ದಾಖಲೆಗಳಿದ್ದಲ್ಲಿ ಪತ್ರಾಗಾರಕ್ಕೆ ತಿಳಿಸಿ

0
73

ಕಲಬುರಗಿ: ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ವಿಭಾಗೀಯ ಪತ್ರಾಗಾರ ಕಛೇರಿ ಇವರ ಸಹಯೋಗದಲ್ಲಿ ‘ಪತ್ರಾಗಾರ ಕೂಟ-2023’ ಒಂದು ದಿನದ ಕಾರ್ಯಾಗಾರವನ್ನು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಇತಿಹಾಸ ಉಪನ್ಯಾಸಕ ಜೆ.ಮಲ್ಲಪ್ಪ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮಕ್ಕಳಲ್ಲಿ ಇತಿಹಾಸದ ಅರಿವು ಇರುವುದು ಬಹುಮುಖ್ಯ ಎಂದು ಹೇಳಿದರು. ಇನ್ನೋರ್ವ ಇತಿಹಾಸ ಉಪನ್ಯಾಸಕರಾದ ಡಾ. ಗೋವಿಂದರಾಜ ಅವರು ಎಂ.ಎಂ.ಕಲಬುರ್ಗಿ, ಅ.ಸುಂದರ ಅವರೊಂದಿಗಿನ ಒಡನಾಟಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು. ಇತಿಹಾಸದ ಓದಿನಲ್ಲಿ ಮೂಲಾಧಾರಗಳ ಕುರಿತು ಅವರು ವಿವರಿಸಿದರು. ಮಸ್ಕಿ ಶಾಸನದ ಮಹತ್ವದಿಂದಾಗಿ ನಾವು ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಲಕ್ಷ್ಮಣ ದಸ್ತಿ ಅವರು ಮಾತನಾಡಿ ಕಲ್ಯಾಣ ಕರ್ನಾಟಕದ ಶ್ರೀಮಂತ ಇತಿಹಾಸದ ಕುರಿತು ವಿವರಿಸಿದರು. ನಾವು 1948ರಲ್ಲಿ ಸ್ವಾತಂತ್ರ್ಯ ಪಡೆಯಲು ಕಾರಣವಾದ ಸನ್ನಿವೇಶ-ಸಂದರ್ಭಗಳನ್ನು ಕುರಿತು ಅವರು ಸವಿವರವಾಗಿ ವಿವರಿಸಿದರು. ಇತಿಹಾಸವನ್ನು ಮತ, ಧರ್ಮ, ವರ್ಗಗಳಾಚೆ ನೋಡಬೇಕಿದೆ ಎಂದರು.

ವಿಭಾಗೀಯ ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ವೀರಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಇತಿಹಾಸವನ್ನು ನಾವು ಪೂರ್ವಾಗ್ರಹ ಪೀಡಿತರಾಗಿ ನೋಡದೆ, ಜನಮುಖಿಯಾಗಿ ಸಮಾಜಮುಖಿಯಾಗಿ ನೋಡಬೇಕಿದೆ ಎಂದರು. ಪತ್ರಾಗಾರದ ದಾಖಲೆಗಳು ನೂರಾರು ವರ್ಷಗಳ ಮನುಷ್ಯನ ನಂಬಿಕೆಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿವೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಣಗೌಡ, ಉಪನ್ಯಾಸಕರಾದ ಡಾ. ಪ್ರಭಾ, ನಾಗರತ್ನಮ್ಮ, ಡಾ. ಮಂಜುಳಾ, ಜಯಶ್ರೀ, ಶೀಲಾದೇವಿ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here