ಯಾಂತ್ರಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ: ಡಾ. ಜಯಶ್ರೀ ರೆಡ್ಡಿ

0
44

ಕಲಬುರಗಿ: ಮನುಷ್ಯ ಇಂದಿನ ಯಾಂತ್ರಿಕ ಯುಗದಲ್ಲಿ ತನ್ನ ನೈತಿಕ ಮೌಲ್ಯಗಳನ್ನು ಕಳೆದು ಕೊಳ್ಳುತಿರುವನು, ವಿದ್ಯಾರ್ಥಿಗಳು ಈ ಯಾಂತ್ರಿಕ ಯುಗದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಹಿಂದಿ ಮತ್ತು ಕನ್ನಡ ವಿಭಾಗದವರು ಹಮ್ಮಿಕೊಂಡ “ನೈತಿಕ ಮೌಲ್ಯಗಳು” ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಜಯಶ್ರೀ ರೆಡ್ಡಿ ಅವರು ಮಾತನಾಡಿದರು.

ಮುಂದುವರೆದು ಇಂದಿನ ಯುಗದಲ್ಲಿ ಎಲ್ಲರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಮಾನವೀಯ ಮತ್ತು ನೈತಿಕ ಮೌಲ್ಯಗಳ ಕುರಿತು ಮಾತನಾಡಿದರು.

Contact Your\'s Advertisement; 9902492681

ಅತಿಥಿಗಳ ಪರಿಚಯ ಮತ್ತು ಸ್ವಾಗತವನ್ನು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗೇಂದ್ರ ಮಸುತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ದಾನಮ್ಮ ಬಿರಾದಾರ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀಮತಿ ಕವಿತಾ ಠಾಕೂರ ಅವರು ವಂದಿಸಿದರು. ಕುಮಾರಿ. ಶೃತಿ ಕುಲಕರ್ಣಿ ಅವರು ಪ್ರಾರ್ಥನೆ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಡಾ. ಮಹೇಶ್ ಗಂವ್ಹಾರ, ಡಾ. ಸುಭಾಷ್ ಡಿ. ಡಾ. ಜ್ಯೋತಿ ಪ್ರಕಾಶ್. ಡಾ. ರೇಣುಕಾ ಎಚ. ಶರಣಮ್ಮ ಕುಪ್ಪಿ. ಶಿವಲೀಲಾ ಡಿ. ಸುಷ್ಮಾ ಕುಲಕರ್ಣಿ. ಕವಿತಾ ಅಶೋಕ್. ಮೇಘನಾ. ಡಾ. ನಾಗರತ್ನ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here