ಕಲಬುರಗಿ: ವಿದ್ಯಾರ್ಥಿಗಳು ಜೀವನೋಪಾಯ ಶಿಕ್ಷಣ ಹೊಂದದೆ, ಜೀವನ ಶಿಕ್ಷಣ ಪಡೆಯಬೇಕು.ಬಲವಂತವಾಗಿ ಔಷಧ ನೀಡಿ ರೋಗಿಗಳ ರೋಗವನ್ನು ಗುಣಪಡಿಸುವಂತೆ, ವಿದ್ಯಾರ್ಥಿ ಯುವಜನರಿಗೆ ಬಲವಂತವಾಗಿ ಸಾಮಾಜಿಕ ಮತ್ತು ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಅನಿವಾರ್ಯತೆ ವಾಗಿದೆ ಎಂದು ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿಗಳಾದ ಡಾ. ಚಂದ್ರಶೇಖರ್ ದೊಡ್ಡಮನಿ ಹೇಳಿದರು.
ಸರಕಾರಿ ಪದವಿ ಪೂರ್ವ ಕಾಲೇಜು ( ಎಂಪಿ ಎಚ್ ಎಸ್ ) ಕಲಬುರಗಿಯ 2023-24ನೇ ಸಾಲಿನ ಎನ್‍ಎಸ್‍ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸರ್ವೋದಯ ಸಮಾಜ ನಿರ್ಮಿಸಿ, ಆರೋಗ್ಯವಂತ ಭಾರತ ನಿರ್ಮಿಸಬೇಕೆಂದರು. ಖ್ಯಾತ ಮಹಿಳಾ ಚಿಂತಕರಾದ ಕೆ. ನೀಲಾ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಜನರಿಗೆ ನೈರ್ಮಲ್ಯತೆ, ಆರೋಗ್ಯ, ಅಕ್ಷರ ಹಾಗೂ ಸಾಮಾಜಿಕ ಸಮಾನತೆ ಅರಿವನ್ನು ಮೂಡಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಂಶುದ್ದೀನ್ ಪಟೇಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಯಶ್ರೀ ತಳಕೇರಿ,ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ. ರಾಜೇಂದ್ರ ಬಿ ದೊಡ್ಡಮನಿ, ಬಿ ಎಸ್ ಮಾಲಿಪಾಟೀಲ್,ಅಶೋಕ್ ತಳಕೇರಿ, ಗುರುದತ್ತ ಪಿ. ಕುಲಕರ್ಣಿ, ದೇವಿದಾಸ ಪವಾರ್, ಸುಭಾಷ್ ಚಂದ್ರ ಆರ್, ನಾಗಪ್ಪ ಕೆ, ಸಂಗೀತಾ ಕಪೂರ್, ಜ್ಯೋತಿ ಹೊಸಮನಿ, ಸುಭೋದಿನಿ ಜಹಗೀರದಾರ್, ಚಿತಂಬರಾವ್ ಮೇತ್ರಿ, ಮರಿಯಪ್ಪ ಗೋನಾಲಕರ್, ಡಾ. ಶಾಹಿನ್ ಕೌಸರ್, ಭಾಗ್ಯಶ್ರೀ ಕುಲಕರ್ಣಿ, ವೀರಭದ್ರಯ್ಯ ಸ್ವಾಮಿ, ಸತೀಶ್ ಕಟಕೆ ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿ ಸ್ವಯಂಸೇವಕರು ಉಪಸ್ಥಿತರಿದ್ದರು.