ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ

0
18

ಕಲಬುರಗಿ:ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜಯನಗರ ಬಡಾವಣೆಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಎಕೆಂದರೆ ಈ ವರ್ಷ ಮಳೆ ಕಡಿಮೆಯಾಗಿದ್ದರಿಂದ ಬಡಾವಣೆಯಲ್ಲಿರುವ ಕೆಲವು ಕೊಳವೆ ಬಾವಿಗಳು ಬತ್ತಿ ಹೋಗಿವೆ.ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಲಿದೆ.ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ.ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇಂದು ಆಯುಕ್ತರಿಗೆ ನೀಡಿದ ಪತ್ರದಲ್ಲಿ ಕಳೆದ ಬೇಸಿಗೆಯಲ್ಲಿ ಈ ಕುರಿತು ಮಹಾನಗರ ಪಾಲಿಕೆ ಗಮನಕ್ಕೆತಂದರೂ ಯಾವುದೇ ಪ್ರಯೋಜನವಾಗಿಲ್ಲ.ಬಡಾವಣೆಯಲ್ಲಿರುವ ಶಿವಮಂದಿರದ ಆವರಣದಲ್ಲಿರುವ ಬೋರವೆಲ್ ಇನ್ನಷ್ಟು ಆಳವಾಗಿ ಕೊರೆಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ.ಮತ್ತು ಇದೇ ಆವರಣದಲ್ಲಿ ಹೊಸ ಕೊಳವೆ ಬಾವಿ ಹಾಕುವಂತೆ ಕೂಡ ಒತ್ತಾಯ ಮಾಡಲಾಗಿದೆ.ಆದ್ದರಿಂದ ತಾವು ಈಗಲೇ ಈ ಕುರಿತು ಶೀಘ್ರದಲ್ಲೇ ಕೊಳವೆ ಬಾವಿಗಳನ್ನು ಹಾಕಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಜಯನಗರದಲ್ಲಿ ಹೊಸದಾಗಿ ನಿರ್ಮಾಣವಾದ ಮುಖ್ಯ ರಸ್ತೆಯಲ್ಲಿ(ಎಕ್ಸಾನ್ ಆಸ್ಪತ್ರೆ ಎದುರಿನ ರಸ್ತೆ)ಸ್ಪೀಡ್ ಬ್ರೇಕರ್ ಇಲ್ಲದೆ ಇಲ್ಲದೆ ಇರುವುದರಿಂದ ಬೈಕ್ ಹಾಗೂ ಇತರೆ ವಾಹನಗಳು ಭಾರಿ ವೇಗವಾಗಿ ಸಂಚರಿಸುತ್ತವೆ.ಇದರಿಂದ ಅಪಘಾತಗಳು ಸಂಭವಿಸಿವೆ.ಈ ರಸ್ತೆಯಲ್ಲಿ ಬಡಾವಣೆಯ ಜನರು ಓಡಾಡುವುದೇ ದುಸ್ತರವಾಗಿದೆ.ಕೂಡಲೆ ತಾವು ಸ್ಪೀಡ್ ಬ್ರೇಕರ್ ಅಳವಡಿಸಬೇಕು.ಹಾಗೂ ಬಡಾವಣೆಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛ ಗೊಳಿಸಬೇಕು.ನಾಯಿಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಬೇರೆಡೆ ಸಾಗಿಸಲು ಕ್ರಮ ಕೈಗೊಳ್ಳಬೇಕು.ಮೇಲಿನ ನಮ್ಮ ಬೇಡಿಕೆಗಳನ್ನು ತಾವು ಶೀಘ್ರವೆ ನೆರವೇರಿಸಬೇಕು ಎಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಟ್ರಸ್ಟ್ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ವೀರೇಶ ದಂಡೋತಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಸದಸ್ಯರಾದ ಎಸ್.ಡಿ.ಸೇಡಂಕರ, ನಾಗರಾಜ ಖೂಬಾ, ಮನೋಹರ ಬಡಶೇಷಿ, ಮಲ್ಲಯ್ಯ ಸ್ವಾಮಿ ಗಂಗಾಧರಮಠ. ಮುಖಂಡರಾದ ಪರಮೇಶ್ವರ ಹಡಪದ,ಅಮೀತ ರಾಜಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here