ವೇತನ ಪಾವತಿ ಮಾಡದಿದ್ದಲ್ಲಿ 26 ರಿಂದ ಪ್ರತಿಭಟನೆ ಆರಂಭ

0
14

ಸುರಪುರ: ನಗರಸಭೆಯಲ್ಲಿ ಪೌರ ಕಾರ್ಮಿಕರು, ವಾಹನ ಚಾಲಕರು ಹಾಗೂ ಬೀದಿದೀಪ ನಿರ್ವಹಣೆಗಾಗಿ ಹಲವು ವರ್ಷಗಳಿಂದ ನೇರ ಪಾವತಿ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಕಳೆದ 6 ತಿಂಗಳುಗಳಿಂದ ವೇತನವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದು ಕೂಡಲೇ ಬಾಕಿ ಇರುವ ವೇತನ ಹಾಗೂ 2000 ರೂಪಾಯಿಗಳ ಸಂಕಷ್ಟ ಭತ್ಯೆಯನ್ನು ಪಾವತಿಸಬೇಕು ಇಲ್ಲವಾದಲ್ಲಿ ಇದೇ 26 ರಿಂದ ಎಲ್ಲರು ಪ್ರತಿಭಟನೆಯನ್ನು ಆರಂಭಿಸಲಿದ್ದೇವೆ ಎಂದು ಹೊರಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ ಶಾಖಾನವರ ತಿಳಿಸಿದರು.

ಸರಕಾರದ ಆದೇಶದ ಪ್ರಕಾರ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಬೇಕು ಹಾಗೂ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಬೇಕು ಎಂದು ಆಗ್ರಹಿಸಿ ಸಫಾಯಿ ಕರ್ಮಕಾರಿ ಕಾವಲು ಸಮಿತಿ ತಾಲೂಕು ಶಾಖೆ ವತಿಯಿಂದ ನಗರಸಭೆಯ ಪೌರ ಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ನಗರಸಭೆ ವ್ಯವಸ್ಥಾಪಕರಿಗೆ ಸಲ್ಲಿಸಿ ಮಾತನಾಡಿ, ಕಳೆದ ತಿಂಗಳುಗಳಿಂದ 6 ತಿಂಗಳುಗಳಿಂದ ವೇತನ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಆದರೆ ಅಧಿಕಾರಿಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು ಅಲ್ಲದೆ ಸರಕಾರದ ಆದೇಶದ ಪ್ರಕಾರ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಲು ನಿರ್ದೇಶನ ನೀಡಿದ್ದರೂ ಅಧಿಕಾರಿಗಳು ಕೇವಲ ಒಂದು ತಿಂಗಳು ಮಾತ್ರ ಉಪಹಾರ ವೇತನ ವಿತರಿಸಿ ಕೈ ತೊಳೆದುಕೊಂಡಿದ್ದಾರೆ.

Contact Your\'s Advertisement; 9902492681

ಕೂಡಲೇ ಬೆಳಗಿನ ಉಪಹಾರ ಬಾಕಿ ತಿಂಗಳುಗಳ ಮೊತ್ತವನ್ನು ನೇರವಾಗಿ ಖಾತೆಗಳಿಗೆ ಜಮಾ ಮಾಡಬೇಕು ಮತ್ತು ಸರಕಾರದ ಆದೇಶದನ್ವಯ ನಗರಸಭೆಯ ಸ್ಥಳೀಯ ನಿಧಿಯಿಂದ 2ಸಾವಿರ ರೂ ಸಂಕಷ್ಟ ಭತ್ಯೆಯನ್ನು ಪಾವತಿಸಲು ಆಗ್ರಹಿಸಿದರು ಅಲ್ಲದೆ ಕಳೆದ 3 ವರ್ಷಗಳಿಂದ ಪೌರ ಕಾರ್ಮಿಕರಿಗೆ ಸಮವಸ್ತ್ರ ನೀಡಿಲ್ಲ ಹಾಗೂ ವೈದ್ಯಕೀಯ ತಪಾಸಣೆ ಕೈಗೊಂಡಿಲ್ಲ ಕೂಡಲೇ ಸಮವಸ್ತ್ರ ವಿತರಿಸಬೇಕು ಹಾಗೂ ವೈದ್ಯಕೀಯ ತಪಾಸಣೆ ಕೈಗೊಳ್ಳುವಂತೆ ಒತ್ತಾಯಿಸಿದರು.

ಕೂಡಲೇ ನಿರ್ಲಕ್ಷ್ಯತನ ವಹಿಸುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ಬೇಡಿಕೆಗಳನ್ನು ಒಂದು ವಾರದೊಳಗಾಗಿ ಈಡೇರಿಸಬೇಕು ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಡಿ26 ರಿಂದ ಜಂಟಿ ಪೌರ ಕಾರ್ಮಿಕರ ವೃಂದದವರು ಕೂಡಿಕೊಂಡು ಸ್ವಚ್ಛತಾ ಕೆಲಸಗಳನ್ನು ಸ್ಥಗಿತಗೊಳಿಸಿ ನಗರಸಭೆ ಕಚೇರಿ ಎದುರುಗಡೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಪ್ರಮುಖರಾದ ಸತೀಶನಾಯಕ,ಮಹಾದೇವ,ಸಿದ್ಧಾರೂಢ,ಕೃಷ್ಣ,ಮಹಾಂತೇಶ,ಗೌತಮ,ಗೋಪಾಲ,ರಾಘವೇಂದ್ರ,ಶರಣಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here