ಜ.7ಕ್ಕೆ ಬಸವಕಲ್ಯಾಣದಲ್ಲಿ ಸಮಾನತಾ ಸಮಾವೇಶ; ಸರ್ವರಿಗೂ ಆಹ್ವಾನ

0
52

ಕಲಬುರಗಿ: ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಸಮಾನತಾ ಸಮಾವೇಶ ಬಸವಾದಿ ಶರಣರ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಸಿದ್ದಾಂತದಂತೆ ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಸಾಮರಸ್ಯದ ಸಮಾನತೆ ನಿರ್ಮಾಣ ಅಗತ್ಯತೆ ಕುರಿತು ಬಸವ ಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಪಕ್ಕದಲ್ಲಿ ಜೆ.7ರಂದು ಸಮಾನತಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಕ್ಷೇತ್ರಗಳ ನಾಗರಿಕರು ಮತ್ತು ಯುವಕರು, ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲು ಪೂಜ್ಯ ಡಾ.ಬೆಲ್ದಾಳ ಶರಣರು ಸಭೆಗೆ ತಿಳಿಸಿದರು.

ಹಿರಿಯ ನಾಯಕರಾದ ಬಾಬು ಹೊನ್ನಾನಾಯಕ ರವರು ಮಾತ್ನಾಡಿ ಈ ಮಹತ್ವದ ಸರ್ವ ಜನಾಂಗದ ಕಾರ್ಯಕ್ರಮಕ್ಕೆ ಬಸವ ಕಲ್ಯಾಣ ಸುತ್ತಲಿನ ಪ್ರತಿ ಗ್ರಾಮಗಳ ಜನರು ಭಾಗವಹಿಸಲು ಮನವಿ ಮಾಡಿಕೊಂಡರು.

Contact Your\'s Advertisement; 9902492681

ನಾಡಿನ ಪೂಜ್ಯರು ಹಾಗೂ ರಾಜ್ಯದ ಆರು ಜನ ಮಂತ್ರಿಗಳು ಜಿಲ್ಲೆಯ ಎಲ್ಲಾ ಶಾಸಕರು ಆಯಾ ಕ್ಷೇತ್ರದ ಗಣ್ಯರು ಭಾಗವಹಿಸುವುದರಿಂದ ಬೀದರ ಜಿಲ್ಲೆ ಸೇರಿದಂತೆ ಬಸವಕಲ್ಯಾಣ ಮತ ಕ್ಷೇತ್ರದ ಸಹಸ್ರಾರು ಜನರು ಸ್ವಾಭಿಮಾನದಿಂದ ಭಾಗವಹಿಸಲು ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರು ಸಭೆಗೆ ಮನವಿ ಮಾಡಿದರು.

ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಅನ್ನಪೂರ್ಣ ಭಾಯಿ ಸಂಗೋಳಕರ್ ಈ ರಚನಾತ್ಮಕ ಪ್ರಗತಿಪರ ವಿಚಾರಧಾಯ ಕಾರ್ಯ ಕ್ರಮಕ್ಕೆ ಮಹಿಳೆಯರು ಸೇರಿದಂತೆ ತಾಲೂಕಿನ ಸುತ್ತಲಿನ ಮಹಿಳೆಯರು ಆಯಾ ಕ್ಷೇತ್ರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಾವು ವಿಶೇಷ ಮುತುವರ್ಜಿ ವಹಿಸುವದಾಗಿ ಹೇಳಿದರು.

ಮನೋಹರ ಮೈಸೆ,ಸಿಕಂಧರ ಸಿಂಧೆ, ನೀಲಕಂಠ ಬೆಂಡೆ, ವಿಜಯಕುಮಾರ್ ಡಾಂಗೆ, ಮಹಾದೇವ ಗಾಯಕವಾಡ, ಗೌತಮ್ ಜಾಂತೆ,ಜೈಸೇನ್ ಪ್ರಸಾದ್, ಮನೋಜ್ ಮಂಠಾಳ,ಪುಲಿಂದ ಹುಭಾರೆ, ಮಾತ್ನಾಡಿ ಈ ಬೃಹತ್ ಸಮಾವೇಶದಲ್ಲಿ ಸಹಸ್ರಾರು ಜನರು ಸೇರಿಸಲು ತಾವೆಲ್ಲರೂ ಬದ್ಧತೆಯಿಂದ ಶ್ರಮಿಸುವ ಬಗ್ಗೆ ವಿವರಿಸಿದರು.

ಸ್ವಾಭಿಮಾನದ ಪ್ರತೀಕವಾದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲು ತಹಸೀಲ್ದಾರರಾದ ಶಿವಾನಂದ ಮೈತ್ರೆ ಕೋರಿದರು.

ಈ ಮಹತ್ವದ ಸಭೆಯಲ್ಲಿ ನರಸಿಂಗರೆಡ್ಡಿ ಗದ್ಲೇಗಾವ್ , ಅಬ್ದುಲ್ ರಹೀಂ, ರಾಜೇ ಶಿವಶರಣ, ಶಿವಕುಮಾರ್ ಬೆಲ್ದಾಳ, ಶಿವರಾಜ ಮಾಳ್ಗೆ , ನಾಮದೇವ ಹೊಸಮನಿ ಸೇರಿದಂತೆ ನೂರಾರು ಜನ ಆಯಾ ಕ್ಷೇತ್ರದ ನಾಗರಿಕರು ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here