ಕಲಬುರಗಿ: ಇತ್ತಿಚೆಗೆ ಕಿಣ್ಣಿ ಸಡಕ ಸುವರ್ಣ ಜಯತೀರ್ಥ ಪಾಟೀಲ ದಂಪತಿಗಳಿಂದ ಧರಿನಾಡಿನ ಹೆಸರಾಂತ ಸೆಲೆಬ್ರಿಟಿ ಆಂಕರ್ ಎಂದೆ ಹೆಸರಾದ ಕನ್ನಡದ ಖ್ಯಾತ ನಿರೂಪಕ ಯುವ ಸಾಹಿತಿ ಡಾ. ಎಸ್.ಎಮ್.ಭಕ್ತ ಕುಂಬಾರ ರವರಿಗೆ ಇತ್ತೀಚೆಗಷ್ಟೇ ಅಮೇರಿಕಾ ದೇಶದ ವೈದಿಕ್ ಇಂಟನ್ರ್ಯಾಷನಲ್ ಕಲ್ಚರಲ್ ವಿಶ್ವ ವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಲಭಿಸಿರುವ ಪ್ರಯುಕ್ತವಾಗಿ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸುವರ್ಣ ಜಯತಿರ್ಥ ಪಾಟೀಲ ಪರಿವಾರದ ವತಿಯಿಂದ 5 ಗ್ರಾಂ ಚಿನ್ನದ ಉಂಗುರವನ್ನು ಕಾಣಿಕೆಯಾಗಿ ನಿಡಿ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಡಾ. ಎಸ್.ಎಮ್.ಭಕ್ತ ಕುಂಬಾರ ರವರು ಆಡು ಮುಟ್ಟದ ಸೊಪ್ಪಿಲ್ಲ ಇವರು ಮಾಡಿದೆ ಇರುವಂತ ಕಾಯಕ ಇಲ್ಲ ಎನ್ನುವ ಗಾದೆ ಮಾತು ಇವರಿಗೆ ಸತ್ಯಕ್ಕೆ ಹತ್ತಿರವಾಗುತ್ತದೆ ಭಕ್ತ ಕುಂಬಾರ ರವರು ಕೆವಲ ನಿರೂಪಣೆಗೆ ಅಷ್ಟೇ ಸಿಮಿತ ಅಲ್ಲ ಇವರು ಈ ಸಮಾಜಕ್ಕೆ ಸುಂದರವಾದ ಸಂದೇಶಗಳನ್ನು ಸಾರುವ ವ್ಯಕ್ತಿತ್ವದ ವ್ಯಕ್ತಿ ಕೂಡ ಆಗಿದ್ದಾರೆ.
ಈಗಿನ ಅನೇಕ ಯುವಕರಿಗೆ ಮಾದರಿ ಕೂಡ ಆಗಿದ್ದಾರೆ ಇವರ ನಿರ್ದೇಶನದ ನಿರೂಪಣೆಯು ಪ್ರತಿಯೊಂದು ಕಾರ್ಯಕ್ರಮಕ್ಕೂ ಕೂಡ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಬಸವ ಕಲ್ಯಾಣದ ಪೂಜ್ಯ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಹಾರಾಜರು ತಮ್ಮ ಆಶಿರ್ವಚನದಲ್ಲಿ ನುಡಿದರು.
ಇದೆ ವೇಳೆ ಸೊಂತ ಹಾಗೂ ಕಲಮೂಡದ ಪೂಜ್ಯ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ದಿವ್ಯ ಸಾನಿಧ್ಯದವನ್ನು ವಹಿಸಿದರು. ಬೀದರನ ಶ್ರೀ ಅಮೃತಪ್ಪ ದೇವಿ ಮುತ್ಯಾ ಪೀಠಾಧಿಪತಿಗಳು ಕೌಠಾ, ವೇದ ಮೂರ್ತಿ ವಿರುಪಾಕ್ಷಯ್ಯ ಸ್ವಾಮಿ ನಿಲಾ ಸೊಂತ, ಮಾತೋಶ್ರೀ ಕಸ್ತೂರಿಬಾಯಿ ಅಮ್ಮ ಹಾಗೂ ಹಾಸ್ಯ ಕಲಾವಿದ ರಾಚಯ್ಯ ಸ್ವಾಮಿ ಖಾನಾಪುರ, ಅನಿಲಕುಮಾರ ಭಕ್ತಾ-ಜಿ, ಸಾಯಿನಾಥ್ ಪಾಟೀಲ, ಅಭಿಷೇಕ ಪಾಟೀಲ, ಶಿವಶಂಕರ್ ಪಾಟೀಲ, ರವಿ ಸ್ವಾಮಿ, ವಸಂತ್ ಪಾಟೀಲ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.