ಕಲಬುರಗಿ: ಗುತ್ತಿಗೆದಾರರ ಸಭೆ

0
20

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿಯ ಅಡಿಯಲ್ಲಿ ಬರುವ ಎಲ್ಲಾ ಜಿಲ್ಲೆಗಳ ಗುತ್ತಿಗೆದಾರರ ಸಭೆಯನ್ನು ನಗರದ ಯಾತ್ರಿ ನಿವಾಸ ಪಬ್ಲಿಕ್ ಗಾರ್ಡನಲ್ಲಿ ನಡೆದು ಎಲ್ಲಾ ಗುತ್ತಿಗೆದಾರರ ಸಮಸ್ಯೆಗಳ ಕುರಿತು ಸಭೆಯಲ್ಲಿ ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ಸ್ ಅಸೋಸಿಯೇಷನ ಅಧ್ಯಕ್ಷ ಜಗನ್ನಾಥ ಜಿ.ಶೇಗಜಿ ಅವರು ಮಾತನಾಡಿದರು.

ಲೋಕೋಪಯೋಗಿ ಇಲಾಖೆ ಪಂಚಾಯತ್ ರಾಜ ಇಂಜಿನಿಯರಿಂಗ ಮತ್ತು ಎಲ್ಲಾ ವಿಭಾಗಗಳಲ್ಲಿ ರಸ್ತೆ ಕಾಮಗಾರಿಗಳಿಗೆ 5 ವರ್ಷದ ವಾರ್ಷಿಕ ನಿರ್ವಹಣೆಯನ್ನು ಟೆಂಡರಿನ ಕರಾರಿನಲ್ಲಿ ಸೇರಿಸಿರುತ್ತಾರೆ, ಅದನ್ನು ರದ್ದು ಪಡಿಸಿ ಮೊದಲಿನಂತೆ ನಿರ್ವಹಿಸಿ ಕೊಂಡು ಹೋಗಬೇಕು ಎಂದರು.

Contact Your\'s Advertisement; 9902492681

ಕೆ.ಕೆ.ಆರ್.ಡಿ.ಬಿ.ಯಲ್ಲಿ ಇಲಾಖೆಯ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾದರು ಕೂಡ ದಂಡ ವಿಧಿಸುತ್ತಿದ್ದಾರೆ, ಅಲ್ಲದೆ ಮಾನ್ಯ ಜಿಲ್ಲಾಧಿಕಾರಿಗಳು ಕೂಡ ಕಾಮಗಾರಿ ಮುಗಿದು ಅಂತಿಮ ಬಿಲ್ಲುಗಳ ಮೇಲು ರುಜುಮಾಡಿಸುವಾಗ ಮತ್ತೆ 4ನೇ ತಂಡಕ್ಕೆ ತನಿಖೆಗಾಗಿ ಬರೆಯುತ್ತಿದ್ದಾರೆ ಕಾರಣ ಅದನ್ನು ಕೂಡ ರದ್ದುಪಡಿಸಬೇಕು. ಡಿ.ಎಮ್.ಎಫ್ ಅಡಿಯಲ್ಲಿ ಮಾಡಿರುವ ಎಲ್ಲಾ ಕಾಮಗಾರಿಗಳ ಬಿಲ್ಲು ಪಾವತಿಗೆ ವಿನಾಕಾರಣ ವಿಳಂಬ ಮಾಡುತ್ತಿದ್ದು ಬೇಗನೆ ಬಿಲ್ಲು ಪಾವತಿಗಾಗಿ ವ್ಯವಸ್ಥೆ ಮಾಡಬೆಕು, ಜೆ.ಜೆ.ಎಮ್ ಕಾಮಗರಿಗಳಲ್ಲಿ ಗುತ್ತಿಗೆದಾರರು ಕೇಲಸ ಮಾಡಿದರು ಸಮಯಕ್ಕೆ ಸರಿಯಾಗಿ ಬಿಲ್ಲು ಪಾವತಿಯಾಗಿರುವುದಿಲ್ಲ.

ಜಿಎಸ್‍ಟಿ 2017-18 ಸಾಲಿನಿಂದ ಈ ಮೋದಲು 4% ವ್ಯಾಟ್ ನಲ್ಲಿ ಇದ್ದ ಬಿಲ್ಲುಗಳಿಗೆ ಜಿಎಸ್‍ಟಿ 12% ಕಟ್ಟಲು ಸರ್ಕಾರ ಗುತ್ತಿಗೆದಾರರಿಗೆ ಜಿಎಸ್‍ಟಿ ಕೋಡಬೆಕೆಂದು ಉಚ್ಚ ನ್ಯಾಯಾಲಯ ಆದೇಶ ಮಾಡಿದರು ಕೂಡ ಇಲ್ಲಿಯವರೆಗೆ ಕ್ರಮ ತೆಗೆದುಕೊಂಡಿರುವುದಿಲ್ಲ, ಬೇಗನೆ ಸರ್ಕಾರದ ಗಮನಕ್ಕೆ ತಂದು ಜಿಎಸ್‍ಟಿ ಹಣ ಗುತ್ತಿಗೆದಾರರಿಗೆ ಪಾವತಿಯಾಗುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

