ಭೀಕರ ರಸ್ತೆ ಅಪಘಾತ: ಪರಿವಾರದ ಮೂವರು ಸೇರಿ ನಾಲ್ವರ ಸಾವು

0
63

ಕಲಬುರಗಿ: ಜಿಲ್ಲೆಯ ಅಫಜಲಪುರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಕಮಾಂಡರ್ ಜೀಪ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಐದು ವರ್ಷದ ಮಗು ಸೇರಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.

ಮಾಡ್ಯಾಳ ಗ್ರಾಮದ ಸಂತೋಷ ಹೂವಣ್ಣ ಗೌಡಗಾಂವ (40), ಶಂಕರ ದೇವಪ್ಪ ಜಳಕಿ (55), ಸಿದ್ದಮ್ಮ ಶಂಕರ ಜಳಕಿ ಮತ್ತು ಹುಚ್ಚಪ್ಪ ಮಹಾಂತೇಶ ಜಳಕಿ (5) ಮೃತಪಟ್ಟವರು. ಮಗುವಿನ ತಾಯಿ ಪೂಜಾ ಮಹಾಂತೇಶ ಅವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Contact Your\'s Advertisement; 9902492681

ಘಟನಾ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here