ಸಿದ್ದಾರ್ಥ ಮೂಕ ಮತ್ತು ಕಿವುಡರ ಶಾಲೆ ಮಕ್ಕಳ ರಾಜ್ಯ ಪ್ರವಾಸ: ಸಾಮಗ್ರಿ ವಿತರಣೆ

0
12

ಕಲಬುರಗಿ; ನಗರದ ಸಿದ್ದಾರ್ಥ‌ ಮೂಕ ಮತ್ತು ಕಿವುಡರ ಶಾಲೆಯ ಮಕ್ಕಳು ಇದೇ ಜನೆವರಿ 2ರಂದು ಕರ್ನಾಟಕ ‌ಪ್ರವಾಸ ಕೈಗೊಂಡಿರುವ ಹಿನ್ನೆಲೆ ದಿನಸಿ‌ ಸಾಮಗ್ರಿಗಳನ್ನು ನೀಡಲಾಯಿತು.

ನಗರದ ಸಿದ್ಧಾರ್ಥ‌ ಕಿವುಡ ಮತ್ತು ಮೂಕರ ಶಾಲೆಯ ಮಕ್ಕಳು ಪ್ರತಿ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ಪ್ರವಾಸ ಕೈಗೊಂಡ ಹಿನ್ನೆಲೆ ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒಂದು ವಾರಕ್ಕೆ ಬೇಕಾಗುವ ಸಂಪೂರ್ಣ ದಿನಸಿ ಸಾಮಗ್ರಿಗಳನ್ನು ದಾನಿಗಳ ಸಹಕಾರದಿಂದ ಒದಗಿಸಿ ಕೊಡಲಾಯಿತು.

Contact Your\'s Advertisement; 9902492681

ಕಾರ್ಯಕ್ರಮ ಅಧ್ಯಕ್ಷ ವಹಿಸಿದ ಕೋಮಲ್ ಹೊಟೇಲ್ ಮಾಲಿಕರಾದ ಸತ್ಯನಾಥ ಶೆಟ್ಟಿ ಮಾತನಾಡಿ, ವಿಶೇಷ ಚೇತನ ಮಕ್ಕಳೆಂದರೆ ದೇವರಿಗೆ ಸಮಾನರು ಇಂತಹ ಮಕ್ಕಳಿಗೆ ಅಳಿಲು ಸೇವೆ ಮಾಡಲು ದೊರಕಿದ್ದು ನನ್ನ ಭಾಗ್ಯ.. ನಾಲ್ಕುಚಕ್ರ ತಂಡ ಬಹಳಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬರುತಿದ್ದಾರೆ ಮುಂದೆಯೂ ಕೂಡ ನಾಲ್ಕುಚಕ್ರ ತಂಡದ ಸೇವಾ ಕಾರ್ಯಗಳಿಗೆ ಕೈ ಜೋಡಿಸುವೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ‌ದ ಮಾಜಿ ಸೈನಿಕರಾದ ಸಿದ್ದಲಿಂಗಪ್ಪ ಮಲಶೆಟ್ಟೆ ಮಾತನಾಡಿ, ಇಷ್ಟು ವರ್ಷಗಳ ಕಾಲ ದೇಶ ಸೇವೆ ಮಾಡಿ ಬಂದಿರುವೆ ಇನ್ನುಮುಂದೆ ಇಂತಹ ಮಕ್ಕಳ ಸೇವೆ ಮಾಡುವೆ ಇಲ್ಲಿಯ ಮಕ್ಕಳು ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ.. ಅಪ್ಪ ಅಮ್ಮನಿಂದ ದೂರ ಉಳಿದ ಮಕ್ಕಳಿಗೆ ಇಲ್ಲಿ ವಸತಿ ನೀಡಿ ಶಿಕ್ಷಣ ನೀಡುತ್ತಿರುವ ಶಾಲೆಯ ಆಡಳಿತ ಮಂಡಳಿಗೆ ಧನ್ಯವಾದಗಳು ನಾಲ್ಕುಚಕ್ರ ತಂಡದ ಸೇವಾಕಾರ್ಯ ಪ್ರೇರಣಾದಾಯಕ ಇಂತಹ ಸಂಸ್ಥೆಗಳಿಗೆ ಕೈಲಾದಷ್ಟು ಸಹಕರಿಸೊಣ.

