ಕಲಬುರಗಿ; ಸಾಲ ಪಾವತಿಸುವಂತೆ ರೈತರಿಗೆ ಬ್ಯಾಂಕ್ ಗಳಿಂದ ನೋಟಿಸ್

0
72

ಕಲಬುರಗಿ: ಬರಗಾಲ ಸಂಕಷ್ಟ ಎದರಿಸುತ್ತಿರುವ ಕಲಬುರಗಿ ಜಿಲ್ಲೆಯ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ವಸುಲಾತಿಗಾಗಿ ನೋಟಿಸ್ ಕೊಡುವುದು ನಿಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರಕಾರ ಜಿಲ್ಲಾಡಳಿತ ರೈತರ ನೆರವಿಗೆ ಬರಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.

ಕಲಬುರಗಿ ಜಿಲ್ಲೆಯ ಬರಗಾಲ ಬರಪಿಡಿತ ಪ್ರದೇಶ ವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಬರಗಾಲದ ಬಗ್ಗೆ ಲೆಕ್ಕಿಸದೆ ಸಾಲ ವಸುಲಾತಿಗೆ ಮುಂದಾಗಿರುವುದು ಅನ್ಯಾಯ.  ಸಾಲ ವಸುಲಾತಿ ಮಾಡುವುದು ರೈತರ ಬೆನ್ನಿಗೆ ಚೂರಿ ಹಾಕಿ ದಂತೆ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಕೇಂದ್ರ ಸರಕಾರ ಮಿನಾಮೇಶ ಎಣಿಸುತ್ತಿದ್ದು, ತಕ್ಷಣ ರೈತರ  ಬೆಳೆ ಸಾಲ ಮನ್ನಾ ಮಾಡಬೇಕೆಂದು ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟ್ಟಿ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಕಮಲಾಪುರ, ಚಿಂಚೋಳಿ, ಕಾಳಗಿ, ಶಹಾಬಾದ, ಚಿತ್ತಾಪುರ ಸೇರಿದಂತೆ ಬಹುತೇಕ ತಾಲ್ಲೂಕುಗಳ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳು ನೋಟಿಸ್ ನೀಡಿದ ಅವರು ವಾರ್ಷಿಕ 12% ಬಡ್ಡಿ ಪಾವತಿಸಬೇಕು ಅಲ್ಲದೇ ಸಾಲಗಳ ಸೂಚನೆಗಳಂತೆ ಕಾಲಕಾಲಕ್ಕೆ ನಿಗದಿಪಡಿಸಿರುವ ಬಡ್ಡಿದರವನ್ನು ಪಾವತಿಸಬೇಕು. ನೋಟಿಸ್ ತಲುಪಿದ 15 ದಿನಗಳಲ್ಲಿ ಸ್ಪಂದಿಸದಿದ್ದೇರೆ ನೋಟಿಸ್ ಗೆ ಒಪ್ಪಿ ನೀಡಿರುವುದಾಗಿ ಭಾವಿಸುವುದಾಗಿ ನೋಟಿಸ್ ನಲ್ಲಿ ರೈತರಿಗೆ ಸೂಚನೆ ನೀಡಲಾಗುತ್ತಿದೆ.

ಬೆಳೆದ ಬೆಳೆಗೆ ಬೆಲೆ ಇಲ್ಲದಿರುವುದರಿಂದ ಸಾಲದ ಸುಳುವಿನಲ್ಲಿ ಒದ್ದಾಡುವಂತಾಗಿದೆ ಸಾಲದ ಭಾದೆ ತಾಳದೆ ಜಿಗುಪ್ಸೆ ಗೊಂಡು ರೈತರ ಆತ್ಮಹತ್ಯೆಯ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ. ಪ್ರತಿ ವರ್ಷವೂ ರೈತರ ಕೃಷಿ ಚಟುವಟಿಗಳು ಕಮ್ಮಿಯಾಗುತ್ತಿದ್ದು, ಅನ್ನದಾತರಿಗೆ ಉಳಿಗಾಲ ವಿಲ್ಲ ದಂತ ಆಗಿದೆ. ರೈತರ ಆರ್ಥಿಕ ಪರಿಸ್ಥಿತಿ ನೆಲ ಕಚ್ಚುತ್ತಿದೆ. ರೈತರ ಆರ್ಥಿಕ ಪರಿಸ್ಥಿತಿ ಬಲಪಡಿಸುವ ನಿಟ್ಟಿನಲ್ಲಿ ಹೇಳಿಕೊಂಡ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬರಗಾಲದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಅನ್ನದಾತರಿಗೆ ಸಾಲ ವಸುಲಾತಿ ನೋಟಿಸ್ ಕೊಡುತ್ತಿರುವ ರಾಷ್ಟ್ರೀಕೃತ ಬ್ಯಾಂಕ್ ನಿತಿಗೆ ಸರಕಾರ ಮಧ್ಯ  ಪ್ರವೇಶಿಸಿ ರೈತರ ನೆರವಿಗೆ ಬರಬೇಕೆಂದು ಸಂಘದ ಮುಖಂಡರು ಆಗ್ರಹವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here