ಕೋಣ ಕುರಿ ಬಲಿ ತಡೆಯಲು ಡಿಎಸ್‍ಎಸ್ ಕ್ರಾಂತಿಕಾರಿಗಳ ಮನವಿ

0
15

ಸುರಪುರ: ತಾಲೂಕಿನ ವಾಗಣಗೇರಾ ಗ್ರಾಮದಲ್ಲಿ ಜನೆವರಿ 01 ರಂದು ರಾತ್ರಿ ಗ್ರಾಮ ದೇವತೆ ಜಾತ್ರೆ ಇದ್ದು ಈ ಸಂದರ್ಭದಲ್ಲಿ ಕೋಣ ಕುರಿತಗಳ ಬಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದ್ದು,ಇದನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ನಗರದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನೆಡಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ದೇವಿಕೇರಾ ಗ್ರಾಮದಲ್ಲಿ ನಡೆಯುತ್ತಿದ್ದ ಕೋಣ ಕುರಿ ಬಲಿಯನ್ನು ತಡೆಯುವ ಮೂಲಕ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಉತ್ತಮವಾದ ಕಾರ್ಯ ಮಾಡಿದ್ದು,ಅದರಂತೆ ಈಗ ಜನೆವರಿ 01 ರಂದು ರಾತ್ರಿ ವಾಗಣಗೇರಾ ಗ್ರಾಮದಲ್ಲಿ ಗ್ರಾಮ ದೇವತೆ,ಮರೆಮ್ಮ,ಕೆಂಚಮ್ಮ ದೇವರ ಹೆಸರಲ್ಲಿ ಕೋಣ ಕುರಿಗಳ ಬಲಿ ನಡೆಯಲಿದ್ದು ಜಿಲ್ಲಾಡಳಿತ,ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಬಲಿಯನ್ನು ತಡೆಯಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಡಿವೈಎಸ್ಪಿಗೆ ಬರೆದ ಮನವಿಯನ್ನು ಪಿ.ಎಸ್.ಐ ಸಿದ್ರಾಮಪ್ಪ ಯಡ್ರಾಮಿ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ,ಮಾನಪ್ಪ ಕರಡಕಲ್,ಮಲ್ಲಿಕಾರ್ಜುನ ಕುರಕುಂದಿ,ಮಲ್ಲಿಕಾರ್ಜುನ ಶಾಖನವರ್,ಮಲ್ಲಿಕಾರ್ಜುನ ಆಶಿನಾಳ,ಮಾನಪ್ಪ ಬಿಜಾಸಪುರ,ಮೂರ್ತಿ ಬೊಮ್ಮನಹಳ್ಳಿ,ತಾಲೂಕು ಸಂಚಾಲಕ ಬಸವರಾಜ ದೊಡ್ಮನಿ,ಮಲ್ಲಿಕಾರ್ಜುನ ತಳ್ಳಳ್ಳಿ, ಜಟ್ಟೆಪ್ಪ ನಾಗರಾಳ,ಬುದ್ಧವಂತ ನಾಗರಾಳ,ರವಿಚಂದ್ರ ಬೊಮ್ಮನಹಳ್ಳಿ,ಖಾಜಾಹುಸೇನ್ ಗುಡಗುಂಟಿ,ಮಹೇಶ ಯಾದಗಿರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here