ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ ಕೆ ತುಳಸಿಮಾಲಾ ಹೇಳಿದರು.
ವಿವಿ ಆವರಣದಲ್ಲಿ ಜಿಎಫ್ಎಟಿಎಮ್ ಹಾಲ್ ನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಸಮಾಜಶಾಸ್ತ್ರ ಅದ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಸಮಾಜಶಾಸ್ತ್ರ ಪಠ್ಯಕ್ರಮ’ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜಶಾಸ್ತ್ರವು ಎಲ್ಲಾ ಸಮಾಜ ವಿಜ್ಞಾನಗಳ ತಾಯಿ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಘವೇಂದ್ರ ಗುಡಗುಂಟಿರವರು,ಕೌಶಲ್ಯಾದಾರಿತ ಪಠ್ಯಕ್ರಮಕ್ಕೆ ಇಂದು ಆದ್ಯತೆ ನೀಡಬೇಕಾಗಿದೆ.ಆ ನಿಟ್ಟಿನಲ್ಲಿ ಸಮಾಜಶಾಸ್ತ್ರದ ಪಠ್ಯಕ್ರಮ ರಚಿಸಬೇಕು ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಸಮಾಜಶಾಸ್ತ್ರದ ಪಾತ್ರ ಅಮೋಘ. ಇಂದಿನ ಒತ್ತಡದ ಜೀವನದಲ್ಲಿ ಸಮಾಜಶಾಸ್ತ್ರದ ಪಠ್ಯಕ್ರಮ ರಚನೆ ನವ ಪೀಳಿಗೆಗೆ ಉದ್ಯೋಗ ಆಧಾರಿತವಾಗಿ ಇರಲಿ.ಸರ್ಕಾರದ ಅತ್ಯುನ್ನತ ಹುದ್ದೆಗಳಲ್ಲಿ,ಸಮಾಜದಲ್ಲಿನ ದಿನನಿತ್ಯದ ಸಾಮಾಜಿಕ ಸಮಸ್ಯೆಗಳ ಪರಿಹಾರದಲ್ಲಿ ಸಮಾಜಶಾಸ್ತ್ರವು ಮಹತ್ತರ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದರು.
ಎನ್ ಇ ಪಿ ಮತ್ತು ಎಸ್ ಇ ಪಿ ನಡುವಿನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಹೇಳಿದ ಗುಡಗುಂಟಿರವರು,ಇಂದು ಪದವಿ ಮಟ್ಟದ ವಿಧ್ಯಾರ್ಥಿಗಳಿಗೆ ಕೌಶಲ್ಯ ಅಧಾರಿತ ಹಾಗೂ ಉದ್ಯೋಗಕ್ಕೆ ಪೂರಕವಾಗುವ ಪಠ್ಯಕ್ರಮ್ ಅವಶ್ಯಕತೆ ಇದೆ. ಇ ನಿಟ್ಟಿನಲ್ಲಿ ಪ್ರಾಧ್ಯಾಪಕ ವರ್ಗದವರು ಚಿಂತನ ಮಂಥನ ಮಾಡಿ ಪಠ್ಯಕ್ರಮ ರಚಿಸಲು ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಮಕ್ಕಳಿಗೆ ಕೌಶಲ್ಯ ಪೂರಕ ಪಠ್ಯಕ್ರಮ ಅತ್ಯವಶ್ಯಕ ಇದೆ.ಆ ನಿಟ್ಟಿನಲ್ಲಿ ಪ್ರಾಧ್ಯಾಪಕ ವರ್ಗ ಚಿಂತನ ಮಂಥನ ಮಾಡಿ ಪಠ್ಯಕ್ರಮ ರಚಿಸಿ. – ಪ್ರೊ.ರಾಘವೇಂದ್ರ ಗುಡಗುಂಟಿ, ನಿವೃತ್ತ ಪ್ರಾಧ್ಯಾಪಕರು.
ಈ ಕಾರ್ಯಕ್ರಮದಲ್ಲಿ ಕುಲ ಸಚಿವ ಶಂಕರಗೌಡ ಸೊಮನಾಳ,ಶಾಂತಾದೇವಿ ಟಿ, ನಿವೃತ್ತ ಪ್ರಾಧ್ಯಾಪಕ ಡಾ.ಚಿದಾನಂದ ಕುಳಗೇರಾ,ಪ್ರೊ.ಬಿ ಬಿ ಹಚಡದ್,ಡಾ.ಮಹೇಶ್ ಗಂವ್ಹಾರ, ಡಾ.ಭಾರತಿ ಹೊಸಟ್ಟಿಡಾ.ರೇಣುಕಾ ರೆಡ್ಡಿ, ಪ್ರೊ.ನಾನಾಗೌಡ ಶಹಾಬಾದ,ಡಾ.ಹಾಜಿ ಬೇಗಂ,ಡಾ.ಶ್ರೀನಿವಾಸ ರೆಡ್ಡಿ, ಡಾ.ಪ್ರಜ್ಞಾಡಾ.ಅಶ್ವಿನಿ, ಡಾ.ರಾಜು,ಪ್ರೊ.ರಾಮಚಂದ್ರ ದೀಕ್ಷಿತ, ರಾಘವೇಂದ್ರ ಹಾರಣಗೇರಾ,ಧನರಾಜ ರಾಠೋಡ ಮುತ್ತಕೋಡ, ಡಾ.ಸಬಿಯಾ ಆಳಂದ, ಡಾ. ರಶ್ಮಿ, ಡಾ.ಹಸೀನಾಬೇಗಂ ಸೇರಿದಂತೆ ಪ್ರಾಧ್ಯಾಪಕ ವರ್ಗ, ಸಂಶೋಧನಾ ವಿಧ್ಯಾರ್ಥಿಗಳು ಕಾರ್ಯಾಗಾರದಲ್ಲಿ ಇದ್ದರು.