ಕಲಬುರಗಿ ನ್ಯಾಯವಾದಿಗಳ ಅನಿರ್ಧಿಷ್ಠಾವಧಿ ಧರಣಿ ಎರಡನೇ ದಿನಕ್ಕೆ

0
355

ಕಲಬುರಗಿ: ಗುಲ್ಬರ್ಗಾ ವಕೀಲರ ಸಂಘದ ನೈತೃತ್ವ ದಲ್ಲಿ ಹಮ್ಮಿಕೊಂಡ ಅನಿರ್ದಿಸ್ಟ್ ಸತ್ಯಾಗ್ರಹ ದ ಎರಡನೆಯ ದಿನದ ಧರಣಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಮತಿ ಜಯಶ್ರೀ ಬೋಡೋಲೆ ಅವರ ಉಪಸ್ಥಿತಿಯಲ್ಲಿ ಹಿರಿಯ ವಕೀಲರಾದ ಹಾಗೂ ಹೋರಾಟಗಾರ್ತಿ ಚುಡಾಮಣಿ, ಚನ್ನಮ್ಮ, ನಿರ್ಮಲಾ ಬಿರಾದಾರ, ಆಶಾಮಂಗೇಶ, ಸಿದ್ಧಮ್ಮ ಪಾಟೀಲ, ಅರುಂಧತಿ ಹಾಗೂ ಅಶ್ವವಿನಿ ಮದನಕರ ಇತರರು ಬೆಳ್ಳಗ್ಗೆ 11 ರಿಂದ ಸಂಜೆ. 5 ರವರೆಗೆ ಕುಳಿತು ವಕೀಲರ ಮೇಲೆ ಆಗುತ್ತಿರುವ ಅನ್ಯಾಯ ಗಳ ಬಗ್ಗೆ ಮಾತನಾಡಿದರು.

ಸತ್ಯಾಗ್ರಹದ ಮಂಟಪಕ್ಕೆ ಭಾರತೀಯ ವೈದ್ಯರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಕಿರಣ ಪಾಟೀಲ್ ಇಂದಿನ ಧರಣಿಗೆ ಬೆಂಬಲ ಸೂಚಿಸಿ, ಮಾತಾಡುತ್ತಾ ಕಾರ್ಯನಿರತ, ವೃತ್ತಿಪರ ರನ್ನು ಬೆದರಿಸುವ, ಹೆದರಿಸುವ ಕೆಲಸ ದಿನನಿತ್ಯದ ಕೆಲಸ  ಮಾಡಿಕೊಂಡಿದ್ದಾರೆ, ಅದನ್ನು ತಡೆಗಟ್ಟಲು ಸೂಕ್ತ ಕಾನೂನು, ಕಾಯ್ದೆ ಜಾರಿಗೆ ತರಲು ನಮ್ಮ ಸಂಘವು ಸದಾ ಬೆಂಬಲಿಸುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಅದೇ ರೀತಿ ರಾಷ್ಟ್ರೀಯ ಬಸವ ದಳದ ಆರ್.ಜಿ.ಶೇಟಗಾರ ಕೂಡಾ ಆಗಮಿಸಿ, ಬೆಂಬಲ ಸೂಚಿಸಿದರು ಮಧ್ಯಾಹ್ನ ಬಿಜೆಪಿಯ ಮುಖಂಡರು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್ ಆಗಮಿಸಿ ವಕೀಲರ ಸಂರಕ್ಷಣಾ ಕಾಯ್ದೆ ಇನ್ನಷ್ಟು ಕನಿಷ್ಠ ನಿಯಮಗಳನ್ನು ಮಾಡಿ ರಾಜ್ಯಪಾಲರ ಒಪ್ಪಿಗೆ ಪಡೆದು ಜಾರಿ ಗೊಳಿಸಬೇಕು ಎಂದು ಆಗ್ರಹಿಸಿ, ಉದಯೋನ್ಮುಖ ಯುವ ನ್ಯಾಯವಾದಿಯ ಹತ್ಯೆ ಈ ರೀತಿ ಯಾದರೆ ಸಾಮಾನ್ಯ ಜನರ ಗತಿ ಏನು ಎಂದು ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ವಕೀಲ ಹಾಗೂ ಹೋರಾಟಗಾರ ಅಟ್ಟುರ ಹಣಮಂತರಾಯ ಧರಣಿ ಉದ್ದೇಶಿಸಿ ಮಾತನಾಡಿದರು, ಯುವ ನ್ಯಾಯವಾದಿ ಕೌಲಗಿ ಮಹಂತೇಶ್ ಮಾತನಾಡುತ್ತಾಮೈಸೂರಿನಲ್ಲಿ ವಕೀಲರ ಸಮ್ಮೇಳನದಲ್ಲಿ 6 ನೆ ಗ್ಯಾರಂಟಿ ವಕೀಲರ ಕಾಯ್ದೆ ಎಂದು ಹೇಳಿದಂತೆಯೇ ನಿನ್ನೆ ಸದನದಲ್ಲಿ ಕಾನೂನು ಸಚಿವರ ಮೂಲಕ ವಿದೇಯಕ ಮಂಡಿಸಲಾಗಿದೆ ಎಂದು ತಿಳಿಸಿದರು ಮತ್ತು ಸಹಕಾರ ನೀಡಿದ ಸಚಿವರು ಹಾಗೂ ಈ ಭಾಗದ ಎಲ್ಲಾ ಶಾಸಕರಿಗೆ ಅಭಿನಂದನೆಗಳು ಹೇಳಬೇಕಾಗುತದೆ ಎಂದರು.

ಸತ್ಯಾಗ್ರಹದ ಪೂರ್ಣಾವಧಿ ಯಲ್ಲಿ ಖಜಾಂಚಿ ಶಿವರಾಜ್ ಪಾಟೀಲ್, ಜಂಟಿ ಕಾರ್ಯದರ್ಶಿ ಶಾಂತಪ್ಪಾ ಚಿಕ್ಕಳ್ಳಿ, ಕಾರ್ಯಕಾರಿಣಿ ಸದಸ್ಯ ಸಂಜೀವಕುಮಾರ ಡೊಂಗರಗೌವ, ಸಂತೋಷ್ ಕುಮಾರ ಹುಗ್ಗಿ, ವಿನೋದ ಕುಮಾರ ಜೇನವೆರಿ ಬಸವರಾಜ ಅಗ್ಗಿ ಲಷ್ಮಿಕಾಂತ ಕುಲಕರ್ಣಿ, ಕಲ್ಯಾಣಿ ವಾಘದರಗಿ, ಸಂತೋಷ ಪಾಟೀಲ ಕಲ್ಲೂರ್, ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here