ಜ.7 ರಂದು ಬಸವಕಲ್ಯಾಣದಲ್ಲಿ ಸಮಾನತೆ ಸಮಾವೇಶ

0
168

ಕಲಬುರಗಿ: ಬಸವಾದಿ ಶರಣರು,ಸರ್ವ ಧರ್ಮ ಮನುಕುಲದ ಚಿಂತಕರು,ಸಮಾನತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮಹಾನ್ ಪೂಜ್ಯರು ಆದ ಡಾ. ಸಿದ್ಧರಾಮ ಬೆಲ್ದಾಳ ಶರಣರ ನೇತೃತ್ವದಲ್ಲಿ ಬಸವ ಮಹಾಮನೆ ಟ್ರಸ್ಟ್ ವತಿಯಿಂದ 7 ರಂದು ಭಾನುವಾರ ಮಧ್ಯಾಹ್ನ 1 ಗಂಟೆಗೆ ಬಸವಕಲ್ಯಾಣದಲ್ಲಿ ಬ್ರಹತ್ ಸಮಾನತೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಸಮಾನತೆ ಸಮಾವೇಶದ ಕಲಬುರಗಿ ಘಟಕದ ಸಂಯೋಜಕ ಲಿಂಗರಾಜ ಸಿರಗಾಪೂರ ತಿಳಿಸಿದ್ದಾರೆ.

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿ ನಡೆದ
ಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾ ಗುರು ಬಸವಣ್ಣನವರು ಹಾಗೂ ಸಕಲ ಶರಣರು ಸರ್ವ ಸಮಾನತೆಯನ್ನು ಸಾರಿದ್ದಾರೆ.ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರವರು ಸಂವಿಧಾನದ ಮೂಲಕ ಸಮಾನತೆ ಸಾಮಾಜಿಕ ನ್ಯಾಯವನ್ನು ಕಾನೂನು ಬದ್ಧಗೊಳಿಸಿದ್ದಾರೆ.ಆದರೂ ಪ್ರಸ್ತುತ ಪ್ರಸಂಗದಲ್ಲಿ ಬಸವಾದಿ ಶರಣರ ವಚನಗಳ ಸಮಾನತೆ ಸಂದೇಶ ಆಚರಣೆಯಲ್ಲಿ ಬರುತ್ತಿಲ್ಲ.

Contact Your\'s Advertisement; 9902492681

ಅಸಮಾನತೆ ಶೋಷಣೆ,ಹತಾಶೆ ಬೆಳೆಯುತ್ತಲಿದೆ.ಇದಕ್ಕೆ ಸಕಲ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕ, ಮಾನವಿಯತೆ ಮತ್ತು ಸಮಾನತೆ ಭಾವನೆ ಮುಖ್ಯವಾಗಿರಬೇಕಾಗಿದೆ.ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾನತೆ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಬಸವ ನಾಡು ಬಸವಕಲ್ಯಾಣದಲ್ಲಿ ಇದೊಂದು ಮಾದರಿ ಸಮಾವೇಶ ಆಗಲಿದೆ ಎಂದರು.

ಸಮಾವೇಶದಲ್ಲಿ ನಾಡಿನ ಪೂಜ್ಯರು, ಧಾರ್ಮಿಕ ಮುಖಂಡರು, ಸಚಿವರು, ಶಾಸಕರು, ರಾಜಕೀಯ ಧುರೀಣರು,ಬುದ್ಧಿ ಜೀವಿಗಳು, ಚಿಂತಕರು, ಸಾಹಿತಿಗಳು, ವಿವಿಧ ಸಂಘಟನೆಗಳ ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.ಅದರಂತೆ ವಿವಿಧ ಜಿಲ್ಲೆಗಳಿಂದಲೂ ಅನೇಕರು ಆಗಮಿಸಲಿದ್ದಾರೆ.ಆದ್ದರಿಂದ ಶರಣರ ನಾಡಾದ ಕಲಬುರಗಿ ಜಿಲ್ಲೆಯ ಬಸವಾದಿ ಶರಣರು, ಚಿಂತಕರು, ಸಾಹಿತಿಗಳು, ರಾಜಕೀಯ ಮುಖಂಡರು,ಬುದ್ಧಿ ಜೀವಿಗಳು, ಹೋರಾಟಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಯೋಜಕ ಡಾ.ಎ.ಎಸ್.ಭದ್ರಶೆಟ್ಟ,ಬಿ.ಬಿ.ನಿಂಗಪ್ಪ, ಶಾಂತಪ್ಪ ಕಾರಭಾಸಗಿ,ರಾಜೆ ಶಿವಶಂಕರ್, ಅಬ್ದುಲ್ ರ‌ಹೀಂ ಸುದ್ದಿಗೋಷ್ಠಿಯಲ್ಲಿ ಇದ್ಧರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here