ಸುರಪುರ: ರಂಗಂಪೇಟೆ ಕರ್ನಾಟಕ ಬಿಇಡಿ ಕಾಲೇಜು ಹತ್ತಿರದ ಡಾ. ಬಾಬೂ ಜಗಜೀವನ ರಾಮ ಭವನದಲ್ಲಿ ಡಿ. 17 ರಂದು ಮಧ್ಯಾಹ್ನ 3.30 ಗಂಟೆಗೆ 2015ರ ಕಾಂತರಾಜ ವರದಿ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಅಹಿಂದ ವೇದಿಕೆ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಮತಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸಮೀಕ್ಷೆ ಬಗ್ಗೆ ಹಿಂದುಳಿದ ವರ್ಗದ ಜನರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕೆಎಎಸ್ ನಿವೃತ್ತ ಅಧಿಕಾರಿ ಕರ್ನಾಟಕರಾಜ್ಯ ಹಿಂದುಳಿದ ವರ್ಗಗಳ ನಿಗಮದ ಮಾಜಿ ಸದಸ್ಯ ಕೆ.ಎನ್ ಲಿಂಗಪ್ಪ ಕಾಂತರಾಜ ವರದಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕುರಿತು ಉಪನ್ಯಾಸ ನೀಡುವರು.
ಶಾಸಕ ರಾಜಾವೆಂಕಟಪ್ಪ ನಾಯಕ ಉದ್ಘಾಟನೆ ಮಲ್ಲಯ್ಯ ಕಮತಗಿ ಅಧ್ಯಕ್ಷತೆ, ವಿಚರವದಿಗಳಾದ ಹಮ್ಮದ್ ಪಠಾಣ, ವೆಂಕಟೇಶ ಹೊಸಮನಿ, ದೇವಿಂದ್ರಪ್ಪ ಪತ್ತಾರ, ಅಮಬೇಡ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಬಿಲ್ಲವ್ ಉಪಸ್ಥಿತರಿರುವರು.ವಿಚಾರವದಿಗಳು ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಮತಗಿ ಮನವಿ ಮಾಡಿದ್ದಾರೆ.