ಶರಣರ ಸ್ಮರಣೆ ಅತ್ಯಗತ್ಯ- ಮರುಳ ಮಹಾಂತ ಶ್ರೀಗಳು

0
57

ಶಹಾಪುರ: ಮನುಷ್ಯನ ಸಂಸಾರದ ಜಂಜಾಟದಲ್ಲಿ ಶ್ರಾವಣ ಮಾಸದ ಪ್ರತಿನಿತ್ಯ ಶರಣರ ಸ್ಮರಣೆ ಮಾಡುವುದು ಅತ್ಯಗತ್ಯ ಎಂದು ಸಗರ ಒಕ್ಕಲಗೇರ ಹಿರೇಮಠದ ಶ್ರೀ ಮರುಳ ಮಹಾಂತ ಶ್ರೀಗಳು ಹೇಳಿದರು.

ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಒಕ್ಕಲಿಗೇರ ಹಿರೇಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿರುವ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಬದುಕಿನಲ್ಲಿ ಬೇಸರ ಕಳೆದು ನೆಮ್ಮದಿಯಿಂದ ಇರಬೇಕಾದರೆ ಆಧ್ಯಾತ್ಮಿಕತೆ ಚಿಂತನೆಗಳಿಗೆ ಕಿವಿಗೊಟ್ಟು ಶರಣರ ದಾರ್ಶನಿಕರ ಆದರ್ಶ ತತ್ತ್ವಗಳನ್ನು ಮೈಗೂಡಿಸಿಕೊಂಡು ಉತ್ತಮರಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿರುವ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ ಕಾಯಕ ತತ್ವ ಮಹಾದಾಸೋಹ ಸಮಾನತೆಯ ಪ್ರತಿಬಿಂಬವೇ ಈ ಶ್ರಾವಣ ಸಂಭ್ರಮ ಈ ಶರಣ ಸಂಸ್ಕೃತಿಯನ್ನು ಸಮಾಜದ ಪ್ರತಿಯೊಬ್ಬರು ಶ್ರದ್ಧೆ , ನಿಷ್ಠೆಯಿಂದ ಕಾಪಾಡಿಕೊಂಡು ಹೋಗಬೇಕು ಎಂದರು.

ಸುಮಾರು ನಲವತ್ತು ಜನ ಬಸವದಳದ ಬಸವ ಪ್ರಿಯರಿಗೆ ವಚನ ಪಠಣವನು ಪಠಿಸಲಾಯಿತು ಜೊತೆಗೆ ಬಸವಣ್ಣನ ತತ್ವಾದರ್ಶಗಳನ್ನು ಪಾಲಿಸುವಂತೆ ಯುವಕರಿಗೆ ತಿಳಿ ಪಡಿಸಲಾಯಿತು.

ಈ ಸಮಾರಂಭದ ವೇದಿಕೆಯ ಮೇಲೆ ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಸಿನ್ನೂರು, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಕೊಬ್ರಿ, ಚರಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಚಂದಣ್ಣ ಚಡಗೊಂಡ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವನಗೌಡ ಗೌಡರ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here