ಕಲಬುರಗಿ: ರೈತ ದಿನಾಚರಣೆ ಅಂಗವಾಗಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ರೈತ ಸಂಭ್ರಮ ಕಾರ್ಯಕ್ರಮನ್ನು ಮಾಜಿ ಗ್ರಾಮ ಪಂಚಾಯತ್ ಖಣದಾಳ ಅಧ್ಯಕ್ಷ ಪವನಕುಮಾರ ವಳಕೇರಿ ರವರ ಉದ್ಘಾಟಿಸಿ, ರೈತರಿಗೆ ಸರಕಾರ ಸದಾ ಸಹಕಾರ ನೀಡಬೇಕು ಅಲ್ಲದೆ ರೈತರಿಗೆ ಸರಕಾರ ವತಿಯಿಂದ ಗೌರವ ನೀಡಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ತಾಪುರ ಕಂಬಳೇಶ್ವರ ಮಠದ ಷ.ಬ್ರ. ಸೋಮಶೇಖರ ಶಿವಾಚಾರ್ಯ ರು ವಹಿಸಿದರು, ಅಧ್ಯಕ್ಷತೆಯನ್ನು ಕುಸನೂರ ಗ್ರಾಮ ಪಂಚಾಯತ್ ಅಧ್ಯಕ್ಷ ಕುಪೇಂದ್ರ ಬಲಗಾಲಿ ವಹಿಸಿದರು.
ಮುಖ್ಯ ಅಥಿತಿಗಳಾಗಿ ಬಿ,ಎಮ್ ಪಾಟೀಲ ಕರವೇ,ರಾಜ್ಯ ವಕ್ತಾರರು, ಗಣೇಶ ವಳಕೇರಿ, ಶರಣಕುಮಾರ ಗ್ರಾಮ ಸದಸ್ಯರು ಕುಸನೂರು, ವೀರಭದ್ರಪ್ಪ ದೋಡಮನಿ,ಕನ್ನಡ ಪರ ಹೋರಾಗಾರ ಮಂಜುನಾಥ ನಾಲವಾರಕರ್, ಕಾರ್ಯಕ್ರಮದ ನೇತ್ರತ್ವ ಕರವೇ ಜಿಲ್ಲಾಧ್ಯಕ್ಷರಾದ ಶರಣು ಹೋಸಮನಿ, ವಹಿಸಿದರು.
ಸಂಗೀತ ಕಾರ್ಯಕ್ರವನ್ನು ಜ್ಯೂ ವಿಷ್ಣುವರ್ಧನ್ ರವಿ ಕೋರಿ ರವರ ನೀಡಿದರು, ಈ ಸಂದರ್ಭದಲ್ಲಿ ಕರವೇ,ಮಹಿಳಾ ಜಿಲ್ಲಾಧ್ಯಕ್ಷರಾದ ಅನ್ನಪೂರ್ಣ ,ಮಹಿಳಾ ಜಿಲ್ಲಾ ಉಪಾಧ್ಯಕ್ಷರಾದ ಸುರೇಖಾ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಕೋಳ್ಲುರು,ಜಿಲ್ಲಾ ಗೌರವಧ್ಯಕ್ಷರಾದ ವಿನೋದಕುಮಾರ ಖೇಣೆ ಭಾಗವಹಿಸಿದರು.
ವಿವಿಧ ಗಣ್ಯರು, ವಿವಿಧ ಪಕ್ಷಗಳ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕ ರತ್ನ ಹಾಗೂ ಪ್ರಗತಿ ಪರ ರೈತರಿಗೆ ನೇಗಿಲಯೋಗಿ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.