2022-23ನೇ ಸಾಲಿನ ದಿನಾಂಕ 01-07-20220ರಂದು 12% ಜಿಎಸ್‍ಟಿ ದಿಂದ 18% ಜಿಎಸ್‍ಟಿಗೆ ಹೆಚ್ಚಿಸಿರುತ್ತಾರೆ, ವ್ಯತ್ಯಾಸಗ 8% ಜಿಎಸ್‍ಟಿ ಹಣವನ್ನು ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಸರ್ಕಾರ ಆದೇಶ ಮಾಡಿದರು ಇಲ್ಲಿಯವರೆಗೆ ಯಾವ ಇಲಾಖೆಯವರು ಆದೇಶ ಪಾಲಿಸುತ್ತಿಲ್ಲ, ಆದ ಕಾರಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೈಸರ್ಗಿಕ ಅತಿ ವೃಷ್ಟಿ (ಪ್ರವಾಹ ಹಾನಿ) ಕಾಮಗಾರಿಗಳನ್ನು ಅತಿ ಜರುರಿ ಎಂದು ಕೆಲಸ ತೆಗೆದುಕೊಂಡು ಇಲ್ಲಿಯವರೆಗೆ ಬಿಲ್ಲುಗಳನ್ನು ಪಾವತಿಸಿರುವುದಿಲ್ಲ, ಅದಷ್ಟು ಬೇಗನೆ ಬಿಲ್ಲುಗಳನ್ನು ಪಾವತಿಸಬೇಕು. ಕೆ.ಕೆ.ಆರ್.ಡಿ.ಬಿ. ಮೈಕ್ರೋ ಅನುದಾನದ ಅಡಿಯಲ್ಲಿ 6 ತಿಂಗಳ ಹಿಂದೆ ಕರೆದಿರುವ ಟೆಂಡರುಗಳನ್ನು ಇನ್ನು ಟೆಂಡರ ಕರಾರು ಒಪ್ಪಂದ ಮಾಡಿರುವುದಿಲ್ಲ, ಆದಷ್ಟು ಬೇಗನೆ ಟೆಂಡರ ಕರಾರು ಒಪ್ಪಂದ ಮಾಡಿಕೋಡಬೇಕು.

ಎಲ್ಲಾ ಇಲಾಖೆಗಳಲ್ಲಿ ಮಾಡಿರುವ ಕಾಮಗಾರಿಗಳ ಬಿಲ್ಲುಗಳನ್ನು ವರ್ಷಗಳಿಂದ ಬಾಕಿ ಉಳಿದು ಗುತ್ತಿಗೆದಾರರಿಗೆ ಪಾವತಿಯಾಗದೆ ಅವರು ಆರ್ತೀಕ ಸಮಸ್ಯೆಯಲ್ಲಿ ಸಿಲುಕಿ ಆತ್ಮ ಹತ್ಯೆಯ ಹಾದಿಯನ್ನು ತುಳಿಯುತ್ತಿದ್ದಾರೆ. ಅದನ್ನು ತಪ್ಪಿಸಿ ಬೇಗನೆ ಬಾಕಿ ಬಿಲ್ಲುಗಳನ್ನು ಪಾವತಿಗೆ ಕ್ರಮ ಕೈಗೊಳ್ಳಬೇಕು. ಟೆಂಡರುಗಳಲ್ಲಿ ಪ್ಯಾಕೆಜ ಸಿಸ್ಟಮ ಕರೆಯದೆ ಬಿಡಿ ಬಿಡಿಯಾಗಿ ಟೆಂಡರ ಕರೆದು ಸಣ್ಣ ಗುತ್ತಿಗೆದಾರರಿಗೆ ಕೆಲಸ ಸಿಗುವ ಹಾಗೆ ಮಾಡಬೇಕು ಎಂದರು.

ಈ ಎಲ್ಲಾ ಮೇಲಿನ ವಿಷಯಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೋಳ್ಳಬೇಕೆಂದು ಇದಕ್ಕೆ ಪರಿಹಾರ ದೊರೆಯದಿದ್ದಲ್ಲಿ ಅನಿವಾರ್ಯವಾಗಿ ಎಲ್ಲಾ ಗುತ್ತಿಗೆದಾರರು ಹೊರಾಟಕ್ಕೆ ಇಳಿಯಬೇಕಾತ್ತದೆ ಸಭೇಯಲ್ಲಿ ತೀರ್ಮಾನಿಸಲಾಯಿತು. ನಂತರ ಜಿಲ್ಲಾ ಉಸ್ತಾವರಿ ಸಚಿವರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯತು. ಪ್ರಧಾನ ಕಾರ್ಯದರ್ಶಿ ಸಂಜಯ್ ಆರ್.ಕೆ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here