ಕಲಬುರಗಿ: ಚಿತ್ತದುರ್ಗ ಜಿಲ್ಲೆಯಲ್ಲಿ ನಡೆದ ಮಾದಿಗರ ಮುನ್ನಡೆ ಸಮಾವೇಶದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮೇಲೆ ಎರಗಿ ಅವಮಾನಿಸಿದ ಕಾಂಗ್ರೆಸ್ ಗೂಂಡಾಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಜಿಲ್ಲಾ ಮಾದಿಗ ಮುಖಂಡರಾದ ರಾಜು ವಾಡೇಕರ್ ಹಾಗೂ ಮಂಜುನಾಥ ನಾಲವಾರಕರ್ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾದಿಗ ಸಮುದಾಯದ ಹಿರಿಯ ಮುಖಂಡ ಎಂಬುದನ್ನು ಪರಿಗಣಿಸದೇ, ಅವರನ್ನು ಅವಮಾನಿಸಿರುವುದು ಖಂಡನೀಯ ಎಂದಿದ್ದಾರೆ.
ಈ ಮುಂದಿನ ಜಿಲ್ಲೆಗಳಲ್ಲಿ ನಡೆಯುವ ಮಾದಿಗ ಸಮುದಾಯದ ಸಭೆ, ಸಮಾರಂಭ, ಪತ್ರಿಕಾ ಗೋಷ್ಠಿ ಹಾಗೂ ಸಮಾವೇಶಕ್ಕೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸುವಂತೆ ಆಗ್ರಹಿಸಿರುವ ಅವರು, ಮುಂದೆ ಬೇರೆ ಯಾವುದೇ ಜಿಲ್ಲೆಗಳಲ್ಲಿ ಇಂತಹ ಕೃತ್ಯ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಬೇಕು ಎಂದು ಒತ್ತಾಯಿಸಿದ್ದಾರೆ.