ಕಲಬುರಗಿ: ಎಲ್ಲರಿಗೂ ಜ್ಞಾನದ ದಾಸೋಹ, ಪ್ರಕೃತಿ ಸೌಂದರ್ಯ ಪ್ರಜ್ಞೆ, ನಿಸರ್ಗ ಆರಾಧನೆ, ಭಕ್ತರಿಗೆ ಪ್ರವಚನದ ಮೂಲಕ ಪ್ರೇರಣೆ ನೀಡಿದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಎಂದು ದಕ್ಷಿಣ ಮತಕ್ಷೇತ್ರದ ಶಾಸಕರು ಶ್ರೀ ಅಲ್ಲಮಪ್ರಭು ಪಾಟೀಲ ಹೇಳಿದರು.
ನಡೆದಾಡುವ ದೇವರು ಜ್ಞಾನರತ್ನ ಪ್ರವಚನದ ಹರಿಕಾರ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ದಿನ ಇಂದು ಶ್ರೀ ಸಿದ್ಧರಾಮೇಶ್ವರ ವೃತ್ತ ಉದನೂರ ಕ್ರಾಸ್ ಹತ್ತಿರ ಆಚರಣೆ ಮಾಡಲಾಯಿತು.
ಭಕ್ತರು, ಸಾಮಾಜಿಕ, ರಾಜಕೀಯ, ಧಾರ್ಮಿಕ, ಮುಖಂಡರುಗಳಾದ ಹುಲ್ಲಕಂಠರಾಯ ಅರಳಗೂಂಡಗಿ, ಹಣಮಂತರಾಯಗೌಡ, ನಾನಾಗೌಡ ಕೂಡಿ, ಚಂದ್ರಪ್ಪ ಅಣ್ಣ, ಮಹಾಂತೇಶ ಪಾಟೀಲ, ಬಸವರಾಜ ಮರತೂರ, ದೇವಿಂದ್ರಪ್ಪ ಕೋಳಕೂರ, ಶಿವಕುಮಾರ ಬಿದರಿ, ಶಿರರೆಡ್ಡಿ, ನಾಸಿ ನಾಯ್ಕಲ್, ಮಲ್ಲು ಪೋಲಿಸ್, ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ, ಮಂಜುನಾಥ ವಿಭೂತಿ, ಸಿದ್ದಲಿಂಗ (ಸಮರ್ಥ) ದೇವರಮನಿ, ರಾಜು ನೆಲೋಗಿ, ಕೋರೆ ವಕೀಲರು, ನಿಂಗಪ್ಪ ಪೂಜಾರಿ, ಪ್ರಭು ಅವಂಟಿ, ಡಾ. ಅಳಗಿ, ನಾಗನಗೌಡ ಚಿತ್ತಾಪುರ, ಎಂ.ಬಿ.ಪಾಟೀಲ, ಬಿ.ಎಂ.ಪಾಟೀಲ ಕಲ್ಲೂರ, ಹೋಟೆಲ್ ಪೂಜಾರಿ, ನಾಯಕ ಇತರರು ವಾಯು ವಿಹಾರ ಸಹೃದಯಿ ಬಳಗದವರು ಉಪಸ್ಥಿತರಿದ್ದರು.