“ರಕ್ತ ಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ” ಕಾರ್ಯಕ್ರಮ

0
26

ಕಲಬುರಗಿ: ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಘಟಕಗಳು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯುನಿಸೆಫ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯುತ್ತ)ಯಲ್ಲಿ“ರಕ್ತ ಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ” ಕಾರ್ಯಗಾರವನ್ನು ರಾಷ್ಠೀಯ ಕಿಶೋರ ಸ್ವಾಸ್ಥದ  ಜಿಲ್ಲಾ ಸಂಯೋಜಕರಾದ ಶಿವಕುಮಾರ ಕಾಂಬಳೆ ಅವರು ಉದ್ಘಾಟಿಸಿದರು.

ನಂತರ ಮಾತನಾಡುತ್ತಾ ನಮ್ಮ ಭಾಗದಲ್ಲಿ 41% ರಕ್ತ ಹೀನತೆಯಿಂದ ಬಳಲುತ್ತಿದ್ದು ರಾಜ್ಯಕ್ಕೆತುಲನೆ ಮಾಡಿ ನೋಡಿದರೆ ಬಹಳ ಹಿಂದೆ ಇದೆ. ಹಾಗಾಗಿ ವಿದ್ಯಾರ್ಥಿಗಳು ಅಪೌಷ್ಠಕ ಆಹಾರ ಸೇವೆಸಬೇಕೆಂದು ವಿಶೇಷ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ಶ್ರೀಮಂತ ಹೋಳಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ದಿನಗಳಲ್ಲಿ ಯುವಕರಲ್ಲಿಶಿಸ್ತು ಅಪೌಷ್ಠಿಕ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿದ್ದು, ಕಾಲೇಜಿನಲ್ಲಿತಲೆಸುತ್ತುಬಂದು ಬೀಳುವುದು, ಮಧ್ಯದಲ್ಲಿ ಶಾಲೆ ಬಿಡುವುದು ಮತ್ತುಅತಿರೇಕದ ವರ್ತನೆ ಇವುಗಳು ಹದಿಹರಿಯದಯುವಕರಲ್ಲಿ ಸಾಮಾನ್ಯವಾಗಿಕಾಣುತ್ತಿದೆ. ಅದಕ್ಕೆಕಾರಣರಕ್ತ ಹೀನತೆ ಹಾಗೂ ಅಪೌಷ್ಠಕತೆಯೇಕಾರಣವಾಗಿದೆ.ನಾವು ಬಳಸುವ ಆಹಾರದಲ್ಲಿ ಹೆಚ್ಚಿನ ಪೌಷ್ಠಕಾಂಶಗಳಾದ ಹಣ್ಣು, ತರಕಾರಿ, ಮಾಂಸ, ಮೊಟ್ಟೆ ಸೇವಿಸಬೇಕು ಆ ಮೂಲಕ ತಮ್ಮಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‍ಸಿಹೆಚ್ ಕೇಂದ್ರ ಅಧಿಕಾರಿಗಳಾದ ಡಾ.ಶರಣಬಸಪ್ಪಾ ಖ್ಯಾತನಾಳ, ಆಪ್ತ ಸಮಾಲೋಚಕರಾದ ಅಲ್ಲಮ ಪ್ರಭು ನಿಂಬರ್ಗಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ವಹಿಸಿದ್ದರು. ವೇದಿಕೆ ಮೇಲೆ ಕಲಾ ವಿಭಾಗದಡೀನ್‍ರಾದ ಡಾ. ವಿಜಯಕುಮಾರ ಸಾಲಿಮನಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ.ರವಿ ಬೌದ್ದೆ, ಪ್ರೋ.ಮೇರಿ ಮಾಥ್ಯೂಸ್, ಡಾ. ಬಲಭೀಮ ಸಾಂಗ್ಲಿ, ವಿದ್ಯಾರ್ಥಿಕಲ್ಯಾಣಅಧಿಕಾರಿಡಾ.ಸುರೇಶ ಮಾಳೆಗಾಂವ, ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿಡಾ.ವಿಜಯಕುಮಾರ ಗೋಪಾಳೆ, ಡಾ.ಖಲೀದಾ ಬೇಗಂ, ಡಾ.ಶಾಮಲಾ ಸ್ವಾಮಿ, ಡಾ.ಖಾಜಿಯಾಅತೀಯಾ ಪರವೀನ್, ಡಾ.ಸಬೀಯ ಶಾಹೀನ ಮತ್ತುಅನುಸೂಯಗಾಯಕವಾಡ ಉಪಸ್ಥಿತರಿದ್ದರು.

ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ನಾಗಪ್ಪ ಗೋಗಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಲಕ್ಷ್ಮೀಅವರು ಪ್ರಾರ್ಥನಗೀತೆಯನ್ನು ನಡಸಿಕೊಟ್ಟರು ಡಾ. ರವಿ ಬೌದ್ದೆರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here