ಸೇಡಂ: ತಾಲ್ಲೂಕಿನ ಉಡಗ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು 13 ವರ್ಷಗಳಿಂದ ಗ್ರಾಮ ಪಂಚಾಯಿತ್ ಗೆ ತೆರಿಗೆ ಹಣ ಪಾವತಿಸದೇ ವಂಚನೆ ಮಾಡಿದ್ದಾರೆ ಎಂದು ಅಳೋಳ್ಳಿ ಗ್ರಾಪಂ ಸದಸ್ಯ ಮಹಾವೀರ ಅಳೋಳ್ಳಿ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಉಡಗ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು 2012ರಲ್ಲಿ ಉಡಗ್ಗಿ ಗ್ರಾಪಂನಿಂದ ನಾಲ್ಕು ಘಟಕ ಪ್ರಾರಂಭಿಸಲು ಅನುಮತಿ ಪಡೆದುಕೊಂಡಿದ್ದಾರೆ, ಆದರೆ ಸುಮಾರು 13 ವರ್ಷಗಳಿಂದ ಕಾರ್ಖಾನೆಯವರು ಯಾವುದೇ ರೀತಿಯ ತೆರಿಗೆ ಗ್ರಾಪಂಗೆ ಪಾವತಿಸಿರುವುದಿಲ್ಲ ಎಂದು ಆರೋಪ ಮಾಡಿದ್ದಾರೆ.
ಕಾನೂನು ಉಲ್ಲಂಘನೆ ಮಾಡಿ ಬಾರಿ ವಂಚನೆ ಮಾಡಿದ್ದಾರೆ, ರಾಜಾರೋಷವಾಗಿ ಪುನ 5ನೇ ಘಟಕ ಪ್ರಾರಂಭಿಸಲು ಇದೆ ಡಿಸೆಂಬರ್ 21ರಂದು ಪರಿಸರ ಸಾರ್ವಜನಿಕ ಸಭೆ ಕರೆಯಲಾಗಿದೆ.ಗ್ರಾಪಂ ಪಿಡಿಒ ಅವರು ಕಾರ್ಖಾನೆ ಆಡಳಿತ ಮಂಡಳಿ ಅವರಿಗೆ ತೆರಿಗೆ ಹಣ ಪಾವತಿಸಲು ಎರಡು ಬಾರಿ ನೋಟಿಸ್ ಜಾರಿಗೆ ಮಾಡಿದರು ಸಹ ಮೌನವಹಿಸಿದ್ದಾರೆ ಎಂದು ದೂರಿದರು.
ಪುನಃ 5ನೇ ಘಟಕ ಪ್ರಾರಂಭಿಸಲು ಮುಂದಾಗಿದ್ದಾರೆ, ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಾಖೆ, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಂಟಿ ನಿರ್ದೇಶಕರು ಕೈಗಾರಿಕೆ ಇಲಾಖೆ ಅಧಿಕಾರಿಗಳು ಪರಿಸರ ಸಾರ್ವಜನಿಕ ಸಭೆ ರದ್ದು ಪಡಿಸಬೇಕೆಂದು ಮನವಿ ಮಾಡಿದ್ದಾರೆ.