ಅಂಗವಿಕಲರ ಮಶಾಸನ ಹೆಚ್ಚಿಸಬೇಕೆಂದು ಅಂಗವಿಕಲರ ಹಿತ ರಕ್ಷಣ ವೇದಿಕೆ ಆಗ್ರಹ

0
71

ಕಲಬುರಗಿ: ಅಂಗವಿಕಲರಿಗೆ ನೀಡುತ್ತಿರುವ ಮಶಾಸನ ವೇತನ ರೂ. 6000 ವರೆಗೆ ಹೆಚ್ಚಿಸಬೇಕೆಂದು ಗುರುವಾರ ಅಂಗವಿಕಲರ ಹಿತ ರಕ್ಷಣ ವೇದಿಕೆಯಿಂದ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.

ದಿನಬೆಳಗಾದರೆ ದಿನಕ್ಕೆ ರೂ. 200 ಬೆಕಾಗುತ್ತದೆ. ಆದರೆ ಸರಕಾರ ನಮ್ಮಗೆ ನೀಡುತ್ತಿರುವ ಅಂಗವಿಕಲರ ಮಶಾಸನ ಪ್ರತಿ ತಿಂಗಳು 1400 ರೂ. ಈ ಮಶಾನ ಮೊತ್ತ ದಿನ 50ಕ್ಕೂ ಕಡಿಮೆ. ಈ ಅವೈಜ್ಞಾನಿಕ ಮಶಾಸನ ವಿಕಲಚೇತನರ ಬದುಕನ್ನು ಇಂದಿನ ದಿನಗಳಲ್ಲಿ ಅಣಿಕಿಸುವಂತಹದಾಗಿದಲ್ಲದೇ ಇತರರ ಮೇಲೆ ಅವಲಂಭಿತರಾಗುವಂತಾಗಿರುವ ಭಾಗನೆಗಳು ಕಾಡುತ್ತಿದೆ ಎಂದು ವೇದಿಕೆ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಫೇರೊಜ್ ಚುಲಬುಲ್ ಎಂದು ಮನವಿ ಪತ್ರದಲ್ಲಿ ತಿಳಿಸಿದರು.

Contact Your\'s Advertisement; 9902492681

ಅಂಗವಿಕಲರಿಗೆ ನೀಡುತ್ತಿರುವ ಮಶಾಸನವನ್ನು ಪರಿಷ್ಕರಿಸಿ ವಿಕಲಚೇತನರು ಘನತೆ ಮತ್ತು ಸ್ವಲಂಬನೆ ಜೀವನ ನಡೆಸಲು ಸಹಕಾರಿಯಾಗುವ ರೀತಿಯಲ್ಲಿ ರಾಜ್ಯ ಸರಕಾರ ಮಶಾಸನವನ್ನು ಹೆಚ್ಚಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ವೇದಿಕೆಯ ಕಾರ್ಯದರ್ಶಿ ವಾಜಿದ್, ಮಸ್ತಾನ್ ಸಲೀಮ್ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here