ಪ್ರತಿಭಾ ಕಾರಂಜಿಗೆ ಮೆರೆಗು ತಂದು ಗಡಿನಾಡಿನ ಮಕ್ಕಳ ಪ್ರದರ್ಶನ

0
43

ಆಳಂದ: ತಾಲೂಕಿನ ಗಡಿ ಭಾಗದ ಹಿರೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿ ಸಂಭ್ರಮಿಸಿದರು.

ಗಡಿಭಾಗದ ಸುಮಾರು ಎಲ್ಲಾ ಶಾಲೆಗಳ ಮಕ್ಕಳು ಸ್ಪಧೆಯಲ್ಲಿ ಆಭಗವಹಿಸಿ ವಿವಿಧ ಪ್ರತಿಭೆಗಳನ್ನು ಪ್ರಸ್ತುತ ಪಡಿಸಿದರು. ನೆರೆಯ ಕಾಮನಳ್ಳಿ, ಭೀಮಪೂರ ಹಾಗೂ ಹಿರೋಳಿ ಶಾಲೆಗಳ ಮಕ್ಕಳು ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳ ಸ್ಪಧೆಗೆ ಆಯ್ಕೆಯಾದರು. ಈ ಮೊದಲು ಎಸ್‌ಡಿಎಂ ಅಧ್ಯಕ್ಷ ಸೋಮಲಿಂಗ ಕವಲಗಿ ಕಾರ್ಯಕ್ರಮ ಉದ್ಘಾಟಿಸಿದರು. ಸಿಆರ್‌ಪಿ ದಿಲೀಪ ಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳಲ್ಲಿ ವಿವಿಧ ಸೂಪ್ತ ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಇಂಥ ವೇದಿಕೆಯ ಮುಖಾಂತರ ಅನಾವರಣಗೊಳಿಸುವ ಕಾರ್ಯ ಶಿಕ್ಷಕರು ಮಾಡಬೇಕಾಗಿದೆ. ಸರ್ಕಾರದ ಅನೇಕ ಯೋಜನೆಗಳು ಮಕ್ಕಳ ಕಲಿಗೆ ಪೂರಕವಾಗುವ ಹಲವಾರು ಕ್ರಿಯಾಶೀಲ ಚಟುವಟಿಕೆಗಳು ಜಾರಿಗೆ ತರುತ್ತಿದೆ ಎಂದರು.

Contact Your\'s Advertisement; 9902492681

ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಮಧುಮತಿ ಇಕ್ಕಳಕಿ ಅಧ್ಯಕ್ಷತೆ ವಹಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ರಾಮಲಿಂಗ ಕಿಣಗಿ, ಸಿದ್ದಣ್ಣ ವಾಡೇದ, ಶರಣಬಸಪ್ಪ ಡುಮ್ಮಾ, ಕಾಶೀನಾಥ ವಾಗದರಿ, ಹವಳಪ್ಪ ಇಕ್ಕಳಕಿ, ಪೀರಪ್ಪ ಮಾಳಿ, ಬಸವರಾಜ ವಾಡೇದ, ಬಸವರಾಜ ಗುಡ್ಡದ, ಸಂಜು ಷಣ್ಮುಖ, ಶಿಕ್ಷಕರಾದ ಶೈಲಜಾ ಪೋಮಾಜಿ, ಅಂಬಿಕಾ ಈಶ್ವರ, ಭೀಮಾಶಂಕರ ಖಜೂರಿ, ಯಮನಪ್ಪಾ ಕೈರೋಟಗಿ, ಸೈಬಣ್ಣ ಲಂಗೋಟಿ, ರಾಘವೇಂದ್ರ ಹೊನ್ನಾವರ ಸೇರಿದಂತೆ ಇತರ ಶಾಲೆಗಳ ಶಿಕ್ಷಕರು, ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿಣ್ಣಿಕೋಲ, ಜನಪದ ನೃತ್ಯ, ಛದ್ಮವೇಷ, ಆಶು ಭಾಷಣ ರಸಪ್ರಶ್ನೆ ಮತ್ತಿತರ ಸ್ಪಧೆಗಳು ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here