ಕಲಬುರಗಿ: ತನ್ನ ತಾಯಿಯ ಸಾವಿಗೆ ಕಾರಣಕರ್ತನಾದವನ್ನು ಶೀಘ್ರದಲ್ಲಿ ಹುಡುಕಿ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಅವರು ಶುಕ್ರವಾರ ಖರ್ಗೆ ಪೆಟ್ರೋಲ್ ಬಂಕ್ ರಸ್ತೆಯಲ್ಲಿರುವ ಟೋಯೋಟಾ ಶೋರಮ್ ಹತ್ತಿರದ ತಾಯಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಸಂಚಾರಿ ಪೊಲೀಸರ ತನಿಖೆಯ ಕುರಿತು ಚರ್ಚೆ ನಡೆಸಿದರು.
ಡಿಸೆಂಬರ್ 13 ರಂದು ರಸ್ತೆ ಧಾಟುವಾಗ ಎಂಎಲ್ಸಿಯವರ ತಾಯಿ ಸುಮಿತ್ರಾಬಾಯಿ ಶಾಮರಾವ್ ಅರಳಿ (75) ಸಂಜೆ 6:39 ಗಂಟೆಗೆ ಅತಿ ವೇಗವಾಗಿ ಅಲಕ್ಷತನದಿಂದ ಬೈಕ್ ಸವಾರ ಡಿಕ್ಕಿ ಹೊಡೆದು ಪರಿಣಾಮ ಸಾವನಪ್ಪಿದರು. ಡಿಕ್ಕಿ ಹೊಡೆದು ಸವಾರ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದೆ.
ತಲೆ ಮರೆಸಿಕೊಂಡ ಸವಾರನ ಪತ್ತೆಗೆ ಆಯುಕ್ತರು ವಿಶೇಷ ತಂಡ ರಚಿಸಿದ್ದಾರೆ. ಸಣ್ಣ ಸುಳಿವು ಸಿಗುತ್ತಿಲ್ಲ, ಸ್ವಲ್ಪ ಸುಳಿಯು ಸಿಕ್ಕರೇ ಆರೋಪಿ ಬಂಧಿಸಲಾಗುವುದು ಘಟನೆ ಬಗ್ಗೆ ಸುಕ್ಷ್ಮವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾ ತಂಡದ ಪೊಲೀಸ್ ಅಧಿಕಾರಿ ಖಾಜಾ ಹುಸೇನ್ ತಿಳಿಸಿದರು.
ಘಟನೆ ನಡೆದು 10 ದಿನ ಕಳೆದರು ತಾಯಿಯ ಸಾವಿಗೆ ಕಾರಣನಾದವನ್ನು ಪತ್ತೆ ಹಚ್ಚುವಲಿ ಪೊಲೀಸ್ ಇಲಾಖೆ ವಿಫಲವಾಗಿರುವುದು ಮೇಲ್ನೊಟಕ್ಕೆ ಕಾಣುತ್ತಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿರುವ ಬೈಕ್ ಸವಾರನ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಕಾರ್ಯಾವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಆದಷ್ಟು ಶೀಘ್ರ ತನಿಖೆ ಪೂರ್ಣಗೊಳ್ಳಿಸಿ ತಲೆ ಮರೆಸಿಕೊಂಡಿರುವ ಬೈಕ್ ಸವಾರನ ಪತ್ತೆ ಹಚ್ಚಿ ಎಂದು ಬೀದರ್ ಗೆ ವಾಪಸ್ ತೆರಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಖಾಜಾ ಹುಸೇನ್ ತನಿಖಾ ತಂಡದ ಸಿಬ್ಬಂದಿಗಳು ಮತ್ತು ಹಿರಿಯ ಸಾಹಿತಿ ಮಾಜಿದ್ ದಾಗ್ಗಿ ಸೇರಿದಂತೆ ಮುಂತಾದವರು ಇದ್ದರು.