ಜೀವನದ ಕಷ್ಟಕ್ಕೆ ನಕಾರಾತ್ಮಕ ಚಿಂತನೆಯೇ ಕಾರಣ

0
16

ಕಲಬುರಗಿ: ಇಂದಿನ ತಾಂತ್ರಿಕ ಯುಗದಲ್ಲಿ, ವೇಗದ ಜೀವನದಿಂದ ಮನುಷ್ಯನು ಮಾನಸಿಕ ಸ್ಥಗಿತ ಅನುಭವಿಸುತ್ತಿದ್ದು, ನಕಾರಾತ್ಮಕ ಚಿಂತನೆಯೇ ಇದರ ಕಾರಣ ಎಂದು ಮಾನಸಿಕ ಆರೋಗ್ಯ ತಜ್ಞರಾದ ಶ್ರೀ ಎ. ಎಸ್. ರಾಮಚಂದ್ರ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ತಾಂತ್ರಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಇಂದು ಜಗತ್ತಿನ ನಾಗರಿಕರಲ್ಲಿ ನಕಾರಾತ್ಮಕ ಮನಸ್ಥಿತಿ ಬೆಳೆಯುತ್ತಿದೆ ಮತ್ತು ಇದರ ಅಡ್ಡ ಪರಿಣಾಮವಾಗಿ ಮಾನವ ಕುಲ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತ ಪಡಿಸಿದರು. ಅವರು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ವತಿಯಿಂದ ಮಹಾವಿದ್ಯಾಲಯ ದ ವಿದ್ಯಾರ್ಥಿನಿಯರಿಗೆಂದು ಆಯೋಜಿಸಲಾದ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸುವ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾಲೇಜಿನ ಉಪ ಪ್ರಾಚಾರ್ಯರಾದ ಶ್ರೀಮತಿ ಉಮಾ ರೇವೂರ್, ಭವಿಷ್ಯದಲ್ಲಿ ನಕಾರಾತ್ಮಕ ಚಿಂತನೆ ಮಾನವ ಕುಲಕ್ಕೆ ದೊಡ್ಡ ಸಂಕಷ್ಟ ಸೃಷ್ಟಿಸುವ ಸಾಧ್ಯತೆ ಇದೆ ಆದಕಾರಣ ನಾವು ನಕಾರಾತ್ಮಕ ಭಾವನೆಯನ್ನು ತೊರೆದು ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾಲೇಜಿನ ಉಪನ್ಯಾಸಕಿಯರಾದ ಶ್ರೀಮತಿ ಮಂಗಳಾ ಸಭೆಯನ್ನು ಮತ್ತು ಮುಖ್ಯ ಅತಿಥಿಗಳನ್ನು ಸ್ವಾಗತಸಿದರು. ಕುಮಾರಿ ಸುರಕ್ಷಾ ಅವರು ವಂದಿಸಿದುರು ಮತ್ತು ಕುಮಾರಿ ರಜನಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here