ಗಣಿತ ಇಲ್ಲದೆ ದೈನಂದಿನ ಜೀವನವಿಲ್ಲ

0
18

ಕಲಬುರಗಿ: ಗಣಿತ ಇಲ್ಲದೆ ದೈನಂದಿನ ಜೀವನವಿಲ್ಲ ಎಂದು ಡಾ. ಸೂರ್ಯಕಾಂತ ಬಿ ಕುಲಕರ್ಣೀ ಹೇಳಿದರು.

ಅವರು ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಮತ್ತು ಗಣಿತ ಲೆಕ್ಕವನ್ನು ಸರಾಗವಾಗಿ ಮಾಡಲು ಗಣಿತ ಕಬ್ಬಣದ ಕಡಲೆ ಎಂಬ ಮನೋಭಾವನೆ ಹೋಗಲಾಡಿಸಿ ಅದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡು ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು ಎಂದು ಹೇಳಿದರು.

Contact Your\'s Advertisement; 9902492681

ಉಪಪ್ರಾಚಾರ್ಯರಾದ ಶ್ರೀ ಶಿವಸಾಯಿ ಮಮದಾಪೂರ ಅವರು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ರಾಮಾನುಜನ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಂದೇ ಮುಖ ಬೆಲೆಯ ವಿವಿದ ವಿನ್ಯಾಸವುಳ್ಳ ನಾಣ್ಯಗಳನ್ನು ಮಕ್ಕಳಿಗೆ ಪರಿಚಯಿಸಿದರು.

ವiಹಾನ ಮೇದಾವಿ ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ ಬದುಕಿದ್ದು ಮಾತ್ರ ಅತ್ಯಲ್ಪ ಕಾಲ ಆದರೆ ಅಷ್ಟು ಕ್ಷಿಪ್ರ ಅವಧಿಲ್ಲಿಯೇ ಮಿಂಚಿ ಉಜ್ವಲ ತಾರೆ ಎನಿಸಿಕೊಂಡಿದ್ದಾರೆ. ಗಣಿತ ಸಂಶೋಧನೆಗೆ ಬೇಕಾದ ಪ್ರತಿಬೆ ಮೇದಾಶಕ್ತಿ ಘನ ಪಾಂಡಿತ್ಯ ಅವರಲ್ಲಿ ಇದ್ದವು. ವಿದ್ಯಾರ್ಥಿಗಳಿಂದ ಹೊಸ ಸಂಶೋಧನೆಗಳು ನಡೆಯಬೇಕು ಅದಕ್ಕೆ ಪೂರಕವಾಗಿ ಶಿಕ್ಷಕರು ಅವರನ್ನು ಪೋತ್ಸಾಹಿಸಬೇಕು. ವಿದ್ಯಾರ್ಥಿಗಳ ಪ್ರಯತ್ನದಿಂದ ಹೊಸ ಸಂಶೋಧಿತ ತಂತ್ರಜ್ಞಾನಗಳು ಸಮಾಜಕ್ಕೆ ಉಪಯುಕ್ತವಾಗಬೇಕು ಎಂದು ಹೇಳಿದರು.

ಈ, ಸಂದರ್ಭದಲ್ಲಿ ಸೂರ್ಯಕಾಂತ ಕುಲಕರ್ಣೀ, ಸಿದ್ದಣ್ಣ ಹತಗುಂದಿ, ಕಾವೇರಿ ಘಾಟೇ, ಕವಿತಾ ಹಿರೇಮಠ, ದೇವಿಂದ್ರಪ್ಪ ವಿಶ್ವಕರ್ಮ ಅನಂತ ಕುಮಾರ, ಅಜೀತ ಕುಮಾರ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here