ಕಲಬುರಗಿ: ಹೊಸ ವಷ೯ದ ಕೊಡುಗೆ ಅಂಗವಾಗಿ ಸಕಾ೯ರಿ ಅಂಧ ಬಾಲಕರ ವಸತಿ ಶಾಲೆಗೆ ದಾನಿಗಳು ನೀಡಿರುವ 12 (NVD & JOS) ತಂತ್ತ್ರಾಂಶದಿಂದ ಕೂಡಿದ ಅಂಧ ಮಕ್ಕಳ ಕಲಿಕೆಗೆ ಅನುಕೂಲವಾಗುವಂತಹ ಗಣಕಯಂತ್ರಗಳನ್ನು ಸೋಮವಾರ ಮಕ್ಕಳ ಸಮ್ಮುಖದಲ್ಲಿ ಕಂಪ್ಯೂಟರ್ ಲ್ಯಾಬ್ ಹಾಗೂ ಬ್ರೈಲ್ ಲೈಬ್ರರಿ ಯನ್ನು ಅಂಧ ಮಕ್ಕಳ ಕಲಿಕೆಗಾಗಿ ಹಸ್ತಾಂತರಿಸಲಾಯಿತು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸರಕಾರಿ ಅಂಧ ಬಾಲಕರ ಪ್ರೌಢ ಶಾಲೆಯ ಅಧೀಕ್ಷರಾದ ಸಾದಿಕ್ ಹುಸೇನ್ ಖಾನ್ ಕಂಪ್ಯೂಟರ್ ಲ್ಯಾಬ್ ಮತ್ತು ಲೈಬ್ರರಿ ಉದ್ಘಾಟಸಿಸಿದರು.
ಈ ಸಂಧರಾಭದಲ್ಲಿ ಶ್ರೀಮತಿ ಸಂಗಮ್ಮ, ಶಾಂತಪ್ಪ, ಘಾಲೆಪ್ಪ, ಬಾಳು ಜಾಧವ, ಜಗದೀಶ್ ನಾಯಕ, ಪ್ರಕಾಶ ಭಜಂತ್ರಿ, ಶ್ರೀಕಾಂತ್, ಜಯಶ್ರೀ, ಸ್ಮಿತಾ ಹಿರೇಮಠ, ಜಾಫರ್ ಅಲಿ, ಪ್ರಿಯಾ, ಉಮೇಶ್, ಅಫಜಲ್ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.