ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಹುಲಿ ಚರ್ಮ ಪತ್ತೆ; ಅರಣ್ಯ ಅಧಿಕಾರಿಗಳ ವಶಕ್ಕೆ

0
45

ಸುರಪುರ:ತಾಲೂಕಿನ ತಿಂಥಣಿ ಗ್ರಾಮದಲ್ಲಿನ ಜಗದ್ಗುರು ಮೌನೇಶ್ವರ ದೇವಸ್ಥಾನದ ಬಳಿಯಲ್ಲಿನ ಈಶ್ವರ ದೇವಸ್ಥಾನದ ಮುಂಭಾಗದಲ್ಲಿನ ಪಾನ್ ಡಬ್ಬಿಯ ಮೇಲೆ ಹುಲಿ ಚರ್ಮ ಪತ್ತೆಯಾಗಿದ್ದು,ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.

ಶನಿವಾರ ರಾತ್ರಿ ಈಶ್ವರ ದೇವಸ್ಥಾನದ ಬಳಿಯಲ್ಲಿನ ಪಾನ್ ಡಬ್ಬಾದ ಮೇಲೆ ಪ್ಲಾಸ್ಟಿಕ್ ಇರುವುದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ,ನಂತರ ತಡರಾತ್ರಿ 1 ಗಂಟೆಯ ವೇಳೆಗೆ ಸುರಪುರ ಠಾಣೆಯ ಪಿಎಸ್‍ಐ ಕೃಷ್ಣಾ ಸುಬೇದಾರ ಮತ್ತು ತಂಡ ಆಗಮಿಸಿ ನೋಡಿದಾಗ,ಪ್ಲಾಸ್ಟಿಕ್‍ನಲ್ಲಿ ಹುಲಿ ಚರ್ಮ ಇರುವುದು ಗೊತ್ತಾಗಿದೆ.ನಂತರ ಅದನ್ನು ಠಾಣೆಗೆ ತರಲಾಗಿದೆ.ನಂತರ ರವಿವಾರ ಮುಂಜಾನೆ ತಿಂಥಣಿ ಗ್ರಾಮದಲ್ಲಿ ಹುಲಿ ಚರ್ಮ ದೊರೆತ ಸ್ಥಳಕ್ಕೆ ತೆರಳಿ ಪಂಚನಾಮೆ ಮಾಡಲಾಗಿದೆ.

Contact Your\'s Advertisement; 9902492681

ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹುಲಿ ಚರ್ಮವನ್ನು ಒಪ್ಪಿಸಲಾಗಿದೆ.ಈ ಸಂದರ್ಭದಲ್ಲಿ ಭಾಗವಹಿಸಿದ್ದ ತಿಂಥಣಿ ಗ್ರಾಮ ಪಂಚಾಯತಿ ಸದಸ್ಯ ಬೈರಣ್ಣ ಅಂಬಿಗೇರ ಮಾತನಾಡಿ,ಈಶ್ವರ ದೇವಸ್ಥಾನದಲ್ಲಿ ಸಂಗಯ್ಯ ಎನ್ನುವಂತೆ ಸಾಧು ಒಬ್ಬರು ಇರುತ್ತಿದ್ದರು,ಅವರು ಇತ್ತೀಚೆಗೆ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದಾರೆ,ಅವರ ಕೊಠಡಿಯ ಬೀಗವನ್ನು ತೆಗೆಯಲಾಗಿದೆ,ಈ ಹುಲಿ ಚರ್ಮ ಅವರ ಕೊಠಡಿಯಲ್ಲೆ ಇರುವುದಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

ಅಲ್ಲದೆ ದಲಿತ ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಗುಡಿಮನಿ ಹುಣಸಿಹೊಳೆ ಮಾತನಾಡಿ,ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಿ ಹುಲಿ ಚರ್ಮ ಯಾರಿಗೆ ಸೇರಿದ್ದು,ಇದು ಎಲ್ಲಿಂದ ಬಂತು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹುಲಿ ಚರ್ಮದಂತೆ ಕಾಣಿಸುತ್ತದೆ ಆದರೆ ಇದು ಅಸಲಿಯೋ ನಕಲಿಯೋ ಎನ್ನುವುದು ಪ್ರಯೋಗಾಲಯ ದಿಂದ ತಿಳಿದು ಬರಲಿದೆ,ಇದು ಎಲ್ಲಿಂದ ಬಂತು ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಬೇಕಿದೆ. -ಕೃಷ್ಣಾ ಸುಬೇದಾರ ಪಿಎಸ್‍ಐ

ಹುಲಿಯ ಚರ್ಮ ಈಶ್ವರ ದೇವಸ್ಥಾನದಲ್ಲಿದ್ದ ಸಂಗಯ್ಯ ಎನ್ನುವ ಸಾಧುವಿಗೆ ಸೇರಿದ್ದು ಎನ್ನುವ ಅನುಮಾನವಿದೆ ಸರಿಯಾದ ತನಿಖೆ ನಡೆಸಿ ಆರೋಪಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು. -ಬೈರಣ್ಣ ಅಂಬಿಗೇರ ಗ್ರಾ.ಪಂ ಸದಸ್ಯ ತಿಂಥಣಿ

ರಾಷ್ಟ್ರ ಪ್ರಾಣಿ ಹುಲಿಯ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹುಲಿಯನ್ನು ಕೊಂದಿರುವುದು ಮಹಾ ಅಪರಾಧವಾಗಿದ್ದು,ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ನಮ್ಮ ಸಂಘಟನೆ ಹೋರಾಟ ನಡೆಸಲಿದೆ. -ಮರಿಲಿಂಗಪ್ಪ ಗುಡಿಮನಿ ದಲಿತ ಸೇನೆ ತಾ.ಅಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here