ಕಾರ್ಯಕ್ರಮ ಅತಿಥಿಗಳಾಗಿ ಆಗಮಿಸಿದ ಚಾಂದ್ ಬಿಬಿ ಕಾಲೇಜಿನ ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ ದೊಣ್ಣೂರ್ ಅವರು ಮಾತನಾಡಿ, ಕಿವುಡತನ ಹಾಗೂ ಶ್ರವಣೇಂದ್ರಿಯ ದೋಷವುಳ್ಳ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಬೆರೆಯುವುದು ಕಷ್ಟಕರ. ಅಂಧರು ಯೋಚನೆ, ಜ್ಞಾನ, ತಿಳಿವಳಿಕೆ ಶಕ್ತಿ ಇರುವುದರಿಂದ ಕಣ್ಣು ಕಾಣದಿದ್ದರೂ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳಬಹುದು. ಆದರೆ, ಕಿವುಡರಿಗೆ ಕಷ್ಟಕರ. ಅವರಿಗೆ ಭಾವನೆ ವ್ಯಕ್ತಪಡಿಸಲು ಆಗಲ್ಲ. ಹೀಗಾಗಿ, ಇಂತಹ ಶಾಲೆಗೆ ಹೆಚ್ಚೆಚ್ಚು ಭೇಟಿ ನೀಡಿ ನಮ್ಮಿಂದಾದಷ್ಟು ಸಹಾಯ ಮಾಡೊಣ ಎಂದರು.

ನಾಲ್ಕುಚಕ್ರ ಮುಖ್ಯಸ್ಥರಾದ ಮಾಲಾ ಕಣ್ಣಿ ಮಾತನಾಡಿ, ಸತತ 5-6 ವರುಷಗಳಿಂದ ಈ ಶಾಲೆಗೆ ಬರುತಿದ್ದೆವೆ ಇಲ್ಲಿಯ ಕುಂದು ಕೊರತೆಗಳನ್ನು ನೀಗಿಸಲು ನಮ್ಮಿಂದಾದಷ್ಟು ಸಹಾಯ ಮಾಡುತ್ತ ಬರುತಿದ್ದೆವೆ ಅದರಂತೆ ದಾನಿಗಳ ಸಹಾಯದಿಂದ ಕಳೆದ ವರುಷವೂ ದಿನಸಿ ಸಾಮಗ್ರಿಗಳನ್ನು ನೀಡಿದ್ದೆವೆ ಅದರಂತೆ ಈ ವರುಷವೂ ಅಕ್ಕಿ, ತೊಗರಿಬೆಳೆ, ಎಣ್ಣೆ, ರವಾ, ರೊಟ್ಟಿ ಸೇರಿದಂತೆ 28,725 ರೂ ಸಾಮಗ್ರಿಗಳನ್ನು ಒದಗಿಸಿಕೊಡಲಾಗಿದೆ ಮಕ್ಕಳಿಗೆ ಯಾವುದೇ ತೊಂದರೆಯಾಗದೇ ಆರಾಮಾಗಿ ಪ್ರವಾಸ ಹೋಗಿಬರಲಿ ಎಂಬುವುದು ನಮ್ಮ ಆಶಯ ಎಂದರು.

ಈ ಸಂದರ್ಭದಲ್ಲಿ‌ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಣುಕಾ ನಾಟಿಕರ್, ಜ್ಯೋತಿ ಹೆಬ್ಬಾಳ್, ಅಂಬಾದಾಸ್ ನಾಲ್ಕುಚಕ್ರ ತಂಡದ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಅಜಿತ್ ಘಾಟಗೆ, ಪರಮೇಶ್ವರ ಎಳಮೇಲಿ ಬಸವಂತರಾಯ ಕೊಳಕೂರ್, ಶರಣಬಸಪ್ಪ ಜಂಗಿನಮಠ, ಗುರು ಪಾಟೀಲ್, ಆನಂದತೀರ್ಥ ಜೋಶಿ, ಲಿಂಗರಾಜ್ ಡಾಂಗೆ, ನಾಗರಾಜ್ ಹೆಂಬಾಡಿ, ಸುಭಾಷ್ ಮೇತ್ರೆ, ವಿಜಯಲಕ್ಶ್ಮಿ ಹಿರೆಮಠ, ಸಂಗಿತಾ ಕೊರಳ್ಳಿ, ಸಾವಿತ್ರಿ ಕೊರಳ್ಳಿ, ಜ್ಯೋತಿ ಪಂಚಾಳ್, ಮೇಘಾ ದೇಶಮುಖ್, ಸುಷ್ಮಾ ದೇಶಮುಖ್, ವಸುಧಾ ಡಿಗ್ಗಿಕರ್, ಅನಿತಾ, ಸುಷ್ಮಾ ಭುಸ್ಗಿಕರ್ ಇನ್ನಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here