ಎರಡು ಕಿಡ್ನಿ ವೈಫಲ್ಯ: ಧನಸಹಾಯಕ್ಕಾಗಿ ಪೋಷಕರ ಮನವಿ

0
29

ಕಲಬುರಗಿ: ನಗರದ ನಿವಾಸಿಯಾದ ಶ್ರೀ ಅಣ್ಣಾರಾವ ಗವಳಿಯವರ ಮಗಳಾದ ಕುಮಾರಿ ಕೋಮಲ್ ತಂದೆ ಅಣ್ಣಾರಾವ ಗವಳಿ ಇವಳಿಗೆ ಹುಟ್ಟಿನಿಂದಲೂ ಎರಡು ಕಿಡ್ನಿ ವಿಫಲವಾಗಿದ್ದು, ಚಿಕಿತ್ಸೆಗಾಗಿ ಹಣವಿಲ್ಲದೆ ಪೋಷಕರು ಧನಸಹಾಯಕ್ಕಾಗಿ ಪತ್ರಿಕಾ ವರದಿ ಮೂಲಕ ಮನವಿ ಮಾಡಿದ್ದಾರೆ.

ಅಣ್ಣಾರಾವ ಗವಳಿ ಅವರು ಕಲಬುರಗಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಅವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 8000/- ರೂಪಾಯಿ ಸಂಭಳವಿದ್ದು, ಅವರು ಸಾಧಾರಣ ಜೀವನ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಒಟ್ಟು ಮೂರು ಜನ ಮಕ್ಕಳಿದ್ದು ಅದರಲ್ಲಿ ಒಬ್ಬಳಾದ ಕುಮಾರಿ ಕೊಮಲ್ ಇವಳಿಗೆ ಹುಟ್ಟಿನಿಂದಲೂ ಕೂಡಾ ಕಿಡ್ನಿ ವೈಪಲ್ಯವಾಗಿದ್ದು, ಅವಳಿಗೆ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಕೊಂಡು ಬರುತ್ತಿದ್ದಾರೆ. ಅವರು ದುಡಿದ ಎಲ್ಲಾ ಹಣವನ್ನು ತನ್ನ ಮಗಳ ಚಿಕಿತ್ಸೆಗಾಗಿ ಭರಿಸಿಕೊಂಡು ಬರುತ್ತಿದ್ದಾರೆ.

Contact Your\'s Advertisement; 9902492681

ತಮ್ಮ ಇಡೀ ಜೀವನದುದ್ದಕ್ಕೂ ತಾವು ದುಡಿದ ಹಣವಲ್ಲದೆ ಮತ್ತೋಬ್ಬರ ಹತ್ತಿರ ಸಾಲ ತೆಗೆದುಕೊಂಡು ತಮ್ಮ ಮಗಳ ಚಿಕಿತ್ಸೆಗಾಗಿ ಹಣವನ್ನು ಖರ್ಚು ಮಾಡಿದ್ದು ಇದರಿಂದ ಅಣ್ಣರಾವ ಇವರಿಗೆ ಸದ್ಯ 10 ಲಕ್ಷ ರೂಪಾಯಿಗಳ ಸಾಲವು ಸಹ ಆಗಿದ್ದು, ಸಾಲಕ್ಕೆ ಹೆದರದೆ ಜೀವಕ್ಕೆ ಮಹತ್ವಕೊಟ್ಟ ಅವರು ಮಗಳ ಜೀವಕ್ಕಾಗಿ ಹಗಲು ಇರಳು ನಿದ್ದೆ ಇಲ್ಲದೆ ಹೋರಾಟ ಮಾಡುತ್ತಿದ್ದಾರೆ.

ಕುಮಾರಿ ಕೊಮಲ್ ಇವಳಿಗೆ ವಾರದಲ್ಲಿ ಮೂರುಬಾರಿ ಡಯಾಲಿಸಿಸ್ ಮತ್ತು ಮಾತ್ರೆಗಳಿಗಾಗಿ 17500/- ತಿಂಗಳಿಗೆ ಒಟ್ಟು 40000-/ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಈ ಹಣ ಭರಿಸಲು ಅವರಿಂದ ಅಸಾಧ್ಯವಾಗಿದ್ದು, ಅವರು ಎನೂ ಮಾಡಬೇಕೆಂದು ತಿಳಿಯದೆ ಸಾಮಾಜಿಕವಾಗಿ, ಪತ್ರಿಕಾ ವರದಿ ಮೂಲಕ, ಮಾಧ್ಯಮದ ಮೂಲಕ ತಮ್ಮ ಮಗಳ ಚಿಕಿತ್ಸೆಗಾಗಿ ಧನ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಕುಮಾರಿ ಕೊಮಲ್ ಅವಳು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ತನ್ನ ಈ ಕಿಡ್ನಿ ವೈಫಲ್ಯವಾಗಿದ್ದರಿಂದ ಅವಳೂ ಶಾಲೆಗೆ ಹೋಗದೆ ಮನೆಯಲ್ಲಿ ಉಳಿದು ಎರಡು ದಿವಸಕ್ಕೆ ಒಮ್ಮೆ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬಂದು ಮನೆಯಲ್ಲಿ ಇರುತ್ತಾಳೆ.
ಕುಮಾರಿ ಕೋಮಲ ಇವಳ ತಾಯಿಯವರಾದ ಶ್ರೀಮತಿ ಶೀಲಾದೇವಿ ಗಂಡ ಅಣ್ಣಾರಾವ ಗವಳಿ ಅವರು ತಮ್ಮ ಮಗಳ ಚಿಕಿತ್ಸೆಗಾಗಿ ಧನಸಹಾಯ ಮಾಡ ಬಯಸುವ ಧಾನಿಗಳು ಮುಂದೆ ಬರಬೇಕು ಸಹಾಯ ಮಾಡಬಯಸುವ ಧಾನಿಗಳು ಕುಮಾರಿ ಕೋಮಲ್ ಅವರ ತಾಯಿಯವರ ಭ್ಯಾಂಕ ಖಾತೆ ನಂಬರ್:- 13002250023483, IಈSಅ ಕೋಡ್ ನಂ:-CNRB0011300 ಭ್ಯಾಂಕಿನ ಹೆಸರು : ಕೇನರಾ ಬ್ಯಾಂಕ,Account Holder Name:- Sheeladevi  ಹಾಗೂ ಪೋನ್ ಪೇ ನಂ 7411015673 ಗೆ ಕೈಲಾದಷ್ಟು ಮಟ್ಟಿಗೆ ಧನ ಸಹಾಯ ಮಾಡಬೇಕೆಂದು ಕೋರಿದ್ದಾರೆ.

ಅದೇರೀತಿಯಾಗಿ ಜನಪ್ರತಿನಿಧಿಗಳಿಂಗಲೂ, ಸರಕಾರದಿಂದ ಸಂಭಂದ ಪಟ್ಟ ಸಚೀವರಿಂದಲೂ ಸಹಾಯ ಮಾಡಿ ತಮ್ಮ ಮಗಳ ಚಿಕಿತ್ಸೆಯನ್ನು ಸುಗಮಗೋಳಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here