ಕೂಸಿನ ಮನೆ ಆರೈಕೆದಾರರ ತರಬೇತಿ: ಇಓ ಬಸವರಾಜ ಸಜ್ಜನ್ ಚಾಲನೆ

0
19

ಸುರಪುರ: ನಗರದ ತಾಲೂಕು ಪಂಚಾಯತಿಯ ಸಾಮಥ್ರ್ಯ ಸೌಧದಲ್ಲಿ ಜಿ.ಪಂ ಯಾದಗಿರಿ, ತಾ.ಪಂ ಸುರಪುರ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗ್ರಾ.ಪಂ ಕೂಸಿನ ಮನೆಗಳ ಶಿಶು ಆರೈಕೆದಾರರಿಗಾಗಿ ಹಮ್ಮಿಕೊಂಡ ತರಬೇತಿ ಕಾರ್ಯಗಾರವನ್ನು ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ ರವರು ಸಸಿಗೆ ನೀರುಣ್ಣಿಸುವ ಮೂಲಕ ಚಾಲನೆ ನೀಡಿದರು.

ನಂತರ ತರಬೇತಿ ಕಾರ್ಯಾಗಾರದಲ್ಲಿ ಶಿಶು ಆರೈಕೆದಾರರಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷದ ಶುಭಾಶಯಗಳು ತಿಳಿಸಿದರು,ಈ ಸಂದರ್ಭದಲ್ಲಿ ಇಓ ಬಸವರಾಜ ಸಜ್ಜನ್ ಮಾತನಾಡಿ,ಸರಕಾರ ಕೂಸಿನ ಮನೆ ಯೋಜನೆಯನ್ನು ಜಾರಿಗೊಳಿಸಿದ್ದು,ಇದನ್ನು ತುಂಬಾ ಮುತುವರ್ಜಿಯಿಂದ ನಿರ್ವಹಿಸಬೇಕಿದೆ,ತರಬೇತಿಯಲ್ಲಿ ಎಲ್ಲಾ ಆರೈಕೆದಾರರು ತಮಗೆ ತಿಳಿಸುವ ಚಟುವಟಿಕೆಗಳನ್ನು ಸರಿಯಾಗಿ ಅರಿತುಕೊಳ್ಳುವಂತೆ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸುರಪುರ ತಾಪಂ ಮಾನ್ಯ ಸಹಾಯಕ ನಿರ್ದೇಶಕರಾದ ರವಿಚಂದ್ರ ರಡ್ಡಿ, ಮಾಸ್ಟರ್ ಟ್ರೇನರ್ ಚಿದಾನಂದ ಸ್ವಾಮಿ, ವಿಜಯಲಕ್ಷ್ಮೀ, ಸಂಗಮ್ಮ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಸಾವಿತ್ರಿ ಗಾಳಿ ಸೇರಿದಂತೆ ಸುರಪುರ ಹಾಗೂ ಹುಣಸಗಿ ತಾ.ಪಂ ವ್ಯಾಪ್ತಿಯ ಗ್ರಾ.ಪಂ ಗಳ ಕೂಸಿನ ಮನೆಗಳ ಶಿಶು ಆರೈಕೆದಾರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here