ಸುರಪುರ:ಇಂದು ರಾಷ್ಟ್ರೀಯ ರೈತರ ದಿನವನ್ನು ನಾವೆಲ್ಲರು ಕೂಡ ಆಚರಣೆ ಮಾಡುತ್ತಿದ್ದೇವೆ,ಈ ದಿನ ಕೇವಲ ನಾವು ರೈತರು ಮಾತ್ರ ಆಚರಣೆ ಮಾಡುವುದಲ್ಲ ದೇಶದ ಎಲ್ಲರು ರೈತರನ್ನು ಸ್ಮರಿಸುವ ದಿನ ಇದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿದರು.
ಸಂಘಟನೆ ವತಿಯಿಂದ ನಗರದ ಕುಂಬಾರಪೇಟ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಶ್ರಮಿಕರ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದು ದೇಶದಲ್ಲಿನ ರೈತರು ಅನೇಕ ಸಮಸ್ಯೆಗಳನ್ನು ಹೆದರಿಸುವಂತಾಗಿದೆ,ಆಳ್ವಿಕೆ ನಡೆಸುವ ಸರಕಾರಗಳು ರೈತರನ್ನು ನಿರ್ಲಕ್ಷಿಸುವೆ,ಇದೇ ರೀತಿಯಾದಲ್ಲಿ ಎಲ್ಲ ರೈತರು ದಂಗೆ ಏಳುವ ಸಮಯ ಬರಲಿದೆ,ಎಲ್ಲ ರೈತರು ಒಂದಾಗಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡಿದಾಗ ರೈತರ ದಿನ ಆಚರಣೆ ಮಾಡಿದ್ದು ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನೇತೃತ್ವವಹಿಸಿದ್ದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪುರ ಮಾತನಾಡಿ,ದೇಶದಲ್ಲಿನ ರೈತರಿಗಾಗಿ ಅನೇಕ ಉತ್ತಮ ಕಾರ್ಯ ಮಾಡಿದ ಅಂದಿನ ಪ್ರಧಾನಿ ಚೌದ್ರಿ ಚರಣಸಿಂಗ್ ಅವರು ಹುತಾತ್ಮರಾದ ಈ ದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.ಅಲ್ಲದೆ ನಾವೆಲ್ಲ ರೈತರು ನಮ್ಮ ಹಕ್ಕುಗಳಿಗಾಗಿ ಇಂದು ಎಲ್ಲರು ಒಂದಾಗಿ ಹೋರಾಟ ಮಾಡುವ ಅಗತ್ಯವಿದೆ,ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸಲು ಎಲ್ಲರು ಒಂದಾಗಿ ಹೋರಾಟವನ್ನು ಮಾಡೋಣ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಚೌದ್ರಿ ಚರಣಸಿಂಗ್,ಪ್ರೋ:ನಂಜುಂಡಸ್ವಾಮಿಯವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಹುಣಸಗಿ ತಾಲೂಕು ಗೌರವಾಧ್ಯಕ್ಷ ಸಾಹೇಬಗೌಡ ಮದಲಿಂಗನಾಳ,ಗದ್ದೆಪ್ಪ ನಾಗಬೇವಿನಾಳ,ವೆಂಕಟೇಶಗೌಡ ಕುಪಗಲ್,ರಾಘು ಕುಪಗಲ್,ಮಲ್ಲಣ್ಣ ಹಾಲಬಾವಿ,ಭೀಮಣ್ಣ ತಿಪ್ಪನಟಿಗಿ,ಶಿವನಗೌಡ ರುಕ್ಮಾಪುರ,ಮಾನಪ್ಪ ಕೊಂಬಿನ್,ಯಂಕಪ್ಪ ದಾಸರ್,ನಾಗಪ್ಪ ಕುಪಗಲ್,ತಿಪ್ಪಣ್ಣ ಜಂಪಾ,ನಿಂಗನಗೌಡ ಗುಳಬಾಳ,ಬಸವರಾಜ ಬೋವಿ,ಖುದಾಭಕ್ಷಿ ಮಾಲಗತ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.