ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 100 ವಿದ್ಯುತ್ ಚಾಲಿತ ಬಸ್‍ಗಳ ಲೋಕಾರ್ಪಣೆ

0
21

ಬೆಂಗಳೂರು; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ 100 ವಿದ್ಯುತ್ ಚಾಲಿತ ಹವಾನಿಯಂತ್ರಣ ರಹಿತ ಬಸ್‍ಗಳನ್ನು ವಿಧಾನಸೌಧದ ಪೂರ್ವದ್ವಾರದಲ್ಲಿರುವ ಬೃಹತ್ ಮೆಟ್ಟಿಲುಗಳ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು.

ಟಾಟಾ ಮೋಟಾರ್ಸ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಲಿ. ರವರ ನಿರ್ಮಾಣದ ಹವಾನಿಯಂತ್ರಣ ರಹಿತ ವಿದ್ಯುತ್ ಚಾಲಿತ ಬಸ್‍ಗಳು 35 ಆಸನಗಳ ಸಾಮಥ್ರ್ಯವನ್ನು ಹೊಂದಿದ್ದು, ಬಸ್ಸಿನ ಒಳಭಾಗದಲ್ಲಿ 3 ಕ್ಯಾಮೆರಾ ಹಾಗೂ 1 ಹಿಂಬದಿಯ ಕ್ಯಾಮೆರಾ ಅಳವಡಿಸಲಾಗಿದೆ.

Contact Your\'s Advertisement; 9902492681

ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್, ವಾಹನ ಸ್ಥಳದ ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆ, ಹಿರಿಯ ನಾಗರೀಕರು, ದೈಹಿಕವಾಗಿ ಅಶಕ್ತರಾಗಿರುವ ವ್ಯಕ್ತಿಗಳು, ವೀಲ್ ಚೇರ್ ಬಳಸುವ ಪ್ರಯಾಣಿಕರು ಸುಲಭವಾಗಿ ಪ್ರವೇಶಿಸಲು ವೀಲ್‍ಚೇರ್ ರಾಂಪ್ ವ್ಯವಸ್ಥೆಯಂತಹ ಸೌಲಭ್ಯಗಳನ್ನು ಬಸ್‍ಗಳಲ್ಲಿ ಕಲ್ಪಿಸಲಾಗಿದೆ.

298 ಕೆ.ಡಬ್ಲ್ಯೂ.ಹೆಚ್ ಬ್ಯಾಟರಿ ಸಾಮಥ್ರ್ಯ ಹೊಂದಿರುವ ಈ ಬಸ್ಸುಗಳಲ್ಲಿ ವಾಯ್ಸ್ ಅನೌನ್ಸೆಂಟ್ ವ್ಯವಸ್ಥೆ, 4 ಎಲ್.ಇ.ಡಿ ನಾಮಫಲಕಗಳು, ಫೈರ್ ಡಿಟೆಕ್ಷನ್ ಮತ್ತು ಅಲರಾಂ ವ್ಯವಸ್ಥೆಯನ್ನು ಹೊಂದಿದೆ. ವಾಹನ ಸ್ಥಳದ ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆ ಹಾಗೂ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.

ಕೋರಿಕೆ ನಿಲುಗಡೆಗಳಿಗಾಗಿ ಸ್ಟಾಪ್ ಬಟನ್ ವ್ಯವಸ್ಥೆಯಿದ್ದು, ಪ್ರಯಾಣಿಕರ ಸುರಕ್ಷತಾ ಕ್ರಮವಾಗಿ ಬಸ್ ಚಾಲನೆಯಲ್ಲಿರುವಾಗ ನ್ಯೂಮ್ಯಾಟಿಕ್ ಬಾಗಿಲುಗಳು ತೆರೆಯುವುದಿಲ್ಲ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಬಸ್‍ಗಳಲ್ಲಿ, ಪ್ರಯಾಣಿಕರ ಸುರಕ್ಷತೆಯ ಸ್ನೇಹಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ವಿದ್ಯುತ್ ಚಾಲಿತ ಹವಾನಿಯಂತ್ರಣ ರಹಿತ ಬಸ್‍ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಕ್ರೀಡಾ ಸಚಿವ ನಾಗೇಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here