ಕೊಪ್ಪಳ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ಮಹಿಳಾ ಪದವಿ ಕಾಲೇಜ್ ನಲ್ಲಿ ಹೆಲ್ತಿ ಕ್ಯಾಂಪಸ್ “ಜಲ ಸಂರಕ್ಷಣೆ ನಮ್ಮ ಹೊಣೆ ” ಅಭಿಯಾನದ ಭಾಗವಾಗಿ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.
ಅಭಿಯಾನದ ಕುರಿತು ಸಂದೇಶವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾದ ಅಶ್ರಫ್ ದಾವಣಗೆರೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ. ಗಣಪತಿ ಲಮಾಣಿ, ಕಾಲೇಜಿನ ಉಪನ್ಯಾಸಕರಾದ ನರಸಿಂಹ, ಕೆ.ಅಶೋಕ್ ಅವರನ್ನು ಕ್ಯಾಂಪಸ್ ಫ್ರಂಟ್ ಕರ್ನಾಟಕ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಚಾಂದ್ ಸಲ್ಮಾನ್ ಜಿಲ್ಲಾ ಕಾರ್ಯದರ್ಶಿಯಾದ ಸೈಯದ್ ಅಲಿ, ಜಿಲ್ಲಾ ಸಮಿತಿ ಸದಸ್ಯರಾದ ಇಮ್ರಾನ್,ಜಾಕೀರ್, ಉಪಸ್ಥಿತರಿದ್ದರು. ರಾಜ್ಯ ಸಮಿತಿ ಸದಸ್ಯರಾದ ಹುಸೇನ್ ಭಾಷಾ ಕಾರ್ಯಕ್ರಮವನ್ನು ನಿರೂಪಿಸಿದರು.