ಜನವರಿ ಒಳಗಾಗಿ ಗುತ್ತಿಗೆದಾರರ ಶೇ. 25ರಷ್ಟು ಹಣ ಬಿಡುಗಡೆ

0
24

ಕಲಬುರಗಿ: ಮಾರ್ಚ್ 24ರ ಒಳಗಾಗಿ ಗುತ್ತಿಗೆದಾರರ ರಾಜ್ಯ ಮಟ್ಟದ ಸಮವೇಶ ನಡೆಯಲಿದ್ದು, ಆ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಗವಹಿಸಲು ಒಪ್ಪಿರುತ್ತಾರೆ. ಈ ಸಮಾವೇಶದಲ್ಲಿ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್‍ನ ಕೆಂಪಣ್ಣ ಅವರನ್ನು ಸನ್ಮಾನಿಸ¯ಉ ನಿರ್ಧರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಗನ್ನಾಥ ಶೇಗಜಿ ತಿಳಿಸಿದರು.

ಡಿ. 20ರಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗೂ ಪದಾದಿಕಾರಿಗಳ ಜೊತೆ ಲೋಕೋಪಯೋಗಿ ಇಲಾಖೆ ಸಚಿವರು ಸಭೆ ನಡೆಸಿ ಗುತ್ತಿಗೆದಾರರ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಹಿಂದಿನ ಸರ್ಕಾರದಲ್ಲಿ ಶೇ. 40 ಕಮಿಷನ್ ಭ್ರಷ್ಟಾಚಾರ ಕುರಿತಂತೆ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ ಜಸ್ಟಿಸ್ ನಾಗಮೋಹನದಾಸ್ ಸಮಿತಿ ರಚಿಸಲಾಗಿದ್ದು, ಆಯೋಗದ ವರದಿಯ ನಂತರ ಎಲ್ಲವೂ ಬಯಲಾಗಲಿದೆ ಎಂದು ಅವರು ತಿಳಿಸಿದರು.
ಆನವರಿ ತಿಂಗಳ ಒಳಗಾಗಿ ಗುತ್ತಿಗೆದಾರರ ಶೇ. 25ರಷ್ಟು ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪಿಕೊಂಡಿದ್ದು, ಹೆಚ್ಚುವರಿ ಜಿಎಸ್‍ಟಿ ಶೇ. 6 ರಷ್ಟು ಮೊತ್ತ ಸರ್ಕಾರದಿಂದ ಭರಿಸುವ ಬಗ್ಗೆ ಸಚಿವರು ಆಯಾ ಇಲಾಖೆಯ ಮುಖ್ಯ ಇಂಜಿನಿಯರ್‍ಗಳಿಗೆ ಪೂರÀಕ ಒಪ್ಪಂದ ಮಾಡಲು ಆದೇಶ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಇದಲ್ಲದೆ ಗುತ್ತಿಗೆದಾರರ ಇತರ ವಿಷಯಗಳ ಕುರಿತು ಸವಿಸ್ತರವಗಿ ಚರ್ಚಿಸುವ ಮೂಲಕ ಗುತ್ತಿಗೆದಾರರರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು. ಜಿಲ್ಲಾ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಸಂಜಯ ಆರ್.ಕೆ. ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here