವರಾಜ ಅಣಬಿ ಸೇರಿದಂತೆ ವಸತಿ ನಿಲಯದ ಅನೇಕ ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here