ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜವನ್ನು ಕಟ್ಟಿದ ಮಹಾತ್ಮ ಬಸವಣ್ಣ: ಕವಿಯತ್ರಿ ಶಕುಂತಲಾ ಪಾಟೀಲ

0
71

ವಿಜಯಪುರ(ಜಮಖಂಡಿ): ಜಮಖಂಡಿಯ ಹುನ್ನೂರ – ಮಧುರಖಂಡಿಯ ಬಸವಜ್ಞಾನ ಗುರುಕುಲದಲ್ಲಿ ಶನಿವಾರ ನಡೆದ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಕಲಬುರಗಿಯ ಹಿರಿಯ ಕವಿಯತ್ರಿ ಶಕುಂತಲಾ ಪಾಟೀಲ ಜಾವಳಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಕುಂತಲಾ ಪಾಟೀಲ ಜಾವಳಿ, ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜವನ್ನು ಕಟ್ಟಿದ ಮಹಾತ್ಮ ವಿಶ್ವಗುರು ಬಸವಣ್ಣನವರು. ನಮ್ಮೊಳಗೆ ಅರಿವಿನ ಜ್ಯೋತಿ ಬೆಳಗಿಸಿದ ಹನ್ನೇರಡನೇ ಶತಮಾನದ ಬಸವಾದಿ ಶರಣರು ವಿಶ್ವಮಾನ್ಯರೆನಿಸಿಕೊಂಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಈ ನಿಟ್ಟಿನಲ್ಲಿ ಶರಣರಾದ ಡಾ.ಈಶ್ವರ ಮಂಟೂರ ಶರಣರು ತಮ್ಮ ಅಮೃತ ನುಡಿಗಳ ಮೂಲಕ ಇಂದಿನ ಸಮಾಜದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ ಎಂದು ಮನದುಂಬಿ ಹೇಳಿದರು.

Contact Your\'s Advertisement; 9902492681

ಅನುಭಾವ ನೀಡಿದ ಶಿವಮೊಗ್ಗ ಜಿಲ್ಲೆಯ ಸಂತೆಕಡೂರ ಜ್ಞಾನಮಂಟಪದ ಪೂಜ್ಯ ನವಲಿಂಗ ಶರಣರು, ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯಿಂದ ನಾವು ಪಾರಾಗಬೇಕಾದರೆ ಬಸವ ಚಿಂತನೆಯೆಡೆಗೆ ಮುಖ ಮಾಡಬೇಕು. ಅರಿವೆ ನಮಗೆ ಗುರುವಾಗಬೇಕು ಅಂದಾಗ ಮಾತ್ರ ಈ ಸಮಾಜದಲ್ಲಿ ಸಾಧಿಸಲಿಕ್ಕೆ ಸಾಧ್ಯವಾಗುತ್ತದೆ. ಈ ಜಗತ್ತಿನಲ್ಲಿ ಸರ್ವ ಸಮಾನತೆ ಸಾರಿದ ಧರ್ಮ ಯಾವುದಾದರೂ ಇದ್ರೆ ಅದು ಬಸವ ಧರ್ಮವೊಂದೇ ಎಂಬ ನಿಜತತ್ವವನ್ನು ಇಂದು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ದೇಹವೇ ದೇಗುಲ ಎಂದವರು ವಿಶ್ವಗುರು ಬಸವಣ್ಣ ಎಂದು ನುಡಿದರು.

ಹಿರಿಯ ಗಾಂಧಿವಾದಿ ತಮ್ಮಣ್ಣಪ್ಪಾ ಬುದನಿ ಬಸವಭಾವ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಮಖಂಡಿ ಸಿ.ಪಿ.ಐ. ಮಹಾಂತೇಶ ಹೊಸಪೇಟೆ, ನಿವೃತ್ತ ಪ್ರಿನ್ಸಿಪಾಲ್ ವ್ಹಿ.ಎನ್.ಕಮ್ಮಾರ, ಉದ್ಯಮಿ ಅಲ್ಲಪ್ಪ ಗುಂಜಿಗಾಂವಿ, ಬಸವ ಕೇಂದ್ರದ ಬಸನಗೌಡ ಪಾಟೀಲ ವೇದಿಕೆ ಮೇಲಿದ್ದರು.

ಕಲಬುರಗಿ ಸಾಂಸ್ಕೃತಿಕ ಬಳಗದ ವಿಜಯಕುಮಾರ ತೇಗಲತಿಪ್ಪಿ, ಜಗದೀಶ ಮರಪಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ನಾಗೇಂದ್ರಪ್ಪ ಮಾಡ್ಯಾಳೆ, ಬಿ.ಎಂ.ಪಾಟೀಲ ಕಲ್ಲೂರ, ಪ್ರಮುಖರಾದ ಯಶ್ವಂತರಾಯಗೌಡ ಪಾಟೀಲ, ರಾಜೇಶ್ವರಿ ಚಂದಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಸವಜ್ಞಾನ ಗುರುಕುಲದ ಪೂಜ್ಯ ಡಾ . ಈಶ್ವರ ಮಂಟೂರ ಸಮ್ಮುಖ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here