ಆಳಂದ: ತಾಲೂಕಿನ ಗಡಿಗ್ರಾಮ ಖಜೂರಿಯ ನ್ಯಾಯಲಿಂಗ ಆಶ್ರಮದಲ್ಲಿ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ ೫೨ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶುಕ್ರವಾರ ಖಜೂರಿ ಗ್ರಾಮದ ಜೈ ಭಾರತ ಮಾತಾ ಸೇವಾ ಸಮಿತಿಯ ಗ್ರಾಮ ಘಟಕವನ್ನು ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಉದ್ಘಾಟಿಸಿದರು. ೫೨ನೇ ಜನ್ಮದಿನದ ಅಂಗವಾಗಿ ವಿಶೇಷವಾಗಿ ಖಜೂರಿ ಗ್ರಾಮಸ್ಥರು ೫೨ ಕೆ.ಜಿ ತೂಕದ ಕೇಕ್ ತಯಾರಿ ಮಾಡಿಸಿದ್ದರು. ಪೂಜ್ಯರಿಗೆ ಬೃಹತ ಹೂವಿನ ಮಾಲೆಯನ್ನು ಹಾಕಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಜೈ ಭಾರತ ಮಾತಾ ಸೇವಾ ಸಮಿತಿಯ ಕಾನೂನು ಸಲಹೆಗಾರ ವೈಜನಾಥ ಝಳಕಿ, ಮಲ್ಲಿನಾಥ ಮಹಾರಾಜರು ಸಾಕ್ಷಾತ ಪರಮಾತ್ಮನ ಅವತಾರವಾಗಿದ್ದು ಭೂಲೋಕದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಸಮಾಜದ ಶಾಂತಿ, ಸೌಹಾರ್ದತೆ ಕಾಪಾಡುವುದಕ್ಕಾಗಿ ದ್ವೇಷ ಅಳಿಸಬೇಕು ದೇಶ ಅಳಿಸಬೇಕು ಎಂಬ ನಾಟಕ ಬರೆದು ಅದನ್ನು ಅಲ್ಲಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ ಈಗ ದೇಶದ ಅನ್ನದಾತರಾಗಿರುವ ರೈತರ ಕುರಿತು ಜೈ ಜವಾನ ಜೈ ಕಿಸಾನ ನಾಟಕ ರಚಿಸಿದ್ದಾರೆ ಅದು ಶೀಘ್ರದಲ್ಲಿಯೇ ಪ್ರದರ್ಶನವಾಗಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಂತು ಪಾಟೀಲ, ಹಣಮಂತ ಶೇರಿ, ಮಾರುತಿ ಶಿವಬಸಗೊಳ, ಮಂಜುನಾಥ ಬಂಗರಗೆ, ದೇವಾ ಎಣೆಗುರೆ, ಕುಮಾರ ಬಂಡೆ, ಕರಬಸಪ್ಪ ವಾಡೆ, ಗಜಾನಂದ ತುಪ್ಪಾದೊಡ್ಡೆ, ವೈಜನಾಥ ಹುಳಪಲ್ಲೆ, ಸಾಯಬಣ್ಣ ಢಗೆ, ರಾಜಶೇಖರ ಢಗೆ, ಶಿವಪ್ಪ ಆಳಂಗೆ, ಬಾಬುರಾವ ಢಗೆ, ರಾಜಶೇಖರ ಹರಿಹರ, ಸುಭಾಷ್ ತೋರಕಡೆ, ವಿಜಯ ಪೂಜಾರಿ, ಸೋಮನಾಥ ಬಂಗರಗೆ, ಸೇರಿದಂತೆ ಸಾಲೇಗಾಂವ, ಚಿತಲಿ, ಕಿಣ್ಣಿಸುಲ್ತಾನ, ತೇಲಾಕುಣಿ, ಬಂಗರಗಾ, ಆಳಂಗಾ, ತಡೋಳಾ, ಜಮಗಾ, ಬಬಲೇಶ್ವರ, ಅಣೂರ, ತುಗಾಂವ, ಹೊದಲೂರ, ಜವಳಗಾ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.